ನವದೆಹಲಿ: ರಾಜ್ಯಗಳ ಸ್ಟಾರ್ಟ್-ಅಪ್ ಶ್ರೇಯಾಂಕ ಪಟ್ಟಿಯನ್ನು ಭಾರತ ಪ್ರಕಟಿಸಿದೆ. ಗುಜರಾತ್ ಅತ್ಯುತ್ತಮ ಪ್ರದರ್ಶಕನಾಗಿ ಹೊರಹೊಮ್ಮಿದರೆ, ಕರ್ನಾಟಕ ಮತ್ತು ಕೇರಳ ಉನ್ನತ ಪ್ರದರ್ಶಕರಾಗಿ ಹೊರಹೊಮ್ಮಿದೆ.
ರಾಜ್ಯಗಳ ಸ್ಟಾರ್ಟ್ಅಪ್ ಶ್ರೇಯಾಂಕ 2019ರಲ್ಲಿ ಕರ್ನಾಟಕವು ಸಾಂಸ್ಥಿಕ ನಾಯಕತ್ವದಲ್ಲಿ ಮೊದಲ ಸ್ಥಾನ, ರೆಗ್ಯುಲೇಟರಿ ಚೇಂಜ್ ಚಾಂಪಿಯನ್ಸ್ನಲ್ಲಿ ಮೊದಲ ಸ್ಥಾನ, ಖರೀದಿ ನಾಯಕತ್ವದಲ್ಲಿ ಮೊದಲ ಸ್ಥಾನ, ಇನ್ಕ್ಯೂಬೇಶನ್ ಹಬ್ನಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ.
ಕರ್ನಾಟಕ ಸರಕಾರವು ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಹಲವಾರು ಮಾದರಿ ಉಪಕ್ರಮಗಳನ್ನು ಕೈಗೊಂಡಿದೆ ಎಂದು ವರದಿಯು ತಿಳಿಸಿದೆ.
ಹೊಸ ಮತ್ತು ನಿರ್ಣಾಯಕ ತಂತ್ರಜ್ಞಾನಗಳಿಗೆ ಬೆಂಬಲವಾಗಿ ಭವಿಷ್ಯದ ನೀತಿಗಳ ರೂಪಿಸುವಿಕೆಯಲ್ಲಿ, ಉದಯೋನ್ಮುಖ ತಂತ್ರಜ್ಞಾನಗಳ ಮೇಲೆ ಕಾರ್ಯನಿರ್ವಹಿಸುತ್ತಿರುವ ಸ್ಟಾರ್ಟ್ ಅಪ್ಗಳು ಎದುರಿಸುತ್ತಿರುವ ಸವಾಲುಗಳನ್ನು ಪರಿಶೀಲಿಸಲು ನಿಯಂತ್ರಣ ಸಮಿತಿಗಳ ರಚನೆಯಲ್ಲಿ, ಮಾನ್ಯೀಕರಣ, ಅನುದಾನ ಮತ್ತು ಸ್ಥಳ ಸೇರಿದಂತೆ ಸ್ಟಾರ್ಟಪ್ ಗಳಿಗೆ ಸಮಗ್ರ ಉದ್ಯಮಶೀಲ ವೇದಿಕೆಯನ್ನು ಒದಗಿಸುವ ELEVATE ಎಂಬ ವಿನೂತನ ಉಪಕ್ರಮ ರಚಿಸುವ ಮೂಲಕ ಕರ್ನಾಟಕ ಅತ್ಯುತ್ತಮ ಸ್ಥಾನವನ್ನು ಪಡೆದುಕೊಂಡಿದೆ.
ಭಾರತ ಸರ್ಕಾರ ತನ್ನ ರಾಜ್ಯ ಸ್ಟಾರ್ಟ್-ಅಪ್ ಶ್ರೇಯಾಂಕದ ಎರಡನೇ ಆವೃತ್ತಿಯನ್ನು ಪ್ರಕಟಿಸಿದೆ. ಉದ್ಯಮಶೀಲವಾಗಿ ಅನುಕೂಲಕರ ವಾತಾವರಣವನ್ನು ಹೊಂದಲು ರಾಜ್ಯಗಳನ್ನು ಉತ್ತೇಜಿಸಲು ಮೋದಿ ಸರ್ಕಾರ ಈ ಶ್ರೇಯಾಂಕಗಳನ್ನು ಪ್ರಾರಂಭಿಸಿದೆ. ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಬೆಂಬಲಿಸಲು ರಾಜ್ಯ ಮಟ್ಟದಲ್ಲಿ ಸಾಮರ್ಥ್ಯಗಳನ್ನು ನಿರ್ಮಿಸುವುದು ಇದರ ಹಿಂದಿನ ಆಲೋಚನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.