ನವದೆಹಲಿ: ಕಳೆದ 24 ಗಂಟೆಗಳಲ್ಲಿ ಕೋವಿಡ್-19 ನಿಂದ ದೇಶದಲ್ಲಿ ಒಂದು ಲಕ್ಷಕ್ಕೂ ಅಧಿಕ ಚೇತರಿಕೆಗಳನ್ನು ದಾಖಲಿಸಿದೆ. ಇದು ಜಾಗತಿಕ ಮಟ್ಟಕ್ಕೆ ಹೋಲಿಸಿದರೆ ಭಾರತ ಮಹತ್ವದ ಸಾಧನೆಯಾಗಿದೆ. ಇದರಿಂದ ಚೇತರಿಕೆ ದರ ಮತ್ತಷ್ಟು ಸುಧಾರಿಸಿದೆ ಮತ್ತು ಈಗ ಅದು ಶೇಕಡಾ 80.86 ಕ್ಕೆ ತಲುಪಿದೆ.
ಒಟ್ಟಾರೆಯಾಗಿ, ಕಳೆದ 24 ಗಂಟೆಗಳಲ್ಲಿ 1, 1, 468 ಕೋವಿಡ್ ರೋಗಿಗಳು ಚೇತರಿಸಿಕೊಂಡಿದ್ದಾರೆ ಮತ್ತು ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಇದುವರೆಗಿನ ಒಟ್ಟು ಚೇತರಿಕೆಗಳ ಸಂಖ್ಯೆ 44, 97, 867 ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಚೇತರಿಕೆಯ ನಿರಂತರ ಹೆಚ್ಚಳವು ಸಕ್ರಿಯ ಪ್ರಕರಣ ಕಡಿಮೆಯಾಗಲು ಕಾರಣವಾಗಿದೆ ಮತ್ತು ಪ್ರಸ್ತುತ ಇದು ಒಟ್ಟು ಪಾಸಿಟಿವ್ ಪ್ರಕರಣಗಳಲ್ಲಿ ಕೇವಲ 17.54 ಶೇಕಡಾವನ್ನು ಮಾತ್ರ ಒಳಗೊಂಡಿದೆ.
‘ಟೆಸ್ಟ್, ಟ್ರ್ಯಾಕ್ ಮತ್ತು ಟ್ರೀಟ್’ ವಿಧಾನದ ಪರಿಣಾಮಕಾರಿ ಅನುಷ್ಠಾನವು ಹೆಚ್ಚಿನ ಚೇತರಿಕೆ ಮತ್ತು ಕಡಿಮೆ ಮರಣಕ್ಕೆ ಕಾರಣವಾಗಿದೆ. ಪ್ರಸ್ತುತ, ಭಾರತದ ಪ್ರಕರಣಗಳಲ್ಲಿ ಮರಣ ಪ್ರಮಾಣವು ಶೇಕಡಾ 1.60 ರಷ್ಟಿದೆ.
ಒಟ್ಟು ಸಕಾರಾತ್ಮಕ ಪ್ರಕರಣಗಳ ಸಂಖ್ಯೆ ಈಗ 55, 62, 483 ಕ್ಕೆ ತಲುಪಿದೆ. ಪ್ರಸ್ತುತ, ದೇಶದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 9,75 ,681 ಆಗಿದೆ. ಕಳೆದ 24 ಗಂಟೆಗಳಲ್ಲಿ 1053 ಸಾವುಗಳು ಸಂಭವಿಸಿದ್ದು, ಇದು ಒಟ್ಟು ಸಾವನ್ನು 33,1 88 ಕ್ಕೆ ತಲುಪಿದೆ ಎಂದು ವರದಿಯಾಗಿದೆ ಕಳೆದ 24 ಗಂಟೆಗಳಲ್ಲಿ 9, 33, 185 ಪರೀಕ್ಷೆಗಳನ್ನು ನಡೆಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.