ಬೆಂಗಳೂರು: ರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಲು ಉತ್ತರ ಪ್ರದೇಶದ ಅಯೋಧ್ಯೆಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೆನಪಿನ ಕಾಣಿಕೆಯಾಗಿ ಕರ್ನಾಟಕದಲ್ಲಿ ಕೋದಂಡರಾಮನ ಮರದ ಮೂರ್ತಿಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನೀಡಿದ್ದಾರೆ.
ರಾಜ್ಯದ ರಮಾನಾಥ್ ಆಚಾರ್ಯ ಎಂಬುವವರು ಈ ಸುಂದರ ಮೂರ್ತಿಗೆ ರೂಪ ನೀಡಿದವರಾಗಿದ್ದಾರೆ. ಮರದಲ್ಲಿ ಈ ಮೂರ್ತಿಯನ್ನು ಸಿದ್ಧ ಮಾಡಲಾಗಿದ್ದು, ಕಲಾವಿದ ರಮಾನಾಥ ಆಚಾರ್ಯ ಅವರ ಕೈಚಳಕದಲ್ಲಿ ಈ ಮೂರ್ತಿ ರೂಪುಗೊಂಡಿದೆ. ಇಂದು ನರೇಂದ್ರ ಮೋದಿ ಅವರನ್ನು ಸೇರಿದೆ.
ರಾಮ ಮಂದಿರ ನಿರ್ಮಾಣದ ವಿಚಾರಕ್ಕೆ ಸಂಬಂಧಿಸಿದಂತೆ ಅಯೋಧ್ಯೆ ಮತ್ತು ಕರ್ನಾಟಕಕ್ಕೆ ಕೆಲವೊಂದು ಸಂಬಂಧಗಳಿದ್ದು, ಭೂಮಿಪೂಜೆಗೆ ಘಳಿಗೆ ತಿಳಿಸಿದವರು ಬೆಳಗಾವಿ ಮೂಲದವರಾಗಿದ್ದಾರೆ. ಜೊತೆಗೆ ಇಂದು ಅಯೋಧ್ಯೆಯಲ್ಲಿ ನೀಡಲಾದ ಲಡ್ಡು ಪ್ರಸಾದದಲ್ಲಿ ರಾಜ್ಯದ ನಂದಿನಿ ತುಪ್ಪವನ್ನು ಬಳಕೆ ಮಾಡಲಾಗಿದೆ. ಇವೆಲ್ಲದರ ಜೊತೆಗೆ ಮೋದಿ ಅವರಿಗೆ ನೀಡಲಾದ ನೆನಪಿನ ಕಾಣಿಕೆ ಕೋದಂಡರಾಮನನ್ನೂ ಕರ್ನಾಟಕದಲ್ಲೇ ಸಿದ್ಧಪಡಿಸಲಾಗಿದ್ದು, ಈ ಎಲ್ಲಾ ವಿಚಾರಗಳೂ ರಾಜ್ಯದ ಹಿರಿಮೆಯನ್ನು ಹೆಚ್ಚಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.