ನವದೆಹಲಿ: ವಿಶೇಷ ಅಂತರರಾಷ್ಟ್ರೀಯ ಪ್ರಯಾಣಿಕ ವಿಮಾನಗಳನ್ನು ಹಾರಾಟ ನಡೆಸುವ ಸಲುವಾಗಿ ಕೀನ್ಯಾ ಮತ್ತು ಭೂತಾನ್ ಜೊತೆ ಭಾರತ ಪ್ರತ್ಯೇಕ ದ್ವಿಪಕ್ಷೀಯ ಏರ್ ಬಬಲ್ ಒಪ್ಪಂದವನ್ನು ಮಾಡಿಕೊಂಡಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಬುಧವಾರ ಹೇಳಿದ್ದಾರೆ.
ಸೆಪ್ಟೆಂಬರ್ 17 ರವರೆಗೆ ಭಾರತವು ಅಫ್ಘಾನಿಸ್ಥಾನ, ಬಹ್ರೇನ್, ಕೆನಡಾ, ಫ್ರಾನ್ಸ್, ಜರ್ಮನಿ, ಇರಾಕ್, ಜಪಾನ್, ಮಾಲ್ಡೀವ್ಸ್, ನೈಜೀರಿಯಾ, ಕತಾರ್, ಯುಎಇ, ಯುಕೆ, ಮತ್ತು ಯುಎಸ್ಎ ಸೇರಿದಂತೆ 13 ದೇಶಗಳೊಂದಿಗೆ ದ್ವಿಪಕ್ಷೀಯ ಏರ್ ಬಬಲ್ ವ್ಯವಸ್ಥೆಯನ್ನು ರೂಪಿಸಿತ್ತು.
ಏರ್ ಬಬಲ್ ಒಪ್ಪಂದದಡಿಯಲ್ಲಿ, ನಿರ್ಬಂಧಿತ ಪರಿಸ್ಥಿತಿಯಲ್ಲೂ ಕೂಡ ವಿಶೇಷ ಅಂತರರಾಷ್ಟ್ರೀಯ ಪ್ರಯಾಣಿಕರ ವಿಮಾನಗಳನ್ನು ವಿಮಾನಯಾನ ಸಂಸ್ಥೆಗಳು ಆ ದೇಶಗಳ ಪ್ರದೇಶಗಳಿಗೆ ವಿಮಾನ ಹಾರಾಟವನ್ನು ನಡೆಸಬಹುದಾಗಿದೆ.
“ದ್ವಿಪಕ್ಷೀಯ ಅಂತರರಾಷ್ಟ್ರೀಯ ವಾಯು ಸಂಪರ್ಕವನ್ನು ಇನ್ನಷ್ಟು ಹೆಚ್ಚಿಸುವ ಸಲುವಾಗಿ ಕೀನ್ಯಾ ಮತ್ತು ಭೂತಾನ್ ಜೊತೆ ಈಗ ಏರ್ ಬಬಲ್ ವ್ಯವಸ್ಥೆ ಜಾರಿಯಲ್ಲಿದೆ. ಭಾರತೀಯ ವಿಮಾನಗಳು ಈ ದೇಶಗಳಿಗೆ ಕಾರ್ಯನಿರ್ವಹಿಸಲು ಸಾಧ್ಯವಾಗಲಿದೆ. ಆ ದೇಶಗಳ ವಿಮಾನಗಳು ಭಾರತಕ್ಕೆ ಬರಬಹುದಾಗಿದೆ” ಎಂದು ಪುರಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಕರೋನವೈರಸ್ ಸಾಂಕ್ರಾಮಿಕ ದೃಷ್ಟಿಯಿಂದ ಮಾರ್ಚ್ 23 ರಿಂದ ಭಾರತದಲ್ಲಿ ಅಂತರರಾಷ್ಟ್ರೀಯ ಪ್ರಮಾಣಿಕ ವಿಮಾನಯಾನಗಳನ್ನು ಸ್ಥಗಿತಗೊಳಿಸಲಾಗಿದೆ.
ಆದರೆ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಸಲುವಾಗಿ ಮೇ ತಿಂಗಳಿನಿಂದ ಭಾರತ ವಂದೇ ಭಾರತ್ ಮಿಷನ್ ಅಡಿಯಲ್ಲಿ ವಿಶೇಷ ವಿಮಾನಗಳನ್ನು ಹಾರಿಸುತ್ತಿದೆ.
Reaching out to stranded Indians.
In order to further boost bilateral international air connectivity Air Bubble arrangements are now in place with Kenya & Bhutan.Indian carriers will be able to operate to these countries. Carriers of these countries will be able to fly to India.— Hardeep Singh Puri (@HardeepSPuri) September 30, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.