ಪುಲ್ವಾಮಾ: ಲೈನ್ ಆಫ್ ಕಂಟ್ರೋಲ್ (ಎಲ್ಒಸಿ) ಮತ್ತು ಕಾಶ್ಮೀರ ಗಡಿಯಲ್ಲಿ ನಿಯೋಜನೆಗೊಂಡಿರುವ ಭದ್ರತಾ ಪಡೆಗಳ ಮೇಲೆ ಗ್ರೆನೇಡ್ ಹಾಕಲು ಹೆಕ್ಸಾಕೋಪ್ಟರ್ಗಳನ್ನು ಭಯೋತ್ಪಾದಕರು ಬಳಕೆ ಮಾಡುವ ಬೆದರಿಕೆ ಇದೆ. ಈ ಹಿನ್ನೆಲೆಯ ಸಶಸ್ತ್ರ ಪಡೆಗಳು ಸೈನಿಕರಿಗೆ ಹೊಸ ತರಬೇತಿ ಕೋರ್ಸ್ಗಳನ್ನು ನೀಡಲು ಮುಂದಾಗಿವೆ. ಈಗ, ಭಾರತೀಯ ಸೇನೆಯು ತನ್ನ ಸೈನಿಕರಿಗೆ ಡ್ರೋನ್ಗಳನ್ನು ಹೇಗೆ ಸಾಯಿಸುವುದು ಎಂಬ ನಿಟ್ಟಿನಲ್ಲಿ ತರಬೇತಿಯನ್ನು ನೀಡಲು ಪ್ರಾರಂಭಿಸಿದೆ.
ದಂಗೆ ಮತ್ತು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಿಯೋಜಿಸಲಾಗಿರುವ ತನ್ನ ಸೈನಿಕರಿಗೆ ಭಾರತೀಯ ಸೇನೆಯು ಹೊಸ ತರಬೇತಿ ಮಾದರಿಯನ್ನು ಅಳವಡಿಸಿಕೊಂಡಿದೆ.
ನೈಜ ಜೀವನದ ಸನ್ನಿವೇಶಗಳ ಮೂಲಕ ವಿಶೇಷ ಯುದ್ಧ ತರಬೇತಿಯನ್ನು ನೀಡುವ 15 ಕಾರ್ಪ್ಸ್ ಬ್ಯಾಟಲ್ ಶಾಲೆಯ ತರಬೇತುದಾರರು, ಡ್ರೋನ್ಗಳಿಂದಾಗಿ ಹೊರಹೊಮ್ಮುತ್ತಿರುವ ಹೊಸ ಬೆದರಿಕೆಗಳನ್ನು ಹೇಗೆ ತಡೆಯುವುದು ಎಂಬುದರ ಕುರಿತು ಸೈನಿಕರಿಗೆ ಶಿಕ್ಷಣ ನೀಡುತ್ತಿದ್ದಾರೆ.
“ಉಗ್ರ ಕಾರ್ಯಾಚರಣೆಯ ಸಂದರ್ಭದಲ್ಲಿ ಡ್ರೋನ್ಗಳು ಒಡ್ಡುವ ಬೆದರಿಕೆಗಳ ವಿರುದ್ಧ ಹೋರಾಡಲು ತರಬೇತಿ ಪಡೆಯಲು ಬರುವ ಎಲ್ಲಾ ಸೈನಿಕರನ್ನು ನಾವು ಡ್ರೋನ್ ನಾಶ ಮಾಡುವಲ್ಲಿ ಪರಿಣತರನ್ನಾಗಿ ಮಾಡುತ್ತಿದ್ದೇವೆ. ಭಯೋತ್ಪಾದಕರು ಡ್ರೋನ್ಗಳನ್ನು ಬಳಸಬಹುದೆಂದು ಗುಪ್ತಚರ ಮಾಹಿತಿ ಸಿಕ್ಕಿದೆ. ಕಣಿವೆಯಲ್ಲಿನ ಭಯೋತ್ಪಾದಕ ಪೀಡಿತ ಪ್ರದೇಶದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿರುವ ಪಡೆಗಳು ಡ್ರೊನ್ ದಾಳಿಯ ಬೆದರಿಕೆಯನ್ನು ಹೊಂದಿವೆ. ಹೀಗಾಗಿ ಡ್ರೋನ್ ನಾಶಪಡಿಸುವ ತರಬೇತಿ ಅನಿವಾರ್ಯವಾಗಿದೆ” ಎಂದು ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.