ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 10 ರಂದು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್ವೈ) ಗೆ ಡಿಜಿಟಲ್ ಆಗಿ ಚಾಲನೆ ನೀಡಿದ್ದಾರೆ. ರೈತರ ನೇರ ಬಳಕೆಗಾಗಿ ಸಮಗ್ರ ತಳಿ ಸುಧಾರಣಾ ಮಾರುಕಟ್ಟೆ ಮತ್ತು ಮಾಹಿತಿ ಪೋರ್ಟಲ್ ಇ-ಗೋಪಾಲ್ ಅಪ್ಲಿಕೇಶನ್ ಅನ್ನು ಕೂಡ ಪ್ರಧಾನಿ ಪ್ರಾರಂಭಿಸಿದ್ದಾರೆ. ರೈತರ ಏಳಿಗೆಗಾಗಿ ಮೋದಿ ಸರ್ಕಾರ ಹಮ್ಮಿಕೊಂಡಿರುವ ಹಲವು ಯೋಜನೆಗಳಲ್ಲಿ ಇದು ಕೂಡ ಒಂದಾಗಿದೆ.
ಒಟ್ಟು 20,0 50 ಕೋಟಿ ರೂಪಾಯಿ ಅಂದಾಜು ಹೂಡಿಕೆಯಲ್ಲಿ ಕೇಂದ್ರೀಯ ಮತ್ತು ಕೇಂದ್ರ ಪ್ರಾಯೋಜಿತ ಯೋಜನೆ ಇದಾಗಿದ್ದು, ಕೇಂದ್ರದ ಪಾಲು 9,407 ರೂಪಾಯಿ, ರಾಜ್ಯದ ಪಾಲು 4,880 ಕೋಟಿ ರೂಪಾಯಿ ಮತ್ತು ಫಲಾನುಭವಿಗಳ ಪಾಲು 5,763 ಕೋಟಿ ರೂಪಾಯಿ ಆಗಿರಲಿದೆ. ಈ ಯೋಜನೆಯನ್ನು ವಿತ್ತ ವರ್ಷ 2020-21ರಿಂದ 2024-25ರವರೆಗೆ ಐದು ವರ್ಷಗಳ ಅವಧಿಗೆ ಜಾರಿ ಮಾಡಲಾಗುತ್ತದೆ. ಮೀನುಗಾರಿಕೆ ವಲಯದಲ್ಲಿ 9% ವಾರ್ಷಿಕ ದರದ ವೃದ್ಧಿ ಯೊಂದಿಗೆ 2024-25ರವರೆಗೆ 22 ಮಿಲಿಯನ್ ಮೆಟ್ರಿಕ್ ಟನ್ ಉತ್ಪಾದನೆಯ ಗುರಿ.
ಮತ್ಸ್ಯ ಸಂಪದ ಯೋಜನೆ ಅಂದರೆ ಏನು?
