ಬೀದರ್: ಕಳೆದ 3 ವರ್ಷಗಳಿಂದ ಅತಿ ಕಡಿಮೆ ಮಳೆಯಾಗುತ್ತಿರುವ ಪರಿಣಾಮ ಈ ಬಾರಿ ತೊಗರಿ ಬೇಳೆಯ ಬೆಲೆ ಗಗನಕ್ಕೇರಿದೆ. ತೊಗರಿ ಬೇಳೆ ಕ್ವಿಂಟಲ್ಗೆ 8 ಸಾವಿರ ದಾಟಿದ್ದು, ಮಾರುಕಟ್ಟೆ ಬೆಲೆ ಕೆ.ಜಿ.ಗೆ 120ರಿಂದ 140ಕ್ಕೆ ತಲುಪಿದೆ.
ಈ ವರ್ಷ ಕೂಡ ಮುಂಗಾರು ಹಿನ್ನಡೆಯಾಗಿದ್ದು ರೈತರು ಸಮಸ್ಯೆಗೆ ಸಿಲುಕುವಂತಾಗಿದೆ. ಜುಲೈ ತಿಂಗಳಲ್ಲಿ ಆಗಬೇಕಿದ್ದ ಬಿತ್ತನೆ ಆಗಸ್ಟ್ ತಿಂಗಳು ಬಂದರೂ ಶೇ.45 ಮಾತ್ರ ಆಗಿದೆ. ಇದರಿಂದಾಗಿ ತೊಗರಿ ಬೇಳೆ ಬೆಲೆ ಅತ್ಯಧಿಕ ಮಟ್ಟ ತಲುಪಿದೆ. ಕಳೆದ ವರ್ಷ ಕ್ವಿಂಟಲ್ಗೆ 4700ರೂ. ತಲುಪಿದ್ದು, ಈ ಬಾರಿ 8 ಸಾವಿರ ದಾಟಿ ದುಪ್ಪಟ್ಟಾಗಿದೆ.
ಮಾರುಕಟ್ಟೆಯಲ್ಲೂ ಬೆಲೆ ಏರಿಕೆಯಾಗುತ್ತಿದ್ದು, ಗ್ರಾಹಕರೂ ಕಂಗಾಲಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.