ನವದೆಹಲಿ: ಭಾರತ ಮತ್ತು ಕೆನಡಾ ನಡುವಿನ ದ್ವಿಪಕ್ಷೀಯ ಬಾಂಧವ್ಯಗಳು ಹಂಚಿಕೆಯ ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಹಲವು ಸಾಮಾನ್ಯ ಹಿತಾಸಕ್ತಿಯ ವಿಷಯಗಳಿಂದ ರೂಪುಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗುರುವಾರ ರಾತ್ರಿ ಕೆನಡಾದಲ್ಲಿ ನಡೆದ ಇನ್ವೆಸ್ಟ್ ಇಂಡಿಯಾ ಕಾನ್ಫರೆನ್ಸ್ ಅನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ದೇಶಿಸಿ ಅವರು ಮಾತನಾಡಿದರು.
ಕೆನಡಾವು ಅತಿ ದೊಡ್ಡ ಮತ್ತು ಅತಿ ಅನುಭವಿ ಮೂಲಸೌಕರ್ಯ ಹೂಡಿಕೆದಾರನಾಗಿದೆ ಎಂದು ಅಭಿಪ್ರಾಯಿಸಿದ ಮೋದಿ, ಕೆನಡಿಯನ್ ಪೆಂಶನ್ ಫಂಡ್ಸ್ ಭಾರತದಲ್ಲಿ ಹೂಡಿಕೆ ಆರಂಭಿಸಿದ ಮೊದಲಿಗನಾಗಿದೆ. ಹಲವು ಕೆನಡಾ ಸಂಸ್ಥೆಗಳು ಭಾರತದ ಹೆದ್ದಾರಿ, ವಿಮಾನ ನಿಲ್ದಾಣ ಮತ್ತು ಸರಕುಗಳಲ್ಲಿ ಸಾಕಷ್ಟು ಅವಕಾಶಗಳನ್ನು ಕಂಡುಕೊಂಡಿದೆ ಎಂದಿದ್ದಾರೆ.
ಉಭಯ ದೇಶಗಳ ನಡುವಿನ ವ್ಯಾಪಾರ ಮತ್ತು ಹೂಡಿಕೆಯು ಬಹು ಆಯಾಮದ ಬಾಂಧವ್ಯಕ್ಕೆ ಮಹತ್ವದ್ದಾಗಿದೆ ಎಂದಿದ್ದಾರೆ.
ಭಾರತದ ಯಶೋಗಾಥೆಯು ಇಂದು ಬಲಿಷ್ಠವಾಗಿದೆ ಮತ್ತು ಮುಂದೆಯೂ ಬಲಿಷ್ಠವಾಗಿರುತ್ತದೆ. ಭಾರತದಲ್ಲಿ ಇಂದು ವಿದೇಶಿ ನೇರ ಬಂಡವಾಳ ಹೂಡಿಕೆ ಉದಾರಗೊಂಡಿದೆ. ಮನಸ್ಥಿತಿ ಮತ್ತು ಮಾರುಕಟ್ಟೆ ಎರಡರಲ್ಲೂ ಭಾರತ ಮಹತ್ವದ ಬದಲಾವಣೆಗಳನ್ನು ಕಾಣುತ್ತಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.