ಪ್ರಧಾನ್ ಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್ವೈ) ದೇಶದ ಮೀನುಗಾರಿಕೆ ಕ್ಷೇತ್ರದ ಕೇಂದ್ರೀಕೃತ ಮತ್ತು ಸುಸ್ಥಿರ ಅಭಿವೃದ್ಧಿಗಾಗಿನ ಒಂದು ಪ್ರಮುಖ ಯೋಜನೆಯಾಗಿದ್ದು, ಅಂದಾಜು ರೂ.20,050 ಕೋಟಿಗಳನ್ನು ಇದಕ್ಕೆ ಹೂಡಿಕೆ ಮಾಡಲಾಗುತ್ತದೆ. ಆತ್ಮನಿರ್ಭರ ಭಾರತ ಪ್ಯಾಕೇಜ್ ಭಾಗವಾಗಿ ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ 2020-21ರ ಆರ್ಥಿಕ ವರ್ಷದಿಂದ 2024-25ರವರೆಗೆ 5 ವರ್ಷಗಳ ಅವಧಿಯಲ್ಲಿ ಇದು ಅನುಷ್ಠಾನದಲ್ಲಿ ಇರಲಿದೆ. ಮೀನುಗಾರಿಕೆ ಕ್ಷೇತ್ರದಲ್ಲಿ ಅತಿ ಹೆಚ್ಚು ಹೂಡಿಕೆಯನ್ನು ಕಾಣಲಿರುವ ಯೋಜನೆ ಇದಾಗಲಿದೆ. ಇದರಲ್ಲಿ ಸಾಗರ, ಒಳನಾಡು ಮೀನುಗಾರಿಕೆ ಮತ್ತು ಅಕ್ವಾಕಲ್ಚರ್ನಲ್ಲಿ ಫಲಾನುಭವಿ ಆಧಾರಿತ ಚಟುವಟಿಕೆಗಳಿಗೆ ರೂ.12340 ಕೋಟಿ ಹೂಡಿಕೆ ಮಾಡಲಾಗುತ್ತದೆ ಮತ್ತು ಮೀನುಗಾರಿಕೆ ಮೂಲಸೌಕರ್ಯಕ್ಕಾಗಿ ಸುಮಾರು 7710 ಕೋಟಿ ರೂ.ಗಳ ಹೂಡಿಕೆ ಮಾಡಲಾಗುತ್ತದೆ.
2024-25ರ ವೇಳೆಗೆ ಮೀನು ಉತ್ಪಾದನೆಯನ್ನು ಹೆಚ್ಚುವರಿಯಾಗಿ 70 ಲಕ್ಷ ಟನ್ಗಳಷ್ಟು ಹೆಚ್ಚಿಸುವುದು, 2024-25ರ ವೇಳೆಗೆ ಮೀನುಗಾರಿಕೆ ರಫ್ತು ಆದಾಯವನ್ನು 1,00,000 ಕೋಟಿ ರೂ.ಗೆ ಹೆಚ್ಚಿಸುವುದು, ಮೀನುಗಾರರ ಆದಾಯವನ್ನು ದ್ವಿಗುಣಗೊಳಿಸುವುದು, ಹಾರ್ವೆಸ್ಟ್ ನಂತರದ ನಷ್ಟವನ್ನು 20 -50% ರಿಂದ 10%ಕ್ಕೆ ಕಡಿಮೆ ಮಾಡುವುದು ಪಿಎಂಎಂಎಸ್ವೈ ಉದ್ದೇಶವಾಗಿದೆ. ಮೀನುಗಾರಿಕೆ ವಲಯ ಮತ್ತು ಸಂಬಂಧಿತ ಚಟುವಟಿಕೆಗಳಲ್ಲಿ ನೇರ ಮತ್ತು ಪರೋಕ್ಷವಾಗಿ ಹೆಚ್ಚುವರಿಯಾಗಿ 55 ಲಕ್ಷಗಳ ಲಾಭದಾಯಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿಯನ್ನೂ ಇ ಯೋಜನೆ ಹೊಂದಿದೆ.
