ನವದೆಹಲಿ: ಲಿಬಿಯಾದಲ್ಲಿ ಇಸಿಸ್ ಉಗ್ರರ ವಶದಲ್ಲಿರುವ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಾಲ್ವರು ಭಾರತೀಯರು ನಾಪತ್ತೆಯಾಗಿದ್ದಾರೆ ಎಂದು ಅಲ್ಲಿನ ಸರ್ಕಾರಿ ಮೂಲಗಳು ತಿಳಿಸಿವೆ.
ತ್ರಿಪೋಲಿ ಸಮೀಪದ ಸಿರ್ತೆ ನಗರದಿಂದ ಗುರುವಾರ ಸಂಜೆಯಿಂದ ಇವರು ನಾಪತ್ತೆಯಾಗಿದ್ದಾರೆ. ಕಳೆದ ಒಂದು ವರ್ಷದಿಂದ ಇವರು ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಕರಾಗಿ ಸೇವೆ ಮಾಡುತ್ತಿದ್ದರು.
ಇದುವರೆಗೆ ಇವರನ್ನು ಯಾರು ಅಪಹರಿಸಿದ್ದಾರೆ ಎಂಬ ಸುಳಿವು ಸಿಕ್ಕಿಲ್ಲ, ಒತ್ತೆ ಬೇಡಿಕೆಯೂ ಬಂದಿಲ್ಲ. ಲಿಬಿಯಾ ಸರ್ಕಾರ ಈ ಪತ್ತೆಗೆ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ.
ಈ ಭಾರತೀಯ ಶೀಕ್ಷಕರು ನಾಪತ್ತೆಯಾದ ಪ್ರದೇಶ ಕ್ರೂರ ಉಗ್ರ ಸಂಘಟನೆ ಇಸಿಸ್ನ ವಶದಲ್ಲಿದೆ. ಈ ಭಾಗವನ್ನು ಖಲಿಫತ್ ಎಂದೂ ಅವರು ಘೋಷಣೆ ಮಾಡಿದ್ದಾರೆ.
ಲಿಬಿಯಾ ಅಸುರಕ್ಷಿತ ದೇಶವಾಗಿದ್ದು, ಅದನ್ನು ತೊರೆಯುವಂತೆ ಭಾರತೀಯರಿ ಭಾರತ ಸರ್ಕಾರ ಹಲವಾರು ಬಾರಿ ಮನವಿಯನ್ನು ಮಾಡಿಕೊಂಡಿದೆ. ಇರಾಕ್ನಲ್ಲಿ ಇಗಲೂ 39 ಭಾರತೀಯರು ನಾಪತ್ತೆಯಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.