ಸೂರತ್: ಸೆಪ್ಟೆಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿಯವರ 70 ನೇ ಹುಟ್ಟುಹಬ್ಬವನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೂರತ್ ನಾಗರಿಕ ಪಾಲಿಕೆ, ಹಲವಾರು ಸಂಘಟನೆಗಳು ಮತ್ತು ವ್ಯಾಪಾರ ಗುಂಪುಗಳು ನಗರದಾದ್ಯಂತ 70,000 ಸಸಿಗಳನ್ನು ನೆಡುತ್ತಿವೆ.
“ನಾವು 15 ದಿನಗಳ ಹಿಂದೆ ಈ ಉಪಕ್ರಮವನ್ನು ಪ್ರಾರಂಭಿಸಿದ್ದೇವೆ. ಸೆಪ್ಟೆಂಬರ್ 16 ರೊಳಗೆ 70,000 ಸಸಿಗಳನ್ನು ನೆಡಲು ಸಾಧ್ಯವಾಗಲಿದೆ ಎಂದು ನಾನು ಭಾವಿಸುತ್ತೇನೆ” ಎಂದು ಸೂರತ್ ನಗರದ ಉಪ ಮೇಯರ್ ನೀರವ್ ಷಾ ಮಾಧ್ಯಮಕ್ಕೆ ತಿಳಿಸಿದ್ದಾರೆ.
“ಜನರಿಗೆ ಅನುಕೂಲವಾಗುವಂತಹ ಚಟುವಟಿಕೆಯನ್ನು ಮಾಡುವ ಮೂಲಕ ಪ್ರತಿಯೊಬ್ಬರೂ ತಮ್ಮ ಜನ್ಮದಿನವನ್ನು ಆಚರಿಸಬೇಕೆಂದು ಪ್ರಧಾನ ಮಂತ್ರಿ ಯಾವಾಗಲೂ ಹೇಳುತ್ತಾರೆ. ಆದ್ದರಿಂದ ಈ ಬಾರಿ ನಗರದಾದ್ಯಂತ 70,000 ಸಸಿಗಳನ್ನು ನೆಡುವ ಯೋಜನೆ ಹಾಕಿಕೊಂಡಿದ್ದೇವೆ. ಇದು ಆಮ್ಲಜನಕವನ್ನು ಹೆಚ್ಚಿಸುತ್ತದೆ ಮತ್ತು ಭವಿಷ್ಯದ ಪೀಳಿಗೆಗೆ ಪ್ರಯೋಜನಕಾರಿಯಾಗಲಿದೆ”ಎಂದು ಅವರು ಹೇಳಿದ್ದಾರೆ.
ಟೆಕ್ಸ್ಟೈಲ್ ಸಿಟಿ ಎಂದು ಕರೆಯಲ್ಪಡುವ ಸೂರತ್ ಸಸಿಗಳನ್ನು ನೆಡುವುದರ ಮೂಲಕ ನಗರವನ್ನು ಹಸಿರು ಮತ್ತು ಮಾಲಿನ್ಯ ಮುಕ್ತವಾಗಿಸುವ ಯೋಜನೆ ಹಾಕಿಕೊಂಡಿದೆ. ಈ ಉಪಕ್ರಮವು 15 ದಿನಗಳ ಹಿಂದೆ ಪ್ರಾರಂಭವಾಯಿತು ಎಂದು ಉಪ ಮೇಯರ್ ಹೇಳಿದ್ದಾರೆ. ಸೆಪ್ಟೆಂಬರ್ 16ರ ವೇಳೆಗೆ ಅವರು 70,000 ಸಸಿಗಳನ್ನು ನೆಡುವ ಗುರಿಯನ್ನು ಅವರು ಹೊಂದಿದ್ದಾರೆ.
ನಂತರ ಸೆಪ್ಟೆಂಬರ್ 17 ರಂದು, ಅವರು ನಿಗದಿತ ಗುರಿಗಿಂತ ಹೆಚ್ಚಿನ ಸಸಿಗಳನ್ನು ನೆಡಲಿದ್ದಾರೆ. ಈ ಕಾರ್ಯದಿಂದ ನಗರದ ನಿವಾಸಿಗಳಿಗೆ ಪ್ರಯೋಜನಕಾರಿಯಾಗಲಿದೆ. ವಿವಿಧ ಸಂಘಗಳು ಮತ್ತು ವ್ಯಾಪಾರ ಗುಂಪುಗಳು ಈ ಪ್ರಯತ್ನಕ್ಕೆ ಕೈಜೋಡಿಸಿವೆ ಮತ್ತು ಸೋಮವಾರ ಕೆ.ಪಿ.ಸಂಘ್ವಿ ಮತ್ತು ಸನ್ಸ್ನ 500 ನೌಕರರು ಸಸಿಗಳನ್ನು ನೆಟ್ಟರು ಮತ್ತು ಅದಕ್ಕೆ ನೀರುಣಿಸಿ ರಕ್ಷಣೆ ಮಾಡುವ ಪ್ರತಿಜ್ಞೆ ಮಾಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಕೆಪಿ ಸಂಘ್ವಿ ಮತ್ತು ಸನ್ಸ್ನ ವ್ಯವಸ್ಥಾಪಕ ಜಿತೇಂದ್ರ ಮಾಧಿಯಾ, “ನಾವು ಸಾವಿರಾರು ಸಸಿಗಳನ್ನು ನೆಟ್ಟಿದ್ದೇವೆ ಮತ್ತು ಪಿಎಂ ಮೋದಿಯವರ 70 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ಉಪಕ್ರಮಕ್ಕೆ ಸೇರಲು ಇತರ ಜನರನ್ನು ಒತ್ತಾಯಿಸಿದ್ದೇವೆ” ಎಂದು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.