ಮುಂಬೈ: ಕೊರೋನಾ ಸೋಂಕಿಗೆ ಆಕ್ಸ್ಫರ್ಡ್ ತಯಾರಿಸಿರುವ ಕೋವಿಶೀಲ್ಡ್ ಲಸಿಕೆಯ ಎರಡನೇ ಮತ್ತು ಮೂರನೇ ಹಂತದ ಪ್ರಯೋಗವನ್ನು ನಗರದ ಪರಲ್ ಪ್ರದೇಶದಲ್ಲಿರುವ ಕಿಂಗ್ ಎಡ್ವರ್ಡ್ ಮೆಮೊರಿಯಲ್ (ಕೆಇಎಂ) ಆಸ್ಪತ್ರೆ ಆರಂಭ ಮಾಡಿದೆ.
ಈ ಆಸ್ಪತ್ರೆಯು ಈ ಲಸಿಕೆಯನ್ನು ಮಾನವನ ಮೇಲೆ ಪ್ರಯೋಗಿಸಲು ಮಹಾರಾಷ್ಟ್ರದ ಎಥಿಕ್ಸ್ ಕಮಿಟಿಯ ಅನುಮೋದನೆಯನ್ನೂ ಪಡೆದುಕೊಂಡಿದೆ. ಸುಮಾರು 100 ಜನ ಸ್ವಯಂ ಪ್ರೇರಿತರಾಗಿ ಈ ಲಸಿಕೆಯ ಪ್ರಯೋಗಕ್ಕೆ ಮುಂದಾಗುವವರ ಮೇಲೆ ಇದನ್ನು ಪ್ರಯೋಗಿಸಲಾಗುವುದು. ಈ ಸಂಬಂಧ ಸ್ವಯಂ ಪ್ರೇರಣೆಯಿಂದ ಮುಂದೆ ಬಂದವರ ಪರೀಕ್ಷೆಯನ್ನು ಆಸ್ಪತ್ರೆ ನಡೆಸುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಈ ಆಸ್ಪತ್ರೆಯ ಜೊತೆಗೆ, ಈ ಲಸಿಕೆಯ ಪ್ರಯೋಗಕ್ಕೆ ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ನ ಬಿವೈಎಲ್ ನಾಯರ್ ಆಸ್ಪತ್ರೆಗೂ ಅನುಮತಿ ದೊರೆತಿದೆ. ಒಟ್ಟು 200 ಜನರ ಮೇಲೆ ಈ ಲಸಿಕೆ ಪ್ರಯೋಗ ನಡೆಯಲಿದೆ ಎಂದು ತಿಳಿದುಬಂದಿದೆ. ಪುಣೆಯಲ್ಲಿಯೂ ಈ ಲಸಿಕೆಯ ಮಾನವ ಪ್ರಯೋಗ ನಡೆಯುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.