ಬಿನಿಶ್ ದೇಸಾಯಿ ಗುಜರಾತ್ ಮೂಲದ ಇನ್ನೋವೇಟರ್ ಆಗಿದ್ದು, ಇವರನ್ನು ಭಾರತದ ಮರುಬಳಕೆ ವ್ಯಕ್ತಿ ಎಂದೂ ಕರೆಯಲಾಗುತ್ತದೆ. ಇವರು, ಕೈಗಾರಿಕಾ ತ್ಯಾಜ್ಯವನ್ನು ಮರುಬಳಕೆ ಮಾಡಿ ಸುಸ್ಥಿರ ಕಟ್ಟಡ ಸಾಮಗ್ರಿಗಳನ್ನು ತಯಾರಿಸಲು ತಂತ್ರಜ್ಞಾನಗಳನ್ನು ವಿನ್ಯಾಸಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖಗೊಂಡಿರುವ ಬಿಡ್ರೀಮ್ ಕಂಪನಿಯ ಸ್ಥಾಪಕರಾಗಿದ್ದಾರೆ.
ಪೇಪರ್ ಮಿಲ್ಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದಿಂದ ಪಿ-ಬ್ಲಾಕ್ ಇಟ್ಟಿಗೆಗಳನ್ನು ತಯಾರಿಸುವ ಆವಿಷ್ಕಾರ ಮಾಡಿರುವ ಇವರು, ಇದೀಗ ಅದೇ ರೀತಿಯ ಮತ್ತೊಂದು ಉತ್ಪನ್ನ ಪಿ-ಬ್ಲಾಕ್ 2.0 ಅನ್ನು ಹೊರ ತಂದಿದ್ದಾರೆ. ಇದರ ವಿಶೇಷತೆ ಎಂದರೆ, ಈ ಇಟ್ಟಿಗೆಗಳನ್ನು ಕೋವಿಡ್-19- ಸಂಬಂಧಿತ ಬಯೋಮೆಡಿಕಲ್ ತ್ಯಾಜ್ಯದಿಂದ ತಯಾರಿಸಲಾಗುತ್ತದೆ.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (ಸಿಪಿಸಿಬಿ) ವರದಿಯ ಪ್ರಕಾರ, ಭಾರತವು ಕೋವಿಡ್-19 ಸಂಬಂಧಿತ ಬಯೋಮೆಡಿಕಲ್ ತ್ಯಾಜ್ಯವನ್ನು ದಿನಕ್ಕೆ ಸುಮಾರು 101 ಮೆಟ್ರಿಕ್ ಟನ್ ಉತ್ಪಾದಿಸುತ್ತದೆ. ಇದು ದಿನಕ್ಕೆ ಉತ್ಪತ್ತಿಯಾಗುವ ಸುಮಾರು 609 ಮೆ.ಟನ್ಗಳ ಸಾಮಾನ್ಯ ಬಯೋಮೆಡಿಕಲ್ ತ್ಯಾಜ್ಯ ಉತ್ಪಾದನೆಗೆ ಹೆಚ್ಚುವರಿಯಾಗಿದೆ.
“ಫೇಸ್ಮಾಸ್ಕ್ಗಳು ಈಗ ಅನಿವಾರ್ಯ ಮತ್ತು ಏಕ-ಬಳಕೆಯ ಮುಖಗವಸುಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಆದರೆ, ಅವುಗಳನ್ನು ವಿಲೇವಾರಿ ಮಾಡಿದ ನಂತರ, ಅವು ಭೂಮಿಗೆ ಬೀಳುತ್ತವೆ. ಇದರಿಂದ ಭೂಮಿ ಕಲುಷಿತವಾಗುತ್ತದೆ. ಆದ್ದರಿಂದ, ನಾನು ಈಗಾಗಲೇ ತಯಾರಿಸುತ್ತಿರುವ ಇಟ್ಟಿಗೆಗಳೊಂದಿಗೆ ಇದನ್ನು ಕೂಡ ಏಕೆ ಸಂಯೋಜಿಸಬಾರದು ಎನ್ನುವ ನಿಟ್ಟಿನಲ್ಲಿ ಪ್ರ ಯತ್ನವನ್ನು ನಡೆಸಿದೆ ”ಎಂದು ಬಿನಿಶ್ ಹೇಳಿದ್ದಾರೆ.
ಪಿ-ಬ್ಲಾಕ್ 2.0 ಬಗ್ಗೆ
ಇಟ್ಟಿಗೆಗಳನ್ನು 52% ಕತ್ತರಿಸಿದ ಪಿಪಿಇ ವಸ್ತು, 45% ಕಾಗದದ ಸ್ಲಡ್ಜ್ ಮತ್ತು 3% ಬೈಂಡಿಂಗ್ ವಸ್ತುಗಳಿಂದ ಗಮ್ ಬೇಸ್ ಬಳಸಿ ತಯಾರಿಸಲಾಗುತ್ತದೆ.
