ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 11 ಲಕ್ಷ 63 ಸಾವಿರ ಕೋವಿಡ್ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಇದುವರೆಗೆ ಪರೀಕ್ಷಿಸಲ್ಪಟ್ಟ ಒಟ್ಟು ಕೊರೋನಾ ಪರೀಕ್ಷೆಗಳ ಸಂಖ್ಯೆ ಸುಮಾರು ಐದು ಕೋಟಿ 40 ಲಕ್ಷ 97 ಸಾವಿರದ 975 ಎಂದು ಅಂಕಿಅಂಶಗಳು ತಿಳಿಸಿವೆ. ಭಾರತವು ಪ್ರಸ್ತುತ ದಿನನಿತ್ಯ ಅತೀ ಹೆಚ್ಚಿನ ಪರೀಕ್ಷೆಗಳನ್ನು ನಡೆಸುವ ದೇಶಗಳಲ್ಲಿ ಒಂದಾಗಿ ಹೊರಹೊಮ್ಮಿದೆ.
ಪ್ರಸ್ತುತ ದೇಶವು 1,467 ಪ್ರಯೋಗಾಲಯಗಳನ್ನು ಹೊಂದಿದೆ. ಇದರಲ್ಲಿ ಸರ್ಕಾರಿ 697 ಲ್ಯಾಬ್ಗಳಿದ್ದು, ಖಾಸಗಿ 651 ಲ್ಯಾಬ್ಗಳು ಇವೆ. ಸರಾಸರಿ ದೈನಂದಿನ ಪರೀಕ್ಷೆಯು ಎರಡು ತಿಂಗಳ ಅವಧಿಯಲ್ಲಿ 3.2 ಪಟ್ಟು ಹೆಚ್ಚಾಗಿದೆ. ಪ್ರಸ್ತುತ ವಾರದಲ್ಲಿ ಒಂದು ದಶಲಕ್ಷಕ್ಕೂ ಹೆಚ್ಚಿನ ಪರೀಕ್ಷೆಗಳನ್ನು ನಡೆಸಲಾಗಿದೆ. ಜನಸಂಖ್ಯೆಯ ಪ್ರತಿ ಮಿಲಿಯನ್ಗೆ ಮಾಡಿದ ಪರೀಕ್ಷೆಗಳ ಸಂಖ್ಯೆ ಎರಡು ತಿಂಗಳ ಅವಧಿಯಲ್ಲಿ ಸುಮಾರು ಆರು ಪಟ್ಟು ಹೆಚ್ಚಾಗಿದೆ ಮತ್ತು ಪ್ರಸ್ತುತ ಮಿಲಿಯನ್ ಜನಸಂಖ್ಯೆಗೆ ಸುಮಾರು 37 ಸಾವಿರ ಪರೀಕ್ಷೆ ನಡೆಸಲಾಗುತ್ತಿದೆ.
ಪರೀಕ್ಷೆಯಲ್ಲಿ ಹೆಚ್ಚಳದ ಹೊರತಾಗಿಯೂ ಪಾಸಿಟಿವ್ ಪ್ರಕರಣಗಳ ಪ್ರಮಾಣವು ಶೇಕಡಾ 8.5 ಕ್ಕಿಂತ ಕಡಿಮೆಯಾಗಿದೆ. ರಾಜಸ್ಥಾನ, ಉತ್ತರಪ್ರದೇಶ, ಪಂಜಾಬ್ ಮತ್ತು ಮಧ್ಯಪ್ರದೇಶಗಳಲ್ಲಿ ಪಾಸಿಟಿವ್ ಪ್ರಮಾಣವು ಶೇಕಡಾ ಐದುಕ್ಕಿಂತಲೂ ಕಡಿಮೆಯಾಗಿದೆ.
ಕೊರೋನಾ ವೈರಸ್ ಸಾಂಕ್ರಾಮಿಕ ರೋಗದಿಂದ ದೇಶದಲ್ಲಿ ಸುಮಾರು 35 ಲಕ್ಷ 50 ಸಾವಿರ ಜನರು ಚೇತರಿಸಿಕೊಂಡಿದ್ದಾರೆ. ಕಳೆದ 24 ಗಂಟೆಗಳಲ್ಲಿ, ಕೋವಿಡ್-19 ನಿಂದ 70 ಸಾವಿರ 880 ರೋಗಿಗಳ ಚೇತರಿಕೆಗೆ ಭಾರತ ಸಾಕ್ಷಿಯಾಗಿದೆ. ಒಟ್ಟಾರೆ ಚೇತರಿಕೆ ದರ ಈಗ ಶೇಕಡಾ 77.65 ಕ್ಕೆ ತಲುಪಿದೆ.
ಕಳೆದ 24 ಗಂಟೆಗಳಲ್ಲಿ, 96 ಸಾವಿರ 551 ಹೊಸ ಪ್ರಕರಣಗಳು ದಾಖಲಾಗಿದ್ದು, ಇದು ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆಯನ್ನು 45 ಲಕ್ಷ 62 ಸಾವಿರ 415 ಕ್ಕೆ ತೆಗೆದುಕೊಂಡಿವೆ ಎಂದು ವರದಿಗಳು ಹೇಳಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.