ಮುಂಬೈ: ಬಾಲಿವುಡ್ ನಟಿ ಆಲಿಯಾ ಭಟ್ನ ಮೊದಲ ಹೋಂ ಪ್ರೊಡಕ್ಷನ್ ಚಿತ್ರ ಸಡಕ್ 2 ಬಿಡುಗಡೆಗೂ ಮುನ್ನವೇ ಇದೀಗ ವಿವಾದವನ್ನು ಹುಟ್ಟು ಹಾಕಿದೆ.
ಸುದೀರ್ಘ 20 ವರ್ಷಗಳ ಬಳಿಕ ಈಗ ಅಲಿಯಾ ತಂದೆ ಮಹೇಶ್ ಭಟ್ ನಿರ್ದೇಶಿಸಿರುವ ಸಡಕ್ 2 ಚಿತ್ರ ವಿವಾದಗಳನ್ನು ಹುಟ್ಟುಹಾಕಿದೆ. ಹಿಂದೂ ಧರ್ಮೀಯರ ಧಾರ್ಮಿಕ ಭಾವನೆಗೆ ಘಾಸಿಯಾಗುವಂತಹ ವಿಚಾರಗಳನ್ನು ಈ ಚಿತ್ರ ಒಳಗೊಂಡಿದ್ದು, ಚಿತ್ರದ ನಿರ್ಮಾಪಕರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ ತಿಳಿಸಿದೆ.
ಇಸ್ಲಾಂ ಧರ್ಮದ ವೈಭವೀಕರಣ, ಹಿಂದೂ ಧರ್ಮದ ಅವಹೇಳನ ಮಾಡುವಂತಹ ಅನೇಕ ಚಿತ್ರಗಳು ಈ ಹಿಂದೆಯೂ ಬಾಲಿವುಡ್ನಲ್ಲಿ ಬಂದಿವೆ. ಸಡಕ್ 2 ಚಿತ್ರದಲ್ಲಿಯೂ ಹಿಂದೂಗಳಿಗೆ ಪೂಜ್ಯರಾಗಿರುವ ಸಾಧು ಸಂತರನ್ನು ಕೆಟ್ಟದ್ದಾಗಿ ಬಿಂಬಿಸಲಾಗಿದ್ದು, ಆ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಈ ಚಿತ್ರವನ್ನು ಬಹಿಷ್ಕರಿಸಬೇಕಾಗಿದೆ ಎಂದು ಹಿಂದೂಗಳು ಒಗ್ಗಟ್ಟಿನ ಪ್ರತಿಕ್ರಿಯೆ ನೀಡಿದ್ದಾರೆ.
ಕಳೆದ ತಿಂಗಳಷ್ಟೇ ಈ ಚಿತ್ರದ ಪೋಸ್ಟರ್ ಹಾಟ್ ಸ್ಟಾರ್ನಲ್ಲಿ ಬಿಡುಗಡೆಯಾಗಿದ್ದು, ಹಿಂದೂ ಧಾರ್ಮಿಕ ಭಾವನೆಗಳಿಗೆ ನೋವು ಮಾಡಲಾಗಿದೆ ಎಂದು ಚಿತ್ರ ತಂಡದ ವಿರುದ್ಧ ಬಿಹಾರದ ಮುಜಾಫರ್ಪುರದ ನ್ಯಾಯಾಲಯದಲ್ಲಿಯೂ ದಾವೆ ಹೂಡಲಾಗಿತ್ತು. ಈ ಚಿತ್ರದಲ್ಲಿ ಕೈಲಾಸ, ಮಾನಸ ಸರೋವರದ ಚಿತ್ರಗಳನ್ನು ಬಳಕೆ ಮಾಡಿರುವುದಕ್ಕೂ ವಿರೋಧ ವ್ಯಕ್ತವಾಗಿತ್ತು. ಜೊತೆಗೆ ಈ ಚಿತ್ರ ಸ್ವಜನಪಕ್ಷಪಾತವನ್ನು ಪೋಷಿಸುವಂತಿದೆ ಎಂದು ವಿಎಚ್ಪಿಯ ನಾಯಕ ವಿಜಯ ಶಂಕರ್ ತಿವಾರಿ ಅವರು ಟ್ವೀಟ್ ಮಾಡಿದ್ದಾರೆ.
ಇನ್ನು ಈ ಚಿತ್ರವನ್ನು ವಿರೋಧಿಸಿ ನೆಟ್ಟಿಗರು #ಅನ್ಇನ್ಟಾಲ್ ಹಾಟ್ಸ್ಟಾರ್ ಎಂಬ ಅಭಿಯಾನವನ್ನೂ ಆರಂಭಿಸಿದ್ದು, ಚಿತ್ರಕ್ಕೆ ಬಹಿಷ್ಕಾರ ಹಾಕಿದ್ದಾರೆ. ಇನ್ನೇನು ಆಗಸ್ಟ್ 28 ರಂದು ಈ ಚಿತ್ರವನ್ನು ಹಾಟ್ಸ್ಟಾರ್ ಮತ್ತು ಡಿಸ್ನಿ ಯಲ್ಲಿ ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ. ಈ ನಡುವೆ ಈ ಎಲ್ಲಾ ಬೆಳವಣಿಗೆಗಳು ಕಂಡು ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಸಿನಿಮಾದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಆಲಿಯಾ ಭಟ್ ಇನ್ಸ್ಟಾಗ್ರಾಂ ಮೆಸೇಜ್, ಟ್ವಿಟರ್ ಸೇರಿದಂತೆ ಎಲ್ಲಾ ರೀತಿಯ ಸಾಮಾಜಿಕ ಜಾಲತಾಣದಿಂದಲೂ ಕಾಮೆಂಟ್ ವಿಭಾಗವನ್ನು ತೆಗೆದು ಹಾಕಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.