ನವದೆಹಲಿ: ಕೊರೋನಾ ಲಾಕ್ಡೌನ್ನಿಂದಾಗಿ ಸ್ಥಗಿತವಾಗಿದ್ದ ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್ಗಳು ತೆರೆಯಲು ಅನ್ಲಾಕ್ 5ರಲ್ಲಿ ಅವಕಾಶ ನೀಡಲಾಗಿದ್ದು, ಚಿತ್ರಮಂದಿರ ತೆರೆಯಲು ಕೆಲವು ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಹೊರಡಿಸಿದೆ.
ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಸಿನಿಮಾ ಗೈಡ್ಲೈನ್ಸ್ಗಳನ್ನು ಬಿಡುಗಡೆ ಮಾಡಿದ್ದು, ಚಿತ್ರಮಂದಿರಗಳಿಗೆ ತೆರಳಲು ಆರೋಗ್ಯ ಸೇತು ಅಪ್ಲಿಕೇಶನ್ ಅನ್ನು ಕಡ್ಡಾಯಗೊಳಿಸಲಾಗಿದೆ. ಸಿನಿಮಾ ಮಂದಿರದ ಒಟ್ಟು ಆಸನಗಳ ಪೈಕಿ 50%ರಲ್ಲಿ ಮಾತ್ರ ಜನರಿಗೆ ಕುಳಿತುಕೊಳ್ಳಲು ಅವಕಾಶ. ಜೊತೆಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ ಎಂದೂ ತಿಳಿಸಿದೆ. ಸ್ಯಾನಿಟೈಸಿಂಗ್ ಮತ್ತು ಹ್ಯಾಂಡ್ ವಾಷ್ ಸಿಸ್ಟಂ ವ್ಯವಸ್ಥೆ ಕಡ್ಡಾಯ ಎಂದೂ ಈ ಮಾರ್ಗಸೂಚಿ ತಿಳಿಸಿದೆ.
ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ. ಡಿಜಿಟಲ್ ಪಾವತಿಗೆ ಉತ್ತೇಜನ, ಚಿತ್ರಮಂದಿರಗಳ ಆಸುಪಾಸಿನಲ್ಲಿ ಸ್ವಚ್ಛತೆಗೆ ಆದ್ಯತೆ, ಥಿಯೇಟರ್ ಪಕ್ಕ ಬಹಳಷ್ಟು ಕೌಂಟರ್ಗಳ ರಚನೆ, ಜನರು ಅತ್ತಿಂದಿತ್ತ ಓಡಾಡುವಂತಿಲ್ಲ, ಸಾಮಾಜಿಕ ಅಂತರಕ್ಕಾಗಿ ಮಾರ್ಕ್ ಮಾಡುವುದು, ಜನದಟ್ಟಣೆ ತಪ್ಪಿಸಲು ದಿನವಿಡೀ ಕೌಂಟರ್ ತೆರೆದಿಡುವುದು, ಥಿಯೇಟರ್ ಒಳಗೆ ಆಹಾರ ಸರ್ವ್ ನಿಷೇಧ, ಪ್ಯಾಕ್ಡ್ ಮತ್ತು ಕೂಲ್ ಡ್ರಿಂಕ್ಸ್ ಬಳಸಲು ಅನುಮತಿ, ಸುರಕ್ಷತೆಗೆ ಪೂರಕ ಕ್ರಮ ಕೈಗೊಳ್ಳುವುದು ಮಾಡುವಂತೆಯೂ ಸೂಚಿಸಿದೆ.
ಹಾಗೆಯೇ ಸಿಬ್ಬಂದಿಗಳು ಮಾಸ್ಕ್, ಗ್ಲೌಸ್, ಪಿಪಿಇ ಕಿಟ್ ಬಳಕೆ, ಟ್ರ್ಯಾಕ್ ಮಾಡಲು ಮೊಬೈಲ್ ನಂಬರ್ ನೀಡಲು ಸೂಚನೆ, ಎಸಿಗೂ ಲಿಮಿಟ್ ಹೇರಲಾಗಿದೆ. ಜೊತೆಗೆ ಸಿನಿಮಾ ಆರಂಭದಲ್ಲಿ ಮತ್ತು ಕೊನೆಗೆ ಕೊರೋನಾ ನಿಯಂತ್ರಣ ಕ್ರಮಗಳ ಬಗ್ಗೆ ಅನೌನ್ಸ್ ಮಾಡುವಂತೆಯೂ ಈ ಮಾರ್ಗಸೂಚಿಯಲ್ಲಿ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
Announced the Standard operating procedures, SOP’s for cinema halls, multiplexes etc. for screening of films, as they reopen from 15th of October as per Ministry of Home Affairs guidelines.#UnlockWithPrecautions pic.twitter.com/X1XZFZoDAT
— Prakash Javadekar (@PrakashJavdekar) October 6, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.