ನವದೆಹಲಿ: ಕೋವಿಡ್-19 ರ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ ವಿಮಾ ಯೋಜನೆಯನ್ನು ಇನ್ನೂ ಆರು ತಿಂಗಳವರೆಗೆ ವಿಸ್ತರಿಸಲಾಗಿದೆ.
ಕೊರೋನಾ ಯೋಧರಿಗಾಗಿ ಇದನ್ನು ಈ ವರ್ಷದ ಮಾರ್ಚ್ 30 ರಂದು 90 ದಿನಗಳ ಅವಧಿಗೆ ಘೋಷಿಸಲಾಗಿತ್ತು. ನಂತರ ಇದನ್ನು ಸೆಪ್ಟೆಂಬರ್ 25 ರವರೆಗೆ 90 ದಿನಗಳವರೆಗೆ ವಿಸ್ತರಿಸಲಾಯಿತು.
ಇದೀಗ ಈ ಯೋಜನೆಯನ್ನು ಇನ್ನೂ 180 ದಿನಗಳವರೆಗೆ ವಿಸ್ತರಿಸಲಾಗಿದೆ.
ಕೇಂದ್ರದ ಈ ಯೋಜನೆಯು ಸಮುದಾಯ ಆರೋಗ್ಯ ಕಾರ್ಯಕರ್ತರು ಸೇರಿದಂತೆ ಆರೋಗ್ಯ ಸೇವೆ ಒದಗಿಸುವವರಿಗೆ 50 ಲಕ್ಷ ರೂ.ಗಳ ವಿಮೆಯನ್ನು ಒದಗಿಸುತ್ತದೆ. ಕೋವಿಡ್-19 ರೋಗಿಗಳ ನೇರ ಸಂಪರ್ಕ ಮತ್ತು ಆರೈಕೆಯಲ್ಲಿ ಇರುವುದರಿಂದ ಮತ್ತು ಸೋಂಕಿಗೆ ಒಳಗಾಗುವ ಅಪಾಯ ಹೆಚ್ಚಿರುವ ಹಿನ್ನೆಲೆಯಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಈ ವಿಮೆಯನ್ನು ನೀಡಲಾಗುತ್ತಿದೆ.
ಕೋವಿಡ್-19 ತಗುಲಿ ಸಾವಿಗೀಡಾದ ಆರೋಗ್ಯ ಕಾರ್ಯಕರ್ತರ ಕುಟುಂಬಿಕರಿಗೆ ವಿಮಾ ಮೊತ್ತ ದೊರೆಯುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.