ನವದೆಹಲಿ: ಭಾರತದಲ್ಲಿ ಚೀನಾ ವಿರೋಧಿ ಭಾವನೆ ಈಗಾಗಲೇ ಉತ್ತುಂಗಕ್ಕೆ ಏರಿದೆ. ಸಾಕಷ್ಟು ಜನರು ಚೀನಿ ವಸ್ತುಗಳ ಖರೀದಿಗೆ ಸಂಪೂರ್ಣವಾದ ಬಹಿಷ್ಕಾರವನ್ನು ಹಾಕಿದ್ದಾರೆ. ಭಾರತದಲ್ಲಿ ಹೆಚ್ಚಿನ ಹೂಡಿಕೆಯನ್ನು ಅಕರ್ಷಿಸುವ ಸಲುವಾಗಿ ಸರ್ಕಾರ ಕೂಡ ಹೆಚ್ಚಿನ ಪ್ರೋತ್ಸಾಹಗಳನ್ನು ನೀಡುತ್ತಿದೆ.
ಚೀನಾ ವಿರೋಧಿ ನಿಲುವು ಭಾರತದಲ್ಲಿ ಉತ್ತಮವಾಗಿಯೇ ಕಾರ್ಯನಿರ್ವಹಿಸುತ್ತಿದೆ. ಏಕೆಂದರೆ ಎರಡು ಡಜನ್ಗಿಂತಲೂ ಹೆಚ್ಚು ಫೋನ್ ತಯಾರಕರು ಭಾರತದಲ್ಲಿ ಘಟಕಗಳನ್ನು ಸ್ಥಾಪಿಸಲು ನಿರ್ಧರಿಸಿದ್ದಾರೆ ಮತ್ತು 11.2 ಸಾವಿರ ಕೋಟಿ ರೂಪಾಯಿ ಹೂಡಿಕೆಯನ್ನು ಮಾಡಲಿದ್ದಾರೆ. ಈ ಮೂಲಕ ʼಮೇಡ್ ಇನ್ ಇಂಡಿಯಾʼಗೆ ಒತ್ತು ನೀಡಲಿದ್ದಾರೆ.
ಸ್ಯಾಮ್ಸಂಗ್ ಮತ್ತು ಆ್ಯಪಲ್ನಂತಹ ಕಂಪನಿಗಳು ಈಗ ಭಾರತದಲ್ಲಿ ಹೆಚ್ಚಿನ ಹೂಡಿಕೆ ಮಾಡಲು ಆಸಕ್ತಿ ತೋರಿಸುತ್ತಿವೆ ಎಂದು ವರದಿಗಳು ತಿಳಿಸಿವೆ.
ಸ್ಮಾರ್ಟ್ಫೋನ್ ತಯಾರಕರಲ್ಲದೆ, ಸರ್ಕಾರವು ಔಷಧೀಯ ವ್ಯವಹಾರಗಳಿಗೆ ಮತ್ತು ವಾಹನಗಳು, ಜವಳಿ ಮತ್ತು ಆಹಾರದಂತಹ ಇತರ ಕ್ಷೇತ್ರಗಳಿಗೆ ಇದೇ ರೀತಿಯ ಪ್ರೋತ್ಸಾಹವನ್ನು ನೀಡಿದೆ. ಭಾರತವು ಈ ಪ್ರೋತ್ಸಾಹದೊಂದಿಗೆ ಸ್ವಲ್ಪ ಗಮನವನ್ನು ಸೆಳೆದಿದ್ದರೂ, ನಾವು ಇನ್ನೂ ಉತ್ಪಾದನೆಗೆ ಹೆಚ್ಚು ಅನುಕೂಲಕರ ತಾಣವಾಗಿಲ್ಲ. ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಪ್ರಯತ್ನದ ಅಗತ್ಯವಿದೆ.
‘ಆತ್ಮನಿರ್ಭರ ಭಾರತ’ಕ್ಕೆ ಕೊಡುಗೆ ನೀಡುವಲ್ಲಿ ಗ್ರಾಹಕರು ದೊಡ್ಡ ಪಾತ್ರ ವಹಿಸುತ್ತಾರೆ. ‘ಮೇಡ್ ಇನ್ ಇಂಡಿಯಾ’ ಉತ್ಪನ್ನಗಳನ್ನು ನಾವು ಬಳಸುವ ಮತ್ತು ಉತ್ತೇಜಿಸುವ ವಿಷಯಗಳತ್ತ ಹೆಚ್ಚು ಜಾಗೃತರಾಗಿರಬೇಕಾದ ಅಗತ್ಯವಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.