“ಇಟ್ಟಿಗೆಯನ್ನು ತಯಾರಿಸುವ ಪ್ರಕ್ರಿಯೆಯು ಪಿ-ಬ್ಲಾಕ್ನಂತೆಯೇ ಇರುತ್ತದೆ, ಮತ್ತು ಮುಖಗವಸುಗಳು, ಗೌನ್ ಮತ್ತು ಹೆಡ್-ಕವರ್ಗಳನ್ನು ಒಳಗೊಂಡಿರುವ ನಾನ್ ಓವನ್ ಫ್ಯಾಬ್ರಿಕ್ ಬಳಸಿ ಮಾಡಿದ ಪಿಪಿಇ ಅನ್ನು ಬಳಸಿ ನಾನು ತಯಾರಿಸಿದ್ದೇನೆ. ನನ್ನ ಹೋಮ್-ಲ್ಯಾಬ್ನಲ್ಲಿ ನಾನು ಈ ವಿಧಾನವನ್ನು ಪ್ರಯೋಗಿಸಲು ಪ್ರಾರಂಭಿಸಿದೆ, ಮತ್ತು ಶೀಘ್ರದಲ್ಲೇ ನನ್ನ ಕಾರ್ಖಾನೆಯಲ್ಲಿ ಕೆಲವನ್ನು ತಯಾರು ಮಾಡಿದೆ ”ಎಂದು ಬಿನಿಶ್ ಹೇಳುತ್ತಾರೆ.
ಅದು ಯಶಸ್ವಿಯಾದ ನಂತರ, ಅವರು ತಮ್ಮ ಉತ್ಪನ್ನವನ್ನು ಪರೀಕ್ಷಿಸಲು ಮತ್ತು ಅನುಮೋದಿಸಲು ಕೆಲವು ಇಟ್ಟಿಗೆಗಳನ್ನು ಸ್ಥಳೀಯ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
“ಸಾಂಕ್ರಾಮಿಕ ರೋಗದಿಂದಾಗಿ ಪ್ರಮಾಣೀಕರಣಕ್ಕಾಗಿ ನಾವು ರಾಷ್ಟ್ರಮಟ್ಟದ ಲ್ಯಾಬ್ಗಳನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಆದರೆ ನಾವು ಅದನ್ನು ಸರ್ಕಾರಿ ಮಾನ್ಯತೆ ಪಡೆದ ಪ್ರಯೋಗಾಲಯದಿಂದ ಅನುಮೋದಿಸಿದ್ದೇವೆ. ಮೂಲಮಾದರಿಯ ಪರೀಕ್ಷೆಯ ಸಮಯದಲ್ಲಿ, ಇದು ಬಾಳಿಕೆಗಾಗಿ ಎಲ್ಲಾ ಪರೀಕ್ಷೆಗಳನ್ನು ಪಾಸು ಮಾಡಿತು ಮತ್ತು ಗುಣಮಟ್ಟದ ನಿರೀಕ್ಷೆಗಳನ್ನು ಮೀರಿಸಿದೆ ”ಎಂದು ಬಿನಿಶ್ ಹೇಳುತ್ತಾರೆ.
ಪ್ರತಿಯೊಂದು ಇಟ್ಟಿಗೆ ಗಾತ್ರ 12 x 8 x 4 ಇಂಚುಗಳು, ಮತ್ತು ಇದು ಪ್ರತಿ ಚದರ ಅಡಿಗೆ 7 ಕೆಜಿ ಬಯೋಮೆಡಿಕಲ್ ತ್ಯಾಜ್ಯವನ್ನು ಬಳಸಲಾಗುತ್ತದೆ. ಪಿ-ಬ್ಲಾಕ್ 1.0 ಗೆ ಹೋಲಿಸಿದರೆ ಇದು ಹಗುರ ಮತ್ತು ಬಲಶಾಲಿಯಾಗಿದೆ ಎಂದು ಬಿನಿಶ್ ಹೇಳಿಕೊಂಡಿದ್ದಾರೆ. ಇದು ಜಲನಿರೋಧಕ ಮತ್ತು ಬೆಂಕಿ ನಿರೋಧಕವಾಗಿದೆ, ಮತ್ತು ಪ್ರತಿ ತುಂಡಿಗೆ 2.8 ರೂ.ತಗಲುತ್ತದೆ.
ಸೆಪ್ಟೆಂಬರ್ನಿಂದ ಪೂರ್ಣ ಪ್ರಮಾಣದ ಉತ್ಪಾದನೆಯನ್ನು ಪ್ರಾರಂಭಿಸಲು ಮತ್ತು ಆಸ್ಪತ್ರೆಗಳು, ಶಾಲೆಗಳು, ಸಲೊನ್ಗಳಲ್ಲಿನ, ಬಸ್ ನಿಲ್ದಾಣಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಿಂದ ಬಯೋಮೆಡಿಕಲ್ ತ್ಯಾಜ್ಯವನ್ನು ‘ಪರಿಸರ ತೊಟ್ಟಿಗಳನ್ನು’ ಇರಿಸಿ ಸಂಗ್ರಹಿಸುವ ಮೂಲಕ ಇಟ್ಟಿಗೆ ತಯಾರಿಸಲು ಬಿನಿಶ್ ಆಶಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.