ಮೀನು ಉತ್ಪಾದನೆ ಮತ್ತು ಉತ್ಪಾದಕತೆಯ ಅಂತರ ಕುಗ್ಗಿಸುವಿಕೆ, ಗುಣಮಟ್ಟ, ತಂತ್ರಜ್ಞಾನ, ಹಾರ್ವೆಸ್ಟ್ ನಂತರದ ಮೂಲಸೌಕರ್ಯ ಮತ್ತು ನಿರ್ವಹಣೆ, ಮೌಲ್ಯ ಸರಪಳಿಯನ್ನು ಆಧುನೀಕರಣಗೊಳಿಸುವುದು ಮತ್ತು ಬಲಪಡಿಸುವುದು, ದೃಢವಾದ ಮೀನುಗಾರಿಕೆ ನಿರ್ವಹಣಾ ಚೌಕಟ್ಟನ್ನು ಸ್ಥಾಪಿಸುವುದು ಮತ್ತು ಮೀನುಗಾರರ ಕಲ್ಯಾಣ ಮುಂತಾದ ಉದ್ದೇಶಗಳಿಗಾಗಿ ಪಿಎಂಎಂಎಸ್ವೈ ಅನ್ನು ವಿನ್ಯಾಸಗೊಳಿಸಲಾಗಿದೆ. ನೀಲಿ ಕ್ರಾಂತಿ ಯೋಜನೆಯ ಸಾಧನೆಗಳನ್ನು ಕ್ರೋಢಿಕರಿಸುವ ಗುರಿಯನ್ನು ಹೊಂದಿರುವ ಈ ಯೋಜನೆ, ಮೀನುಗಾರಿಕಾ ಹಡಗು ವಿಮೆ, ಮೀನುಗಾರಿಕಾ ಹಡಗುಗಳು / ದೋಣಿಗಳ ಖರೀದಿಗೆ, ಉನ್ನತೀಕರಣಕ್ಕೆ, ಜೈವಿಕ ಶೌಚಾಲಯಗಳ ನಿರ್ಮಾಣಕ್ಕೆ ಬೆಂಬಲ, ಲವಣಯುಕ್ತ / ಕ್ಷಾರೀಯ ಪ್ರದೇಶಗಳಲ್ಲಿ ಅಕ್ವಾಕಲ್ಚರ್, ಸಾಗರ್ ಮಿತ್ರಾಸ್, ಎಫ್ಎಫ್ಪಿಒ, ಮೀನುಗಾರಿಕೆ ಮತ್ತು ಅಕ್ವಾಕಲ್ಟರ್ ಸ್ಟಾರ್ಟ್ಅಪ್, ಇನ್ಕ್ಯುಬೇಟರ್, ಏಕೀಕೃತ ಅಕ್ವಾ ಪಾರ್ಕ್, ಏಕೀಕೃತ ಕರಾವಳಿ ಮೀನುಗಾರಿಕೆ ಗ್ರಾಮಗಳ ಅಭಿವೃದ್ಧಿ, ಅಕ್ವಾಟಿಕ್ ಲೈಬ್ರೆರಿ ನೆಟ್ವರ್ಕ್ ಮುಂತಾದುವುಗಳನ್ನು ಪಿಎಂಎಂಎಸ್ವೈ ರೂಪಿಸಿದೆ.
ಪಿಎಂಎಂಎಸ್ವೈ ಯೋಜನೆ ಮುಖ್ಯವಾಗಿ ‘ಕ್ಲಸ್ಟರ್ ಅಥವಾ ಏರಿಯಾ ಆಧಾರಿತ ವಿಧಾನಗಳನ್ನು’ ಅಳವಡಿಸಿಕೊಳ್ಳುವುದರತ್ತ ಗಮನ ಹರಿಸುತ್ತದೆ. ಫಾರ್ವರ್ಡ್ ಮತ್ತು ಬ್ಯಾಕ್ವರ್ಡ್ ಲಿಂಕೇಜ್ ಮೂಲಕ ಮೀನುಗಾರಿಕೆ ಸಮೂಹಗಳನ್ನು ರಚಿಸುವುದರ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಮೀನು ಕೃಷಿಯಂತಹ ಉದ್ಯೋಗ ಸೃಷ್ಟಿ ಚಟುವಟಿಕೆಗಳಿಗೆ ವಿಶೇಷ ಗಮನ ನೀಡುತ್ತದೆ. ಗುಣಮಟ್ಟದ ತಳಿ, ಬೀಜ ಮತ್ತು ಆಹಾರ, ಜಾತಿಗಳ ವೈವಿಧ್ಯೀಕರಣದ ಬಗ್ಗೆ ವಿಶೇಷ ಗಮನ, ನಿರ್ಣಾಯಕ ಮೂಲಸೌಕರ್ಯ, ಮಾರ್ಕೆಟಿಂಗ್ ನೆಟ್ವರ್ಕ್ಗಳು ಇತ್ಯಾದಿಗಳಿಗೆ ಇದು ಒತ್ತು ನೀಡುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.