ಇಂದು ಅಂತರರಾಷ್ಟ್ರೀಯ ಸಾಕ್ಷರತಾ ದಿನ. ಅಕ್ಷರ ಜ್ಞಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ವಿಶ್ವದಾದ್ಯಂತದ ದೇಶಗಳು ಈ ದಿನವನ್ನು ಆಚರಿಸುತ್ತವೆ. ಅಂತರರಾಷ್ಟ್ರೀಯ ಸಾಕ್ಷರತಾ ದಿನ -2020 ಕೋವಿಡ್ -19 ಬಿಕ್ಕಟ್ಟಿನಲ್ಲಿ ಮತ್ತು ಅದಕ್ಕೂ ಮೀರಿ ಸಾಕ್ಷರತೆ ಬೋಧನೆ ಮತ್ತು ಕಲಿಕೆಯ ಮೇಲೆ ಶಿಕ್ಷಕರ ಪಾತ್ರ ಮತ್ತು ಬದಲಾಗುತ್ತಿರುವ ಶಿಕ್ಷಣದ ಮೇಲೆ ಕೇಂದ್ರೀಕರಿಸುತ್ತದೆ.
ಸಾಕ್ಷರತೆಯ ಕಲಿಕೆಯನ್ನು ಜೀವನಪರ್ಯಂತದ ಕಲಿಕೆಯಾಗಿಸುವ ದೃಷ್ಟಿಕೋನದ ಮೇಲೆ ಈ ಬಾರಿಯ ಥೀಮ್ ಬೆಳಕು ಚೆಲ್ಲುತ್ತದ ಮತ್ತು ಮುಖ್ಯವಾಗಿ ಯುವಕರು ಮತ್ತು ವಯಸ್ಕರ ಮೇಲೆ ಕೇಂದ್ರೀಕರಿಸುತ್ತದೆ.
1966 ರ ಅಕ್ಟೋಬರ್ 26 ರಂದು ಯುನೆಸ್ಕೋದ ಸಾಮಾನ್ಯ ಸಭೆಯ 14 ನೇ ಅಧಿವೇಶನದಲ್ಲಿ ಈ ದಿನವನ್ನು ಯುನೆಸ್ಕೋ ಅಂತರರಾಷ್ಟ್ರೀಯ ಸಾಕ್ಷರತಾ ದಿನವೆಂದು ಘೋಷಿಸಿತು. ಇದನ್ನು ಮೊದಲ ಬಾರಿಗೆ 1967 ರಲ್ಲಿ ಆಚರಿಸಲಾಯಿತು ಮತ್ತು ವ್ಯಕ್ತಿಗಳು, ಸಮುದಾಯಗಳು ಮತ್ತು ಸಮಾಜಗಳಿಗೆ ಸಾಕ್ಷರತೆಯ ಮಹತ್ವವನ್ನು ಎತ್ತಿ ತೋರಿಸುವುದು ಇದರ ಮುಖ್ಯ ಗುರಿಯಾಗಿದೆ.
ಸಾಕಷ್ಟು ಪ್ರಗತಿಯ ಹೊರತಾಗಿಯೂ, ಸಾಕ್ಷರತೆಯ ಸವಾಲುಗಳು ಇಂದಿಗೂ ಜೀವಂತಾಗಿದೆ. ವಿಶ್ವಾದ್ಯಂತ ಕನಿಷ್ಠ 773 ಮಿಲಿಯನ್ ವಯಸ್ಕರು ಮೂಲಭೂತ ಸಾಕ್ಷರತಾ ಕೌಶಲ್ಯ ಹೊಂದಿಲ್ಲ. ಯುನೆಸ್ಕೋದ ‘ಎಲ್ಲರಿಗೂ ಶಿಕ್ಷಣದ ಜಾಗತಿಕ ಮೇಲ್ವಿಚಾರಣಾ ವರದಿ’ (2006) ಪ್ರಕಾರ, ದಕ್ಷಿಣ ಏಷ್ಯಾವು ಅತಿ ಕಡಿಮೆ ಪ್ರಾದೇಶಿಕ ವಯಸ್ಕರ ಸಾಕ್ಷರತಾ ಪ್ರಮಾಣವನ್ನು ಹೊಂದಿದೆ, ಇದು ಶೇಕಡಾ 58.6 ರಷ್ಟಿದೆ ಮತ್ತು ಈ ತೀವ್ರ ಬಡತನ ಮತ್ತು ಮಹಿಳೆಯರ ಮೇಲಿನ ಪೂರ್ವಾಗ್ರಹ ಈ ಅನಕ್ಷರತೆಗೆ ಕಾರಣಗಳು.
ಅನಕ್ಷರತೆಯನ್ನು ಹೋಗಲಾಡಿಸಿ ಭಾರತವನ್ನು ಸಂಪೂರ್ಣ ಸಾಕ್ಷರತಾಗೊಳಿಸುವ ನಿಟ್ಟಿನಲ್ಲಿ ಸರ್ಕಾರಗಳು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿವೆ.
