ಒಂಟಾರಿಯೊ: ಭಾರತ ತನ್ನ 74 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಸಜ್ಜಾಗುತ್ತಿದೆ, ಈ ಸಂದರ್ಭದಲ್ಲಿ ಭಾರತದ ಹೆಮ್ಮೆಯ ತ್ರಿವರ್ಣ ಧ್ವಜ ಕೆನಡಾದ ಅಪ್ರತಿಮ ನಿಯಾಗರಾ ಜಲಪಾತದಲ್ಲಿ ಶನಿವಾರ ಮೊದಲ ಬಾರಿಗೆ ಹಾರಾಡಲಿದೆ. ಇಲ್ಲಿ ಧ್ವಜಾರೋಹಣ ಸಮಾರಂಭ ಆಗಸ್ಟ್ 15 ರ ಸಂಜೆ ನಡೆಯಲಿದೆ ಎಂದು ವರದಿಗಳು ತಿಳಿಸಿವೆ.
ಟೊರೊಂಟೊದ 553 ಮೀಟರ್ ಎತ್ತರದ ಸಿಎನ್ ಟವರ್ ಸೇರಿದಂತೆ ಕೆನಡಾದ ಇತರ ಮಹತ್ವದ ಸ್ಥಳಗಳಲ್ಲಿ ಭಾರತೀಯ ಧ್ವಜವನ್ನು ಹಾರಿಸಲಾಗುತ್ತಿದೆ.
ಟೊರೊಂಟೊದ ಸಿಟಿ ಹಾಲ್ ಬಳಿಯ ಮೂರು ಆಯಾಮದ ಟೊರೊಂಟೊ ಚಿಹ್ನೆಯು ಶನಿವಾರ ಮತ್ತು ಭಾನುವಾರ ಭಾರತದ ಧ್ವಜದ ಬಣ್ಣಗಳಲ್ಲಿ ಬೆಳಗಲಿದೆ.
ಟೊರೊಂಟೊದ ಭಾರತದ ಕಾನ್ಸುಲ್ ಜನರಲ್ ಅಪೂರ್ವಾ ಶ್ರೀವಾಸ್ತವ ಈ ಬಗ್ಗೆ ಮಾಹಿತಿಯನ್ನು ನೀಡಿದ್ದು, “ಈ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ನಿಯಾಗರಾ ಫಾಲ್ಸ್, ಸಿಎನ್ ಟವರ್ ಮತ್ತು ಟೊರೊಂಟೊ ಚಿಹ್ನೆಯಂತಹ ಸಾಂಪ್ರದಾಯಿಕ ಸ್ಥಳಗಳು ಭಾರತದ ತ್ರಿವರ್ಣ ಧ್ವಜದ ಬಣ್ಣಗಳಿಂದ ಬೆಳಗುತ್ತವೆ ಎಂಬುದು ಬಹಳ ಹೆಮ್ಮೆಯ ವಿಷಯವಾಗಿದೆ” ಎಂದಿದ್ದಾರೆ.
ಕೊರೋನಾವೈರಸ್ ಸಾಂಕ್ರಾಮಿಕ ನಿರ್ಬಂಧಗಳಿಂದಾಗಿ ಈ ವರ್ಷ, ಭಾರತೀಯ ಸ್ವಾತಂತ್ರ್ಯ ದಿನಾಚರಣೆಯು ಆನ್ಲೈನ್ನಲ್ಲಿ ಹೆಚ್ಚು ನಡೆಯಲಿದೆ. ಒಟ್ಟಾವಾದಲ್ಲಿನ ಭಾರತೀಯ ಹೈಕಮಿಷನ್ ಮತ್ತು ಟೊರೊಂಟೊ ಮತ್ತು ವ್ಯಾಂಕೋವರ್ನ ಕಾನ್ಸುಲೇಟ್ಗಳಲ್ಲಿ ಸಾಂಪ್ರದಾಯಿಕ ಧ್ವಜಾರೋಹಣ ಸಮಾರಂಭವನ್ನು ನೇರ ಪ್ರಸಾರ ಮಾಡಲಾಗುತ್ತದೆ.
ಕೆನಡಾದಲ್ಲಿ ಭಾರತೀಯ ಸಮುದಾಯದ ಪ್ರತಿ ವರ್ಷ ನಡೆಸುವ ಪ್ರಮುಖ ಕಾರ್ಯಕ್ರಮವಾದ ಇಂಡಿಯಾ ಡೇ ಪೆರೇಡ್ ಪ್ರತಿವರ್ಷ ಸಾವಿರಾರು ಜನರನ್ನು ಆಕರ್ಷಿಸುತ್ತದೆ. ಆದರೆ ಈ ವರ್ಷ, ವರ್ಚುವಲ್ ಅಗಿ ಪೆರೇಡ್ ನಡೆಯಲಿದೆ. ಇದರ ಭಾಗವಾಗಿ ಭಾರತದ ವಿವಿಧ ಭಾಗಗಳ ಸಂಸ್ಕೃತಿ ಮತ್ತು ಪಾಕಪದ್ಧತಿಗಳನ್ನು ಅನ್ಲೈನ್ ಮೂಲಕ ಪ್ರದರ್ಶಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.