ಮುಂಬಯಿ: ಶಿವಸೇನೆ ಮುಖಂಡ ಸಂಜಯ್ ರಾವತ್ ಅವರು ತನಗೆ ಬಹಿರಂಗ ಬೆದರಿಕೆ ಹಾಕಿದ್ದಾರೆ ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ಆರೋಪಿಸಿದ್ದಾರೆ.
ಟ್ವೀಟ್ ಮಾಡಿರುವ ಅವರು, “ಮುಂಬೈಗೆ ಬಾರದಂತೆ ಶಿವಸೇನೆ ಮುಖಂಡ ಸಂಜಯ್ ರಾವತ್ ನನಗೆ ಬಹಿರಂಗ ಬೆದರಿಕೆ ಹಾಕಿದ್ದಾರೆ. ಮುಂಬೈ ಬೀದಿಗಳಲ್ಲಿ ಆಜಾದಿ ಗದ್ದಲದ ಬಳಿಕ ಈಗ ಬಹಿರಂಗ ಬೆದರಿಕೆ. ಯಾಕೆ ಮುಂಬೈ ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ಥರ ಅನಿಸುತ್ತಿದೆ” ಎಂದಿದ್ದಾರೆ.
ಬಾಲಿವುಡ್ ಮಾಫಿಯಾಗಿಂತ ಮುಂಬೈ ಪೊಲೀಸರು ನನಗೆ ಹೆಚ್ಚು ಬೆದರಿಕೆಯಾಗಿದ್ದಾರೆ ಎಂದು ನಟಿ ಕಂಗಣಾ ಹಿಂದೆ ಹೇಳಿಕೊಂಡಿದ್ದರು. ಈ ಬಗ್ಗೆ ಸಾಮ್ನಾ ಪತ್ರಿಕೆಯಲ್ಲಿ ಬರೆದುಕೊಂಡಿದ್ದ ರಾವತ್, ಮುಂಬೈಗೆ ಬರಬೇಡಿ ಎಂದು ಅಕೆಗೆ ಹೇಳಿದ್ದರು.
ಕಂಗಣಾರಿಗೆ ಸಾರ್ವಜನಿಕವಾಗಿ ಛೀಮಾರಿ ಹಾಕಬೇಕು ಎಂದು ಮಾಡಲಾಗಿದ್ದ ಟ್ವೀಟ್ ಅನ್ನು ಮುಂಬೈ ಪೊಲೀಸ್ ಕಮಿಷನರ್ ಕಚೇರಿಯ ಟ್ವಿಟರ್ ಖಾತೆ ಲೈಕ್ ಮಾಡಿರುವುದು ಪತ್ತೆಯಾಗಿದೆ. ಆದರೆ ಈ ಆರೋಪವನ್ನು ಮುಂಬೈ ಕಮಿಷನರ್ ಕಚೇರಿ ಅಲ್ಲಗೆಳೆದಿದೆ. ಈ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದೆ. ಈ ಘಟನೆಯ ಬಳಿಕ ನಟಿ ಮುಂಬಯಿ ಪೊಲೀಸರ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಬಾಲಿವುಡ್ ಮಾಫಿಯಾ ಬಗ್ಗೆ ನಟಿ ಕಂಗಣಾ ಕಿಡಿ ಕಾಡುತ್ತಲೇ ಬರುತ್ತಿದ್ದಾರೆ. ಹೀಗಾಗಿ ಅವರ ಮೇಲೆ ಕೆಲವರು ಕೆಂಗಣ್ಣು ಬೀರಿದ್ದಾರೆ.
Sanjay Raut Shiv Sena leader has given me an open threat and asked me not to come back to Mumbai, after Aazadi graffitis in Mumbai streets and now open threats, why Mumbai is feeling like Pakistan occupied Kashmir? https://t.co/5V1VQLSxh1
— Kangana Ranaut (@KanganaTeam) September 3, 2020
You are a big sham in the name of police force, don’t you forget not just me all the people tagged got notifications of @CPMumbaiPolice liking the derogatory tweet, trying to prove victim a criminal seems your old dhandha, don’t you dare to lie @MumbaiPolice, don’t you dare .. https://t.co/6v5bwEE7An
— Kangana Ranaut (@KanganaTeam) September 2, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.