ನವದೆಹಲಿ: ಕೇಂದ್ರದ ‘ಮೇಕ್ ಇನ್ ಇಂಡಿಯಾ’ ಅಭಿಯಾನಕ್ಕೆ ಮಹತ್ವದ ಉತ್ತೇಜನ ದೊರೆಯುವಂತಹ ಬೆಳವಣಿಗೆ ನಡೆದಿದೆ. ಭಾರತದ ಆಟೋಮೊಬೈಲ್ ದಿಗ್ಗಜ ಹೂಂಡೈ ಮೋಟಾರ್ ಇಂಡಿಯಾ (ಎಚ್ಎಂಐಎಲ್) ಎರಡು ಲಕ್ಷ ಯೂನಿಟ್ ‘ಮೇಡ್-ಇನ್-ಇಂಡಿಯಾ’ ಕಾಂಪ್ಯಾಕ್ಟ್ ಎಸ್ಯುವಿ ಕ್ರೆಟಾವನ್ನು ರಫ್ತು ಮಾಡಿರುವುದಾಗಿ ಘೋಷಣೆ ಮಾಡಿದೆ.
“ಕ್ರೆಟಾ ಸಾಧಿಸಿದ 2,00,000 ರಫ್ತು ಮೈಲಿಗಲ್ಲು ಹೂಂಡೈನ ‘ಮೇಕ್ ಇನ್ ಇಂಡಿಯಾ, ಮೇಡ್ ಫಾರ್ ದಿ ವರ್ಲ್ಡ್’ ಗೆ ಬದ್ಧತೆಗೆ ಸಾಕ್ಷಿಯಾಗಿದೆ” ಎಂದು ಹ್ಯುಂಡೈ ಮೋಟಾರ್ ಇಂಡಿಯಾದ ಎಂಡಿ ಮತ್ತು ಸಿಇಒ ಎಸ್ಎ.ಸ್ ಕಿಮ್ ಹೇಳಿದ್ದಾರೆ.
“ತಮಿಳುನಾಡಿನಲ್ಲಿರುವ ಹೂಂಡೈನ ನಮ್ಮ ಅತ್ಯಾಧುನಿಕ ಘಟಕವು ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಜಾಗತಿಕ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುತ್ತಿದೆ ಮತ್ತು ನಮ್ಮ ಗ್ರಾಹಕರಿಗೆ ಸಂತೋಷದ ಜೀವನವನ್ನು ನಡೆಸಲು ಗುಣಮಟ್ಟದ ಸಮಯವನ್ನು ಒದಗಿಸುತ್ತಿದೆ” ಎಂದಿದ್ದಾರೆ.
ಕಾಂಪ್ಯಾಕ್ಟ್ ಎಸ್ಯುವಿ 2015 ರಲ್ಲಿ ಬಿಡುಗಡೆಯಾಯಿತು.
2019 ರಲ್ಲಿ, ಹೂಂಡೈ ಮೋಟರ್ ಇಂಡಿಯಾ ದೇಶದ ನಿರ್ದಿಷ್ಟ ಆದ್ಯತೆ ಮತ್ತು ಬೇಡಿಕೆಗೆ ಅನುಗುಣವಾಗಿ 792 ಕಸ್ಟಮೈಸ್ ಮಾಡಿದ ರೂಪಾಂತರಗಳೊಂದಿಗೆ 1,81,200 ಯುನಿಟ್ಗಳನ್ನು ರಫ್ತು ಮಾಡಿದೆ.
ಭಾರತದಿಂದ ಆಗುವ ಪ್ರಯಾಣಿಕರ ಕಾರು ರಫ್ತಿನಲ್ಲಿ 2019 ರ ಅವಧಿಯಲ್ಲಿ ಕಂಪನಿಯು ಶೇಕಡಾ 26 ರಷ್ಟು ರಫ್ತು ಪಾಲನ್ನು ಹೊಂದಿತ್ತು.
ಇದಲ್ಲದೆ, ಹೂಂಡೈ 2020 ರಲ್ಲಿ ಮೂರು ದಶಲಕ್ಷ ವಾಹನ ರಫ್ತು ಮೈಲಿಗಲ್ಲನ್ನು ಮೀರಿದೆ, 88 ದೇಶಗಳಿಗೆ ಕಾರುಗಳನ್ನು ರಫ್ತು ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.