ನವದೆಹಲಿ: ಕೊರೋನಾವೈರಸ್ ಮಹಾಮಾರಿ ಜಗತ್ತಿನ ದೊಡ್ಡ ದೊಡ್ಡ ರಾಷ್ಟ್ರಗಳನ್ನು ನಡುಗಿಸಿ ಬಿಟ್ಟಿದೆ, ಜಾಗತಿಕ ನಾಯಕರು ಕೂಡ ಸಾಂಕ್ರಾಮಿಕದ ಕಾರಣದಿಂದಾಗಿ ಹೊಸ ರೂಢಿಗಳನ್ನು ಅನುಸರಿಸುವುದು ಅನಿವಾರ್ಯವಾಗಿದೆ. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಅನೇಕ ವಿಶ್ವ ನಾಯಕರು ಹ್ಯಾಂಡ್ ಶೇಕ್, ಹಗ್ಗಿಂಗ್ ಅನ್ನು ಬಿಟ್ಟು ಭಾರತದ ನಮಸ್ತೆಯನ್ನು ಅಳವಡಿಸಿಕೊಂಡಿದ್ದಾರೆ. ಭಾರತದ ನಮಸ್ತೆ ಈಗ ಜಾಗತೀಕರಣಗೊಂಡಿದೆ.
ಫ್ರೆಂಚ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೋನ್ ಮತ್ತು ಜರ್ಮನ್ ಚಾನ್ಸೆಲರ್ ಆಜೆಂಲಾ ಮಾರ್ಕೆಲ್ ಅವರು ಪರಸ್ಪರ ʼನಮಸ್ತೆʼ ಮೂಲಕ ಶುಭಶಯಗಳನ್ನು ವಿನಿಮಯ ಮಾಡಿಕೊಂಡಿರುವ ದೃಶ್ಯ ಈಗ ಸಾಕಷ್ಟು ವೈರಲ್ ಆಗಿದೆ.
ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಗುರುವಾರ ತಮ್ಮ ಮೆಡಿಟರೇನಿಯನ್ ಹಾಲಿಡೇ ರಿಟ್ರೀಟ್ಗಾಗಿ ಫ್ರಾನ್ಸ್ಗೆ ಆಗಮಿಸಿದ್ದಾರೆ. ಅವರನ್ನು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಸಾಂಪ್ರದಾಯಿಕ ಭಾರತೀಯ ಶೈಲಿಯ ನಮಸ್ತೆ ಮೂಲಕ ಸ್ವಾಗತಿಸಿದರು.
ಮ್ಯಾಕ್ರೋನ್ ಅವರು ಎರಡು ಕೈಜೋಡಿಸಿ ತಲೆ ಬಾಗಿ ಜರ್ಮನ್ ಚಾನ್ಸೆಲರ್ ಅನ್ನು ಸ್ವಾಗತಿಸಿದ್ದಾರೆ. ಆಕೆ ಕೂಡ ಮಡಚಿದ ಕೈಗಳ ಮೂಲಕ ಮ್ಯಾಕ್ರೋನ್ ಅವರಿಗೆ ಕೃತಜ್ಞತೆ ಅರ್ಪಿಸಿದ್ದಾರೆ.
ಮಾರ್ಚ್ನಲ್ಲೂ ಸ್ಪೇನ್ನ ರಾಜ ಮತ್ತು ರಾಣಿಯನ್ನು ಕೂಡ ಎಮ್ಯಾನುಯೆಲ್ ಮ್ಯಾಕ್ರೋನ್ ನಮಸ್ತೆಯೊಂದಿಗೆ ಸ್ವಾಗತಿಸಿದ್ದರು.
ಎಮ್ಯಾನುಯೆಲ್ ಮ್ಯಾಕ್ರೋನ್ ಮತ್ತು ಏಂಜೆಲಾ ಮರ್ಕೆಲ್ ಅವರು ಭಾರತೀಯ ಶೈಲಿಯಲ್ಲಿ ಶುಭ ಕೋರುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Namaste is Global !
📸:When Emmanuel Macron, President of France and Angela Merkel, Chancellor of Germany greet each other with Namastepic.twitter.com/jHUhW2CfPY
— All India Radio News (@airnewsalerts) August 20, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.