ವಾಷಿಂಗ್ಟನ್: ಅಮೆರಿಕಾದ ನ್ಯೂಯಾರ್ಕ್ನಲ್ಲಿರುವ ಪ್ರತಿಷ್ಠಿತ ಐಕಾನಿಕ್ ಟೈಮ್ಸ್ ಸ್ಕ್ವೇರ್ನ ದೈತ್ಯ ಬಿಲ್ ಬೋರ್ಡ್ನಲ್ಲಿ ನಿನ್ನೆ ಶ್ರೀ ರಾಮ ಮತ್ತು ರಾಮ ಮಂದಿರದ 3ಡಿ ಚಿತ್ರಗಳು ಜನಮನ ಸೆಳೆಯಿತು.
ಅದೆಷ್ಟೋ ಶತಕಗಳಿಂದ ಭಾರತೀಯರು ಕಂಡ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕನಸು ನನಸಾಗುವ ಕಾಲ ಸನ್ನಿಹಿತವಾಗಿದ್ದು, ಅದಕ್ಕಾಗಿ ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಭೂಮಿಪೂಜೆ ನಡೆಸಿ ಶಂಕುಸ್ಥಾಪನೆ ಮಾಡಿದ್ದರು. ಈ ಅದ್ದೂರಿ ಐತಿಹಾಸಿಕ ಸಮಾರಂಭಕ್ಕೆ ಅಮೆರಿಕವೂ ಹರ್ಷ ವ್ಯಕ್ತಪಡಿಸಿದ್ದು, ಟೈಮ್ಸ್ ಸ್ಕ್ವೇರ್ ನಲ್ಲಿ ರಾಮ ಮತ್ತು ರಾಮ ಮಂದಿರದ ಚಿತ್ರ ಮೂಡಿ ಬಂತು. ಈ ವೇಳೆ ಅನಿವಾಸಿ ಭಾರತೀಯರ ಜೊತೆಗೆ, ಅಮೆರಿಕದ ರಾಮ ಭಕ್ತರೂ ಸಂಭ್ರಮಿಸಿದ್ದಾರೆ .
ಜಾಹೀರಾತು ಪ್ರದರ್ಶಿಸುವ ಬೃಹತ್ ನಾಸ್ಡಾಕ್ ಪರದೆಗಳು ಮತ್ತು 17, 000 ಚದರ ಅಡಿಗಳಯ ಎಲ್ಇಡಿ ಪರದೆಯಲ್ಲಿ ರಾಮನನ್ನು ಮತ್ತು ನೂತನ ಮಂದಿರದ ನೀಲನಕ್ಷೆಯನ್ನು ಪ್ರದರ್ಶಿಸಲಾಗಿದ್ದು ಇದು ಕೋಟ್ಯಂತರ ಭಕ್ತರಲ್ಲಿ ಸಂತೋಷವನ್ನು ಇಮ್ಮಡಿಗೊಳಿಸಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳೂ ತಿಳಿಸಿದ್ದಾರೆ. ಈ ರಾಮನ ಎಚ್.ಡಿ. ಪ್ರದರ್ಶನ ಅತ್ಯಂತ ದುಬಾರಿಯ ಡಿಜಿಟಲ್ ಬಿಲ್ ಬೋರ್ಡ್ ಗಳಲ್ಲಿ ಒಂದಾಗಿದೆ ಎಂದೂ ಸಂಬಂಧಿಸಿದ ಮೂಲಗಳು ಹೇಳಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.