ಲಕ್ನೋ: ಉತ್ತರಪ್ರದೇಶದಲ್ಲಿನ ಐಐಟಿ ಕಾನ್ಪುರ BEEG (Bio-compost Enriched Eco-friendly Globule) ಎಂಬ ಹೆಸರಿನ ದೇಶೀಯ ಬೀಜದ ಚೆಂಡುಗಳನ್ನು ಅಭಿವೃದ್ಧಿಪಡಿಸಿದೆ. ಇದು ಜನರು ಮತ್ತು ರೈತರಿಗೆ ತೋಟದಲ್ಲಿ ಕೊರೋನಾ ಕಾಲದಲ್ಲಿ ಸುರಕ್ಷತೆಯೊಂದಿಗೆ ತೋಟಗಾರಿಕೆ ನಡೆಸಲು ಸಹಾಯ ಮಾಡುತ್ತದೆ ಮತ್ತು ಜನರಿಗೆ ಉದ್ಯೋಗವನ್ನು ಒದಿಸಲು ಸಹಾಯ ಮಾಡಲಿದೆ.
BEEG ಅನ್ನು ಅಗ್ನಿಸ್ ವೇಸ್ಟ್ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್ (ಐಐಟಿ ಕಾನ್ಪುರದ ಸ್ಟಾರ್ಟ್-ಅಪ್) ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ವರದಿಗಳ ಪ್ರಕಾರ, ಬೀಜದ ಚೆಂಡುಗಳು ಸ್ಥಳೀಯ ವೈವಿಧ್ಯಮಯ ಬೀಜಗಳು, ಕಾಂಪೋಸ್ಟ್ ಮತ್ತು ಜೇಡಿಮಣ್ಣಿನಿಂದ ಕೂಡಿದೆ. ಸಸಿಗಳನ್ನು ನೆಡಲು ಹೊಂಡಗಳನ್ನು ಅಗೆಯುವ ಅಗತ್ಯವಿಲ್ಲ. ಈ ಬೀಜದ ಚೆಂಡುಗಳನ್ನು ಉದ್ದೇಶಿತ ಸ್ಥಳಗಳಿಗೆ ಎಸೆಯಬೇಕು ಮತ್ತು ನೀರಿನ ಸಂಪರ್ಕಕ್ಕೆ ಬಂದಾಗ ಅವು ಮೊಳಕೆಯೊಡೆಯುತ್ತವೆ.
ಐಐಟಿ ಪ್ರೊಫೆಸರ್ ಜೆ.ರಾಜ್ಕುಮಾರ್ ಅವರು ಹೇಳುವಂತೆ, BEEG ಸೂಕ್ತ ವಸ್ತುಗಳು ಮತ್ತು ಬೀಜಗಳಿಂದ ಸಮೃದ್ಧವಾಗಿದೆ, ಮಳೆಗಾಲದಲ್ಲಿ ಸಸಿಗಳನ್ನು ನೆಡಲು ಇದು ಹೆಚ್ಚು ಪೂರಕವಾಗಿದೆ. ಸಾಮಾಜಿಕ ಅಂತರದ ನಿಯಮದೊಂದಿಗೆ ಕೋವಿಡ್ ಸಂದರ್ಭದಲ್ಲೂ ದೊಡ್ಡ ಪ್ರಮಾಣದಲ್ಲಿ ಇದರಿಂದ ಗಿಡಗಳನ್ನು ಬೆಳೆಸಲು ಸಾಧ್ಯ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.