ಕೋಟೇಶ್ವರ : ಕೋಟೇಶ್ವರ ಸಮೀಪದ ರಾಜರಾಮ್ ಪಾಲಿಮರ್ನಲ್ಲಿ ಸಾಕಲಾಗುತ್ತಿರುವ ಗೋವು ಒಂದಕ್ಕೆ ಕಿಡಿಗೇಡಿಗಳು ಎಸಿಡ್ನ್ನು ಎರಚಿ ಪೈಶಾಚಿಕವಾಗಿ ವರ್ತಿಸಿದ ಘಟನೆ ನಡೆದಿದೆ.
ಎಂದಿನಂತೆ ಫ್ಯಾಕ್ಟರಿಯಿಂದ ಮೇವಿಗಾಗಿ ಬಯಲಿಗೆ ದನಗಳು ತೆರಳಿದ್ದ ವೇಳೆ ಈ ಘಟನೆ ನಡೆದಿದ್ದು ಬಯಲಿನಲ್ಲಿ ಮೇದು ವಾಪಸಾಗಬೇಕಿದ್ದ ಗೋವು ನಾಲ್ಕೈದು ದಿನ ಕಳೆದರೂ ಬಾರದೇ ಇರುವುದು ಮಾಲಕರಲ್ಲಿ ಆತಂಕ ಮೂಡಿತ್ತು.
5 ದಿನಗಳ ಬಳಿಕ ವಾಪಸಾದ ಗೋವು ನಿಃಶಕ್ತಿಯಿಂದ ಬಳಲುತ್ತಿದ್ದು ಮೈಯೆಲ್ಲ ಆ್ಯಸಿಡ್ನಿಂದ ಸುಟ್ಟು ಹೋಗಿರುವ ದೃಶ್ಯ ಹೃದಯ ಕಲಕುವಂತಿತ್ತು. ತತ್ಕ್ಷಣವೇ ಪಶು ವೈದ್ಯರನ್ನು ಕರೆಸಿ ಚಿಕಿತ್ಸೆ ನೀಡಲಾಗಿದ್ದು ಇಂತಹ ಅಮಾನವೀಯ ಕೃತ್ಯ ಎಸಗಿದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಬಂಧಿಧಿಸುವಂತೆ ಪೊಲೀಸರಿಗೆ ದೂರು ನೀಡಲಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.