Tuesday, 19th November 2019
×
Home About Us Advertise With s Contact Us

ವಿದ್ಯುತ್ ಸಮಸ್ಯೆ ಬಗ್ಗೆ ಗುತ್ತಿಗಾರಿನಲ್ಲಿ ಮಾ.27 ರಂದು ಸಭೆ

14695_S_Massive.power.tariff.hike.Delhiಸುಬ್ರಹ್ಮಣ್ಯ : ಗುತ್ತಿಗಾರು ಪ್ರದೇಶದಲ್ಲಿ ಕಳೆದ ಕೆಲವು ಸಮಯಗಳಿಂದ ವಿದ್ಯುತ್ ಸಮಸ್ಯೆ ಕಂಡುಬಂದಿದೆ. ಹೀಗಾಗಿ ಈ ಬಗ್ಗೆ ಸಮಾಲೋಚನೆ ನಡೆಸಲು ಅಧಿಕಾರಿಗಳನ್ನು ಆಹ್ವಾನಿಸಿ ಮಾ.27 ರಂದು ಬೆಳಗ್ಗೆ 10-30 ಕ್ಕೆ ಗುತ್ತಿಗಾರಿನ ಗಿರಿಜನ ಸಭಾಭವನದಲ್ಲಿ ಸಭೆ ನಡೆಸಲು ಗುರುವಾರ ನಿರ್ಧರಿಸಲಾಗಿದೆ.

ಗುತ್ತಿಗಾರಿನಲ್ಲಿ ಕಳೆದ ಹಲವಾರು ಸಮಯಗಳಿಂದ ಲೋವೋಲ್ಟೇಜ್, ಅಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿರುವ ಕಾರಣದಿಂದ ಗುತ್ತಿಗಾರಿನ ವರ್ತಕರು, ಕೃಷಿಕರು ಹಾಗೂ ಬಳಕೆದಾರರು ಸಮಸ್ಯೆ ಎದುರಿಸುತ್ತಿದ್ದರು.ಈ ಬಗ್ಗೆ ವರ್ತಕ ಸಂಘದಿಂದ ಮನವಿ ಕೂಡಾ ಮೆಸ್ಕಾಂಗೆ ಸಲ್ಲಿಸಲಾಗಿತ್ತು. ಆದರೆ ಇದುವರೆಗೆ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಗುರುವಾರ ಗುತ್ತಿಗಾರು ವರ್ತಕ ಸಂಘ, ಯುವಕ ಮಂಡಲ ಗುತ್ತಿಗಾರು ಹಾಗೂ ಭಾರತೀಯ ಕಿಸಾನ್ ಸಂಘ ಮತ್ತು ಜನಹಿತ ವೇದಿಕೆ ಆಶ್ರಯದಲ್ಲಿ ಸಭೆ ನಡೆಸಲಾಯಿತು.

ಸಭೆಯಲ್ಲಿ ಬಳಕೆದಾರರ ಸಲಹೆಯಂತೆ ವಿದ್ಯುತ್ ಸಮಸ್ಯೆ ಬಗ್ಗೆ ಸಮಾಲೋಚನೆ ನಡೆಸಲು ಹಾಗೂ ಇಲ್ಲಿನ ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ ವಿವರಿಸಲು ಗುತ್ತಿಗಾರಿನಲ್ಲಿಯೇ ಅಧಿಕಾರಿಗಳ ಸಭೆ ನಡೆಸಲು ನಿರ್ಧರಿಸಲಾಯಿತು. ಹೀಗಾಗಿ ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಮಾ.27 ರಂದು ಗುತ್ತಿಗಾರಿನ ಗಿರಿಜನ ಸಭಾಭವನದಲ್ಲಿ ಸಭೆ ನಡೆಸಲು ನಿರ್ಧರಿಸಲಾಯಿತು.ಒಂದು ವೇಳೆ ಸಭೆಗೆ ಆಗಮಿಸಿದೇ ಇದ್ದರೆ , ಸಮರ್ಪಕ ಉತ್ತರ ನೀಡದೇ ಇದ್ದರೆ ತಕ್ಷಣವೇ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಯಿತು.

ಈ ಸಂದರ್ಭದಲ್ಲಿ ವರ್ತಕ ಸಂಘದ ಅಧ್ಯಕ್ಷ ವೆಂಕಟ್ರಮಣ ಕೇಂಬ್ರೋಳಿ, ಕಾರ್ಯದರ್ಶಿ ಬಿ.ಕೆ.ಶ್ರೀಧರ್,ಯುವಕ ಮಂಡಲ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ, ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಗಂಗಾಧರ ಭಟ್ ಪುಚ್ಚಪ್ಪಾಡಿ, ಯುವಕ ಮಂಡಲ ಕೋಶಾಧಿಕಾರಿ ಲೋಕೇಶ್ವರ ಡಿಆರ್. ಪ್ರಮುಖರಾದ ಉದಯಕುಮಾರ್ ಡಿಆರ್,ಮೋಹನ್ ಕುಮಾರ್ ಎಂಕೆ ಮೊದಲಾದವರು ಉಪಸ್ಥಿತರಿದ್ದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top
error: Content is protected !!