ರೋಹ್ಟಕ್: ಕೊರೋನಾ ಸೋಂಕಿನ ವಿರುದ್ಧ ಭಾರತವು ಸ್ಥಳೀಯವಾಗಿ ಅಭಿವೃದ್ಧಿ ಮಾಡಿರುವ ಭಾರತ್ ಬಯೋಟೆಕ್ ಸಂಸ್ಥೆಯ ಲಸಿಕೆ ಕೋವ್ಯಾಕ್ಸಿನ್ನ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗವು ಪಿಜಿಐ ರೋಹ್ಟಕ್ನಲ್ಲಿ ಪ್ರಾರಂಭವಾಗಲಿದೆ ಎಂದು ಸಂಸ್ಥೆಯ ಉಪ ಕುಲಪತಿ ಡಾ. ಒ. ಪಿ. ಕಲ್ರಾ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಭಾರತ ಬಯೋಟೆಕ್ನಿಂದಲೂ ಅನುಮೋದನೆ ಪಡೆಯಲಾಗಿದೆ. ಈ ಲಸಿಕೆಯ ಮಾನವ ಪ್ರಯೋಗಕ್ಕಾಗಿ 300 ಮಂದಿ ಸ್ವ ಇಚ್ಛೆಯಿಂದ ಪ್ರಯೋಗಕ್ಕೆ ಒಳಗಾಗುತ್ತಿದ್ದಾರೆ. 12 ರಿಂದ 65 ವರ್ಷದೊಳಗಿನ ಜನರನ್ನು ಈ ಪ್ರಕ್ರಿಯೆಗೆ ಒಳಪಡಿಸಲು ಬೇಕಾದ ವ್ಯವಸ್ಥೆಗಳನ್ನೂ ಮಾಡಲಾಗಿದ್ದು, ಈಗಾಗಲೇ 15 ಜನರ ಸ್ಕ್ರೀನಿಂಗ್ ಮುಗಿಸಿರುವುದಾಗಿಯೂ ಅವರು ತಿಳಿಸಿದ್ದಾರೆ. ನಾಳೆ ಬೆಳಗ್ಗೆಯ ಒಳಗಾಗಿ ಅವರು ಈ ವಾಕ್ಸಿನ್ನ ಡೋಸೇಜ್ ಪಡೆಯುವ ಭರವಸೆಯನ್ನೂ ಅವರು ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಅವರು ಟ್ವೀಟರ್ ಮೂಲಕವೂ ಮಾಹಿತಿ ನೀಡಿದ್ದಾರೆ.
ದೇಶದಲ್ಲಿ ಕೊರೋನಾ ನಿಯಂತ್ರಣ ಮಾಡುವ ಉದ್ದೇಶದಿಂದ ನೀಡಲಾಗುವ ಲಸಿಕೆಗಳಲ್ಲಿ ಕೋವ್ಯಾಕ್ಸಿನ್ ಲಸಿಕೆ ಮುಂಚೂಣಿಯಲ್ಲಿದೆ. ಇದು ಇನ್ಆಕ್ಟಿವೇಟೆಡ್ ಲಸಿಕೆಯಾಗಿದ್ದು, ಕೊರೋನಾ ವಿರುದ್ಧ ಹೋರಾಟ ನಡೆಸಲು ಬೇಕಾದ ಪ್ರತಿಕಾಯಗಳನ್ನು ಸೃಷ್ಟಿಸಿಕೊಳ್ಳಲು ದೇಹಕ್ಕೆ ಸಹಾಯ ಮಾಡಲಿದೆ. ಇದನ್ನು ದೇಹಕ್ಕೆ ಇಂಜೆಕ್ಟ್(ಸೇರಿಸುವ) ಮಾಡುವ ಮೂಲಕ ದೇಹದಲ್ಲಿ ವೈರಾಣುವಿನ ವಿರುದ್ಧ ಹೋರಾಟ ನಡೆಸಲು ಪೂರಕವಾಗುವಂತೆ ದೇಹವನ್ನು ಸಶಕ್ತಗೊಳಿಸಲು ಸಾಧ್ಯವಾಗಲಿದೆ.
ಈ ಲಸಿಕೆಗಳ ಕ್ಲಿನಿಕಲ್ ಪ್ರಯೋಗಗಳ ಪ್ರತಿಯೊಂದು ಹಂತವೂ ಅದರ ಸುರಕ್ಷತೆ ಮತ್ತು ಅದು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿದೆ ಎಂಬ ಅಂಶವನ್ನು ತಿಳಿಯಲು ಪೂರಕವಾಗಿದೆ. ಒಂದನೇ ಹಂತದಲ್ಲಿ ಸುರಕ್ಷತೆ, ಎರಡನೇ ಹಂತದಲ್ಲಿ ಪರಿಣಾಮ ಸೇರಿದಂತೆ ಒಟ್ಟು ಮೂರು ಹಂತದಲ್ಲಿ ಪರೀಕ್ಷೆಗೆ ಒಳಪಡುತ್ತದೆ ಎಂದು ಮೂಲಗಳು ತಿಳಿಸಿವೆ.
ಕೋವ್ಯಾಕ್ಸಿನ್ನಂತೆಯೇ ವೈರಲ್ ಡಿಎನ್ಎ ಜೈಡಸ್ ಕ್ಯಾಡಿಲಾ ಎಂಬ ಇನ್ನೊಂದು ಭಾರತೀಯ ಮೂಲದ ಲಸಿಕೆಯೂ ಕ್ಲಿನಿಕಲ್ ಟ್ರಯಲ್ ಹಂತದಲ್ಲಿದೆ. ಈ ಲಸಿಕೆಯನ್ನು ಐಸಿಎಂಆರ್ ಅಭಿವೃದ್ಧಿ ಮಾಡಿದೆ. ಅದರಂತೆ ಸೆರಂ ಇನ್ಸ್ಟಿಟ್ಯೂಟ್ ಅಭಿವೃದ್ಧಿ ಮಾಡಿರುವ ಅಕ್ಸ್ಫರ್ಡ್ ಲಸಿಕೆಯೂ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗದ ಹಂತದಲ್ಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.