ನವದೆಹಲಿ: ಸೋಮವಾರ ನಡೆದ ಸಭೆಯಲ್ಲಿ, ರಕ್ಷಣಾ ಸಚಿವರ ನೇತೃತ್ವದ ರಕ್ಷಣಾ ಸ್ವಾಧೀನ ಮಂಡಳಿಯು ಭಾರತೀಯ ನೌಕಾಪಡೆ ಮತ್ತು ಭಾರತೀಯ ವಾಯುಪಡೆಗೆ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ‘ಸ್ಮಾರ್ಟ್ ಆ್ಯಂಟಿ-ಏರ್ಫೀಲ್ಡ್ ವೆಪನ್’ ಅಥವಾ SAAW ಖರೀದಿಯನ್ನು ಮಾಡಲು ಅನುಮೋದನೆಯನ್ನು ನೀಡಿದೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಅಭಿವೃದ್ಧಿಪಡಿಸಿದ ಎಸ್ಎಎಡಬ್ಲ್ಯು ಸುಮಾರು 100 ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ ಮತ್ತು ಸುಮಾರು 125 ಕೆ.ಜಿ ತೂಗುತ್ತದೆ.
ಅಂದಾಜು 970 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲಾಗುತ್ತಿರುವ ಈ ಶಸ್ತ್ರಾಸ್ತ್ರವು ವಾಯುಪಡೆ ಮತ್ತು ನೌಕಾಪಡೆಗೆ ಸಂಘರ್ಷಗಳ ಸಮಯದಲ್ಲಿ ಹೆಚ್ಚಿನ ನಿಖರತೆಯೊಂದಿಗೆ ಶತ್ರು ವಾಯುನೆಲೆಗಳು ಮತ್ತು ರನ್ವೇಗಳನ್ನು ಹೊಡೆಯುವ ಸಾಮರ್ಥ್ಯವನ್ನು ನೀಡುತ್ತದೆ.
ಈ ಶಸ್ತ್ರಾಸ್ತ್ರವನ್ನು ಸ್ಟ್ಯಾಂಡ್ಆಫ್ ಶ್ರೇಣಿಗಳಿಂದ ಉಡಾಯಿಸಬಹುದಾಗಿರುವುದರಿಂದ, ಅದನ್ನು ಉಡಾಯಿಸುವ ವಿಮಾನವನ್ನು ಶತ್ರು ಗುರಿಯಿಂದ ಸುರಕ್ಷಿತ ದೂರದಲ್ಲಿಯೇ ನಿಯೋಜಿಸಬಹುದು. ಅನೇಕ ಸಂದರ್ಭಗಳಲ್ಲಿ, ಈ ಆಯುಧವನ್ನು ಭಾರತೀಯ ವಾಯುಪ್ರದೇಶದೊಳಗಿನ ಐಎಎಫ್ ಯೋಧರು ಹಾರಿಸಬಹುದಾಗಿದೆ
ಅಲ್ಲದೇ, ರಕ್ಷಣಾ ಸ್ವಾಧೀನ ಮಂಡಳಿಯು ಭಾರತೀಯ ಸೇನೆ ಮತ್ತು ವಾಯುಪಡೆಯ ಕ್ಷೇತ್ರ ಘಟಕಗಳಿಗೆ ಸ್ಥಾಯೀ ಎಚ್ಎಫ್ ಟ್ರಾನ್ಸ್-ರಿಸೀವರ್ ಸೆಟ್ಗಳ ಖರೀದಿಯನ್ನು ಅಂದಾಜು 540 ಕೋಟಿ ರೂ.ಗಳಿಗೆ ಖರೀದಿಸಲು ಅನುಮೋದನೆಯನ್ನು ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.