ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) 2019-20ನೇ ಸಾಲಿನ ನೌಕರರ ಭವಿಷ್ಯ ನಿಧಿ (ಇಪಿಎಫ್) ಗೆ 8.5 ಶೇಕಡಾ ಬಡ್ಡಿಯನ್ನು ಎರಡು ಕಂತುಗಳಲ್ಲಿ ನೀಡಲು ನಿರ್ಧರಿಸಿದೆ. ಸುಮಾರು 6 ಕೋಟಿ ಪಿಎಫ್ ಚಂದಾದಾರರಿಗೆ ಇದರಿಂದ ಪ್ರಯೋಜನ ಸಿಗಲಿದೆ.
ಇಪಿಎಫ್ಒ ಪ್ರಸ್ತುತ ಚಂದಾದಾರರ ಇಪಿಎಫ್ ಖಾತೆಗೆ ಶೇ .8.15 ರಷ್ಟು ಬಡ್ಡಿಯನ್ನು ನೀಡಲಿದ್ದು, 2019-20ರ ಇಪಿಎಫ್ ಮೇಲಿನ ಉಳಿದ 0.35 ಪ್ರತಿಶತದಷ್ಟು ಬಡ್ಡಿದರವನ್ನು ಈ ವರ್ಷದ ಡಿಸೆಂಬರ್ನಲ್ಲಿ ಚಂದಾದಾರರ ಖಾತೆಗೆ ಜಮಾ ಮಾಡಲಾಗುವುದು ಎಂದು ವರದಿ ತಿಳಿಸಿದೆ.
ಬುಧವಾರ ನಡೆದ ಇಪಿಎಫ್ಒ ಟ್ರಸ್ಟಿಗಳ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಇಪಿಎಫ್ಒನ ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟೀಸ್ (ಸಿಬಿಟಿ) ಡಿಸೆಂಬರ್ನಲ್ಲಿ ಮತ್ತೆ ಸಭೆ ಸೇರಲಿದೆ. ಉಳಿದ 0.35 ಶೇಕಡಾ ಬಡ್ಡಿಯನ್ನು ಚಂದಾದಾರರ ಖಾತೆಗೆ ಜಮಾ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ.
ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ನೇತೃತ್ವದ ಮಂಡಳಿಯು ಈ ವರ್ಷದ ಮಾರ್ಚ್ನಲ್ಲಿ ನಡೆದ ಸಭೆಯಲ್ಲಿ 2019-20ರಲ್ಲಿ ಶೇ .8.5 ರಷ್ಟು ಬಡ್ಡಿ ದರವನ್ನು ನೀಡಲು ನಿರ್ಧರಿಸಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.