ಶ್ರೀನಗರ: ಭಾರತದ ಭಾಗವೇ ಆಗಿದ್ದರೂ ಕಾಶ್ಮೀರಕ್ಕೆ ಪ್ರತ್ಯೇಕತೆ ಒದಗಿಸಿ ಕೊಟ್ಟಿದ್ದ 370 ಮತ್ತು 35ಎ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿ ಇಂದಿಗೆ ಒಂದು ವರ್ಷವಾಗಿದೆ. ಈ ದಿನವನ್ನು ವಿಶೇಷವಾಗಿ ಆಚರಿಸಲು ಮುಂದಾಗಿರುವ ಭಾರತೀಯ ಜನತಾ ಪಕ್ಷ ಕಣಿವೆ ರಾಜ್ಯದಲ್ಲಿ ಆಗಸ್ಟ್5 ರಿಂದ ತೊಡಗಿದಂತೆ 20 ರ ವರೆಗೆ 15 ದಿನಗಳ ಕಾಲ ವಿಭಿನ್ನವಾಗಿ ಆಚರಿಸಲು ಮುಂದಾಗಿದೆ. ಕೊರೋನಾ ನಿಯಂತ್ರಣ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡೇ ಈ ಸಂಭ್ರಮವನ್ನು 15 ದಿನಗಳ ಕಾಲ ಆಚರಿಸಲಾಗುವುದಾಗಿಯೂ ಅಧಿಕೃತ ಮೂಲಗಳು ಮಾಹಿತಿ ನೀಡಿವೆ.
ಈ ಸಂಬಂಧ ಇಂದು ರಾಜ್ಯದ ಅನಂತ್ನಾಗ್ ಜಿಲ್ಲೆಯ ಲಾಲ್ ಚೌಕ್ನಲ್ಲಿ ಬಿಜೆಪಿ ಸದಸ್ಯೆ ರುಮೈಸಾ ರಫೀಕ್ ಅವರು ತ್ರಿವರ್ಣ ಧ್ವಜ ಹಾರಿಸುವ ಮೂಲಕ ಈ ದಿನದ ವರ್ಷಾಚರಣೆ ನಡೆಸಿದರು. ಬಳಿಕ ರಾಷ್ಟ್ರಗೀತೆ ಹಾಡಿ, ಧ್ವಜ ವಂದನೆಯನ್ನೂ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ದೇಶದ ಏಕತೆ ಮತ್ತು ಒಗ್ಗಟ್ಟಿಗೆ ಸಂಬಂಧಿಸಿದಂತೆ ದೃಢ ನಿಶ್ಚಯಗಳನ್ನು ತೆಗೆದುಕೊಳ್ಳುವ ಪ್ರಧಾನ ಮಂತ್ರಿಯನ್ನು ಹೊಂದಿರುವುದು ನಮ್ಮೆಲ್ಲರ ಅದೃಷ್ಟ. ಆರ್ಟಿಕಲ್ 370 ಮತ್ತು 35 ಎ ಅನ್ನು ಬಳಸಿಕೊಂಡು ಈ ಮೊದಲು ರಾಜಕೀಯ ಮಾಡಲಾಗುತ್ತಿತ್ತು. ಇದರಿಂದಾಗಿ ಕಣಿವೆ ರಾಜ್ಯದಲ್ಲಿ ಅಭಿವೃದ್ಧಿಯೂ ಕನಸಾಗಿತ್ತು. ಆದರೆ ಈ ವಿಧಿಗಳನ್ನು ರದ್ದುಗೊಳಿಸಿದ ಬಳಿಕ ಜಮ್ಮು ಕಾಶ್ಮೀರ ಅಭಿವೃದ್ಧಿಯತ್ತ ತೆರೆದುಕೊಳ್ಳಲಾರಂಭಿಸಿದೆ ಎಂದು ರುಮೈಸಾ ತಿಳಿಸಿದ್ದಾರೆ.
ದೇಶ ನರೇಂದ್ರ ಮೋದಿ, ಅಮಿತ್ ಶಾ ರಂತಹ ಸಮರ್ಥ ನಾಯಕತ್ವದಲ್ಲಿ ಅಭಿವೃದ್ಧಿಯತ್ತ ಹೆಜ್ಜೆ ಇಡುತ್ತಿದೆ. ಇದು ಭಾರತೀಯರಿಗೆ ಹೆಮ್ಮೆ ಪಡುವಂತಹ ವಿಚಾರವಾಗಿದೆ ಎಂದು ಅವರು ತಿಳಿಸಿದ್ದಾರೆ. ಜೊತೆಗೆ ಕೊರೋನಾ ಕುರಿತಂತೆಯೂ ಮಾತನಾಡಿರುವ ಅವರು, ಕೇಂದ್ರ ಸರ್ಕಾರದ ನಿಯಂತ್ರಣ ನಿಯಮಗಳನ್ನು ಅನುಸರಿಸಿಕೊಂಡು ಸೋಂಕು ತಗುಲದಂತೆ ಎಚ್ಚರವಹಿಸುವಂತೆಯೂ ಜನರಿಗೆ ಕಿವಿಮಾತು ಹೇಳಿದ್ದಾರೆ. ಜೊತೆಗೆ ಎಲ್ಲಾ ಸಂದರ್ಭಗಳಲ್ಲಿಯೂ ಪಕ್ಷಕ್ಕೆ ಬೆಂಬಲ ನೀಡುತ್ತಿರುವ ಎಲ್ಲರಿಗೂ ಅವರು ಧನ್ಯವಾದ ತಿಳಿಸಿದ್ದಾರೆ.
Jammu and Kashmir: Bharatiya Janata Party member Rumysa Rafiq hoists the national flag at Lal Chowk in Anantnag pic.twitter.com/Ryd1przmEm
— ANI (@ANI) August 5, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.