ನವದೆಹಲಿ: ವಾಹನಗಳ ಪರವಾನಗಿ ಮತ್ತು ಮೋಟಾರ್ ವಾಹನಗಳ ದಾಖಲೆಗಳ ಅವಧಿಯನ್ನು ಡಿಸೆಂಬರ್31 ರ ವರೆಗೆ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
1988 ರ ಮೋಟಾರ್ ವಾಹನ ಕಾಯ್ದೆ ಮತ್ತು ಕೇಂದ್ರ ಮೋಟಾರ್ ವಾಹನಗಳ ನಿಯಮ 1989 ರ ಅಡಿಯಲ್ಲಿ ಪರವಾನಗಿ, ಫಿಟ್ನೆಸ್, ನೋಂದಣಿ ಸೇರಿದಂತೆ ಇನ್ನಿತರ ದಾಖಲೆಗಳ ಅವಧಿಯನ್ನು ಈ ವರ್ಷದ ಡಿಸೆಂಬರ್ 31 ರ ವರೆಗೆ ವಿಸ್ತರಣೆ ಮಾಡಿರುವುದಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮಾಹಿತಿ ನೀಡಿದೆ.
ವಾಹನಗಳಿಗೆ ಸಂಬಂಧಿಸಿದಂತೆ ಎಲ್ಲಾ ಬಗೆಯ ದಾಖಲೆಗಳ ಸಿಂಧುತ್ವವನ್ನು ಡಿಸೆಂಬರ್ 31 ರ ತನಕ ಮಾನ್ಯಗೊಳಿಸಲಾಗಿದ್ದು, ಅವುಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಸೂಚಿಸಿದೆ. 2020ರ ಫೆಬ್ರವರಿ ತಿಂಗಳಿನಿಂದ ತೊಡಗಿದಂತೆ ಡಿಸೆಂಬರ್ ವರೆಗಿನ ಎಲ್ಲಾ ದಾಖಲೆಗಳೂ ಊರ್ಜಿತವಾಗಿರುತ್ತವೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಕೊರೋನಾ ಸಾಂಕ್ರಾಮಿಕ ಕಾಯಿಲೆಯ ಕಾರಣದಿಂದಾಗಿ ಈ ಕ್ರಮಕ್ಕೆ ಮುಂದಾಗಿರುವುದಾಗಿಯೂ ಸಚಿವಾಲಯ ಮಾಹಿತಿ ನೀಡಿದೆ. ಅಲ್ಲದೆ ಈ ವರ್ಷದ ಫೆಬ್ರವರಿ ನಂತರದ ತಿಂಗಳಿನಲ್ಲಿಯೇ ಮುಕ್ತಾಯವಾಗಲಿರುವ ದಾಖಲೆಗಳನ್ನು ಡಿಸೆಂಬರ್ 31 ರ ವರೆಗೆ ಮಾನ್ಯವೆಂದೇ ಪರಿಗಣಿಸಲು ಅಧಿಕಾರಿಗಳಿಗೂ ಸೂಚಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.