ಸಾಕ್ಷರತೆ ಎಂಬುದು ಪ್ರತಿಯೊಬ್ಬರಿಗೂ ಘನತೆ ಮತ್ತು ಹಕ್ಕಿನ ಪ್ರಶ್ನೆಯಾಗಿರುತ್ತದೆ. ಸಾಕ್ಷರತೆ ಹೊಂದಿದ ಮನುಷ್ಯ ಬದುಕುತ್ತಾನೆ ಮತ್ತು ಆತನಿಗೆ ತನ್ನ ಹಕ್ಕಿನ ಬಗೆಗೆ ಸಂಪೂರ್ಣವಾದ ಜ್ಞಾನ ಇರುತ್ತದೆ. ಸಾಕ್ಷರತೆಯ ಅಗತ್ಯತೆಯ ಬಗ್ಗೆ ಅರಿವನ್ನು ಮೂಡಿಸುವ ಸಲುವಾಗಿಯೇ ಪ್ರತಿವರ್ಷ ಅಂತರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಣೆ ಮಾಡಲಾಗುತ್ತದೆ.
ಸರ್ಕಾರಗಳಿಗೆ, ನಾಗರಿಕ ಸಮಾಜಗಳಿಗೆ ಮತ್ತು ಜನರಿಗೆ ವಿಶ್ವದ ಸಾಕ್ಷರತಾ ಮಟ್ಟವನ್ನು ಸುಧಾರಿಸಲು ಅವಕಾಶವನ್ನು ಮತ್ತು ಸಾಕ್ಷರತಾ ಸವಾಲುಗಳನ್ನು ಮೀರಿ ನಿಲ್ಲಲು ಈ ದಿನ ನೀಡುತ್ತದೆ ಎಂದು ಯುನೆಸ್ಕೋ ಹೇಳುತ್ತದೆ.
ದೇಶದಾದ್ಯಂತ ಜನರಿಗೆ ತಮ್ಮ ಸಾಮಾಜಿಕ ಮತ್ತು ವೈಯಕ್ತಿಕ ಹಕ್ಕುಗಳ ಬಗ್ಗೆ ಅರಿವನ್ನು ಮೂಡಿಸುವುದು ಅಂತರಾಷ್ಟ್ರೀಯ ಸಾಕ್ಷರತಾ ದಿನದ ಆಚರಣೆಯ ಪ್ರಮುಖ ಉದ್ದೇಶವಾಗಿದೆ. ಸಾಕ್ಷರತೆಯನ್ನು ಸಾಮಾಜಿಕ ಮತ್ತು ವೈಯಕ್ತಿಕ ಅಭಿವೃದ್ಧಿಗೆ ಅತ್ಯಂತ ಪ್ರಮುಖವಾದ ಅಂಶ ಎಂದು ಪರಿಗಣಿಸಲಾಗಿದೆ.
ಬಡತನ ಪ್ರಮಾಣವನ್ನು ಕುಗ್ಗಿಸುವುದು, ಜನಸಂಖ್ಯೆಯನ್ನು ನಿಯಂತ್ರಿಸುವುದು, ಲಿಂಗ ಅಸಮಾನತೆಯನ್ನು ಹೋಗಲಾಡಿಸುವುದು ಇತ್ಯಾದಿಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕಾದರೆ ಪ್ರತಿಯೊಬ್ಬ ಮನುಷ್ಯನು ಸಾಕ್ಷರನಾಗಿರುವುದು ಅತಿ ಮುಖ್ಯವಾಗಿರುತ್ತದೆ.
ಬಡತನ ನಿರ್ಮೂಲನೆಯಿಂದ, ಜನಸಂಖ್ಯೆ ನಿಯಂತ್ರಣದಿಂದ ಮತ್ತು ಲಿಂಗ ಅಸಮಾನತೆಯನ್ನು ಹೋಗಲಾಡಿಸುವುದರಿಂದ ಜನರ ವೈಯುಕ್ತಿಕ ಬೆಳವಣಿಗೆ ಸಮಗ್ರ ರೀತಿಯಲ್ಲಿ ಆಗುತ್ತದೆ. ಇದು ರಾಷ್ಟ್ರ ಮತ್ತು ವಿಶ್ವದ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುತ್ತದೆ.
ಸಾಕ್ಷರತೆಯ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಯನ್ನು ಕಾಣಲಾಗಿದ್ದರೂ ಕೂಡ ಕೆಲವೊಂದು ಪ್ರದೇಶ ಮತ್ತು ಕೆಲವೊಂದು ಜನಾಂಗಗಳಲ್ಲಿ ಇನ್ನು ಕೂಡ ಸಾಕ್ಷರತೆಯು ನಿರೀಕ್ಷಿತ ಮಟ್ಟವನ್ನು ಮುಟ್ಟಿಲ್ಲ. ಹೀಗಾಗಿ ಶಿಕ್ಷಣದಲ್ಲಿ ಮತ್ತು ಸಾಕ್ಷರತ ಅಭಿವೃದ್ಧಿಯಲ್ಲಿ ಬಹುಭಾಷಿಕತೆ ಅಳವಡಿಸಿಕೊಳ್ಳುವುದರಿಂದ ಸಾಕ್ಷರತೆಯ ಸವಾಲುಗಳನ್ನು ಎದುರಿಸಲು ಸರಳವಾಗುತ್ತದೆ ಮತ್ತು ಇದರಿಂದ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ತಲುಪಬಹುದಾಗಿದೆ ಎಂಬುದಾಗಿ ಯುನೆಸ್ಕೋ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.