ನವದೆಹಲಿ: ಜಾಗತಿಕ ಆವಿಷ್ಕಾರ ಸೂಚ್ಯಂಕದಲ್ಲಿ ಭಾರತ ಮೊದಲ ಬಾರಿಗೆ ಅಗ್ರ 50 ದೇಶಗಳ ಗುಂಪನ್ನು ಸೇರಿಕೊಂಡಿದ್ದು, ನಾಲ್ಕು ಸ್ಥಾನಗಳ ಏರಿಕೆ ಕಂಡು 48 ನೇ ಸ್ಥಾನಕ್ಕೆ ತಲುಪಿದೆ. ಈ ಮೂಲಕ ಮಧ್ಯ ಮತ್ತು ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿ ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ.
ಜಾಗತಿಕ ಬೌದ್ಧಿಕ ಆಸ್ತಿ ಸಂಸ್ಥೆ (ಡಬ್ಲ್ಯುಐಪಿಒ), ಕಾರ್ನೆಲ್ ವಿಶ್ವವಿದ್ಯಾಲಯ ಮತ್ತು ಐಎನ್ಎಸ್ಇಎಡಿ ಬಿಸಿನೆಸ್ ಸ್ಕೂಲ್ ಜಂಟಿಯಾಗಿ ಬಿಡುಗಡೆ ಮಾಡಿದ 2020 ಗ್ಲೋಬಲ್ ಇನ್ನೋವೇಶನ್ ಇಂಡೆಕ್ಸ್ (ಜಿಐಐ) ಪಟ್ಟಿಯ ಪ್ರಕಾರ, ಭಾರತ ಅಗ್ರ 50ರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಚೀನಾ, ಭಾರತ, ಫಿಲಿಪೈನ್ಸ್ ಮತ್ತು ವಿಯೆಟ್ನಾಂ ವರ್ಷದಿಂದ ವರ್ಷಕ್ಕೆ ಆವಿಷ್ಕಾರ ಶ್ರೇಯಾಂಕದಲ್ಲಿ ಗಣನೀಯವಾಗಿ ಬೆಳವಣಿಗೆಯನ್ನು ದಾಖಲಿಸುತ್ತಿದೆ.
ಆವಿಷ್ಕಾರ ಶ್ರೇಯಾಂಕದಲ್ಲಿ ಸ್ವಿಟ್ಜರ್ಲೆಂಡ್, ಸ್ವೀಡನ್, ಯುಎಸ್, ಯುಕೆ ಮತ್ತು ನೆದರ್ಲ್ಯಾಂಡ್ಸ್ ಮುಂಚೂಣಿಯಲ್ಲಿವೆ. ಅಲ್ಲದೆ, ಅಗ್ರ 10 ಸ್ಥಾನಗಳಲ್ಲಿ ಹೆಚ್ಚು ಆದಾಯ ಹೊಂದಿದ ರಾಷ್ಟ್ರಗಳು ಪ್ರಾಬಲ್ಯ ಮೆರೆಯುತ್ತಿದೆ ಎಂದು ಡಬ್ಲ್ಯುಐಪಿಒ ಪ್ರಕಟಣೆಯಲ್ಲಿ ತಿಳಿಸಿದೆ.
“ಜಾಗತಿಕ ಆವಿಷ್ಕಾರ ಸೂಚ್ಯಂಕದಲ್ಲಿ ಭಾರತ 48 ನೇ ಸ್ಥಾನದಲ್ಲಿದೆ, ಮೊದಲ ಬಾರಿಗೆ ಅಗ್ರ -50 ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಕಡಿಮೆ ಮಧ್ಯಮ-ಆದಾಯದ ಗುಂಪು ಆರ್ಥಿಕತೆಗಳಲ್ಲಿ ಮೂರನೇ ಸ್ಥಾನದಲ್ಲಿದೆ. 2011 ರಿಂದ ಮಧ್ಯ ಮತ್ತು ದಕ್ಷಿಣ ಏಷ್ಯಾ ಪ್ರದೇಶದ ಅತ್ಯಂತ ನವೀನ ದೇಶವಾಗಿ ಹೊರಹೊಮ್ಮಿದೆ. ಐಸಿಟಿ ಸೇವೆಗಳ ರಫ್ತುಗಳಲ್ಲಿ 1 ನೇ ಸ್ಥಾನದಲ್ಲಿದೆ, ಉತ್ಪಾದಕತೆಯ ಬೆಳವಣಿಗೆಯ ದರದಲ್ಲಿ ಜಾಗತಿಕವಾಗಿ 9 ನೇ ಸ್ಥಾನದಲ್ಲಿದೆ. ಟಾಪ್ 100 ಜಾಗತಿಕ ಆವಿಷ್ಕಾರ ಕ್ಲಸ್ಟರ್ಗಳಲ್ಲಿ ಬೆಂಗಳೂರು, ದೆಹಲಿ ಮತ್ತು ಮುಂಬೈ ಸ್ಥಾನ ಪಡೆದುಕೊಂಡಿದೆ” ಎಂದು ವರದಿಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.