ಕೊಪೆನಹಜೆನ್: ಭಾರತದ ಆರ್ಚರಿ ಕ್ರೀಡಾಪಟು ಮಂಗಲ್ ಸಿಂಗ್ ಚಂಪಿಯ ಅವರು ಮುಂಬರುವ 2016ರ ರಿಯೊ ಒಲಿಂಪಿಕ್ಸ್ನಲ್ಲಿ ಸ್ಥಾನ ಪಡೆದಿದ್ದಾರೆ.
ಗುರುವಾರ ನಡೆದ ಆರ್ಚರಿ ವರ್ಲ್ಡ್ ಚಾಂಪಿಯನ್ಶಿಪ್ನಲ್ಲಿ ವೈಯಕ್ತಿಕವಾಗಿ ಆಟ ಪ್ರದರ್ಶಿಸಿದ ಮಂಗಲ್ ಸಿಂಗ್ ಕ್ವಾಟರ್ ಫೈನಲ್ಗೆ ಎಂಟ್ರಿ ಕೊಡುವ ಮೂಲಕ 2016ರ ರಿಯೋ ಒಲಿಂಪಿಕ್ಸ್ನಲ್ಲಿ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದಾರೆ.
31ರ ಹರೆದ ಮಂಗಲ್ ಅವರು ಸ್ಪೇನ್ನ ಆರನೇ ಶ್ರೇಯಾಂಕಿತ ಆಂಟೋನಿಯೊ ಫೆರ್ನಾಂಡಿಸ್ ಅವರನ್ನು 6-2ರಿಂದ ಸೋಲಿಸಿ, ಕ್ವಾರ್ಟರ್ಫೈನಲ್ಸ್ ಪ್ರವೇಶಿಸುವ ಮೂಲಕ ಒಲಿಂಪಿಕ್ಸ್ನ ರಿಯೋ 2016ರ ತಂಡದಲ್ಲಿ ವೈಯಕ್ತಿಕ ಸ್ಥಾನ ಪಡೆದರು.
ಕಳೆದ 2008ರ ಬೀಜಿಂಗ್ ಒಲಿಂಪಿಕ್ಸ್ನಲ್ಲಿ ಎಂಟರ ಸ್ಥಾನಕ್ಕಾಗಿ ಸ್ಪರ್ಧಿಸಿದ್ದ ಚಂಪಿಯ, ವೆನೆಜುವೆಲಾದ ಎಲಿಯಾಸ್ ಮಲೇವ್ ಎದುರು 4-6ರಿಂದ ಸೋತಿದ್ದು, ಈ ಸಂದರ್ಭ 2-4 ಹಿನ್ನಡೆಯೊಂದಿಗೆ ಹೊರನಡೆದಿದ್ದರು.
ಭಾರತೀಯ ಮಹಿಳಾ ತಂಡ ಕೂಡ 2016ರ ಒಲಿಂಪಿಕ್ಸ್ನಲ್ಲಿ ಭಾಗವಹಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.