ನವದೆಹಲಿ: ಭಾರತಕ್ಕೆ ಈಗಾಗಲೇ ಮೊದಲ ಬ್ಯಾಚ್ನ ರಫೇಲ್ ಯುದ್ಧವಿಮಾನಗಳು ಆಗಮಿಸಿವೆ. ಇದೀಗ ಎರಡನೇ ಬ್ಯಾಚ್ ರಫೇಲ್ ಯುದ್ಧ ವಿಮಾನಗಳ ಆಗಮನಕ್ಕೆ ಸಿದ್ಧತೆ ನಡೆಯುತ್ತಿದೆ. ನವೆಂಬರ್ ತಿಂಗಳಲ್ಲಿ ಎರಡನೇ ಬ್ಯಾಚ್ನ ಯುದ್ಧ ವಿಮಾನಗಳನ್ನು ಸ್ವೀಕರಿಸಲು ಭಾರತೀಯ ವಾಯುಸೇನೆ ಸಜ್ಜಾಗಿದೆ ಎಂದು ವರದಿಗಳು ತಿಳಿಸಿವೆ.
ಫ್ರೆಂಚ್ ಕಂಪನಿ ಡೆಸಾಲ್ಟ್ ಆವಿಯೇಶನ್ ನವೆಂಬರ್ ತಿಂಗಳಲ್ಲಿ ಭಾರತಕ್ಕೆ 2ನೇ ಭಾಷೆಯ ರಫೆಲ್ ಯುದ್ಧ ವಿಮಾನಗಳನ್ನು ಹಸ್ತಾಂತರ ಮಾಡಲು ಸಿದ್ಧತೆ ನಡೆಸುತ್ತಿದೆ.
ಈ ನಿಟ್ಟಿನಲ್ಲಿ ವ್ಯವಸ್ಥಾಪಕ ವಿಷಯಗಳನ್ನು ನಿರ್ವಹಿಸಲು ಮತ್ತು ಸಂಯೋಜಿಸಲು ವಾಯುಸೇನೆ ನೇತೃತ್ವದ ತಜ್ಞರ ತಂಡವನ್ನು ಈಗಾಗಲೇ ಫ್ರಾನ್ಸಿಗೆ ಕಳುಹಿಸಿಕೊಡಲಾಗಿದೆ. ಪೈಲೆಟ್ಗಳಿಗೆ ಫ್ರಾನ್ಸಿನ ಸೆಂಟ್ ಡಿಜಿಯರ್ ವಾಯುನೆಲೆಯಲ್ಲಿ ಬ್ಯಾಚ್ಗಳಲ್ಲಿ ತರಬೇತಿ ನೀಡಲಾಗುತ್ತಿದೆ.
ಮೊದಲ ಬ್ಯಾಚ್ನ ರಫೇಲ್ ಯುದ್ಧ ವಿಮಾನಗಳನ್ನು ಜುಲೈ 29ರಂದು ಭಾರತ ಸ್ವೀಕರಿಸಿತ್ತು. ಸೆಪ್ಟೆಂಬರ್ 10ರಂದು ಅಂಬಾಲ ವಾಯುನೆಲೆಯಲ್ಲಿ ಇದನ್ನು ಭಾರತೀಯ ವಾಯುಸೇನೆಗೆ ಸೇರ್ಪಡೆಗೊಳಿಸಲಾಯಿತು.
ಭಾರತವು 36 ರಫೇಲ್ ಯುದ್ಧ ವಿಮಾನಗಳನ್ನು ಪಡೆಯಲು ಪ್ರಾನ್ಸ್ನೊಂದಿಗೆ ಸರ್ಕಾರದಿಂದ ಸರ್ಕಾರದ ನಡುವೆ ನೇರ ಒಪ್ಪಂದ ಮಾಡಿಕೊಂಡಿದೆ. 59 ಸಾವಿರ ಕೋಟಿ ರೂಪಾಯಿಗಳ ಒಪ್ಪಂದ ಇದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.