ಚೆನ್ನೈ: 2021 ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಎಐಎಡಿಎಂಕೆ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರನ್ನು ಪಕ್ಷ ಆಯ್ಕೆ ಮಾಡಿದೆ.
ಈ ಸಂಬಂಧ ಘೋಷಣೆ ಮಾಡುವುದಕ್ಕೂ ಮೊದಲು, 11 ಸದಸ್ಯರನ್ನೊಳಗೊಂಡ ಸ್ಟೀರಿಂಗ್ ಕಮಿಟಿ ರಚನೆಗೆ ಪನ್ನೀರ್ಸೆಲ್ವಂ ಅವರು ಬೇಡಿಕೆ ಇಟ್ಟಿದ್ದಾಗಿಯೂ ಮೂಲಗಳು ತಿಳಿಸಿವೆ. 2017 ರಲ್ಲಿ ಎರಡು ಬಣಗಳು ವಿಲೀನವಾದ ಸಂದರ್ಭದಲ್ಲಿ ಒಎಸ್ಪಿ ಪಕ್ಷ ಸ್ಟೀರಿಂಗ್ ಸಮಿತಿ ಸ್ಥಾಪನೆಯ ಬಹುಮುಖ್ಯ ಬೇಡಿಕೆಯನ್ನು ಇಟ್ಟಿದ್ದು ಅಭ್ಯರ್ಥಿ ಘೋಷಣೆಗೂ ಮೊದಲು ಈ ಬೇಡಿಕೆ ಈಡೇರಿಸುವಂತೆ ಪನ್ನೀರ್ಸೆಲ್ವಂ ಬೇಡಿಕೆ ಇಟ್ಟಿದ್ದರು ಎಂದು ಮೂಲಗಳು ಹೇಳಿವೆ.
ಈ ಸ್ಟೀರಿಂಗ್ ಕಮಿಟಿ ರಚನೆಗೆ ಸಂಬಂಧಿಸಿದಂತೆ ನಾಯಕರಾದ ಪಿ. ತಂಗಮಣಿ, ಎಸ್ ಪಿ ವೇಲುಮಣಿ, ಡಿ ಜಯಕುಮಾರ್, ಕೆ ಪಿ ಮುನಿಸಾಮಿ, ಆರ್ ವೈತಿಲಿಂಗಂ ಸೇರಿದಂತೆ ಇನ್ನೂ ಹಲವರು ಅನೇಕ ಸುತ್ತಿನ ಮಾತುಕತೆ ನಡೆಸಿದ್ದರು. ಇದೀಗ ಪಳನಿಸ್ವಾಮಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡಲು ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದೂ ಮೂಲಗಳು ಹೇಳಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.