ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆಯು ಸೋಮವಾರ ಸಂಜೆ ಆಪರೇಷನ್ ಲಾಲ್ಪುರ ಪ್ರಾರಂಭಿಸಿದೆ. ಈ ಕಾರ್ಯಾಚರಣೆಯಲ್ಲಿ ಸೇನೆ ಮೂವರು ಶಂಕಿತರನ್ನು ಬಂಧಿಸಿದ್ದು, 1 ಎಕೆ ಮತ್ತು ಮ್ಯಾಗಜೀನ್ಗಳೊಂದಿಗೆ 2 ಪಿಸ್ತೂಲ್ ಸೇರಿದಂತೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ.
ಟ್ವಿಟ್ ಮಾಡಿರುವ ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್, ” ಆಪರೇಶನ್ ಲಾಲ್ಪುರ, ಕುಪ್ವಾರಾ. ಮಾಹಿತಿಯನ್ನು ಆಧರಿಸಿ ಜಂಟಿ ಶೋಧ ಕಾರ್ಯಾಚರಣೆಯನ್ನು ನಿನ್ನೆ ಸಂಜೆ ಪ್ರಾರಂಭಿಸಲಾಯಿತು. ಮೂವರು ಶಂಕಿತರನ್ನು ಬಂಧಿಸಲಾಗಿದೆ. ಮ್ಯಾಗಜೀನ್ಗಳು ಮತ್ತು ಮದ್ದುಗುಂಡುಗಳನ್ನು ಹೊಂದಿರುವ 1 ಎಕೆ ಮತ್ತು 2 ಪಿಸ್ತೂಲ್ಗಳನ್ನು ವಶಕ್ಕೆ ಪಡೆಯಲಾಗಿದೆ. ಜಂಟಿ ಕಾರ್ಯಾಚರಣೆ ಪ್ರಗತಿಯಲ್ಲಿದೆ” ಎಂದಿದೆ.
ಈ ನಡುವೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸೋಮವಾರ ಉತ್ತರ ಕಾಶ್ಮೀರದ ಸೊಪೋರ್ನಲ್ಲಿ ಇಬ್ಬರು ಭೂಗತ ಉಗ್ರ ಸಹಚರರನ್ನು ಬಂಧಿಸಿದ್ದಾರೆ. ಬಂಧಿತ ಉಗ್ರ ಸಹಚರರಿಂದ ಒಂದು ಕೈ ಗ್ರೆನೇಡ್ ಮತ್ತು ಎಕೆ -47 ರೌಂಡ್ಸ್ 20 ಸೇರಿದಂತೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸೈನ್ಯದ 22 ಆರ್ಆರ್, ಎಸ್ಒಜಿ ಸೊಪೋರ್, ಸಿಆರ್ಪಿಎಫ್ ಜಂಟಿ ತಂಡವು ನಾಕಾ ತಪಾಸಣೆಯ ಸಂದರ್ಭದಲ್ಲಿ ಆರೋಪಿಗಳನ್ನು ಹಿಡಿದಿದೆ.
Op Lalpura, #Kupwara. Joint search operation was launched late evening yesterday on @JmuKmrPolice inputs. Three suspects apprehended. 1 AK & 2 pistols with magazines & ammunition recovered. Joint Operation in progress.#TerrorismFreeKashmir#Kashmir @adgpi@NorthernComd_IA pic.twitter.com/sQLw4lrSxB
— Chinar Corps – Indian Army (@ChinarcorpsIA) August 11, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.