ನವದೆಹಲಿ: ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನದಲ್ಲಿ ವಿಶ್ವವೇ ನಗುವಂತಹ ಸನ್ನಿವೇಶವೊಂದು ನಡೆದಿದೆ. ಅದೇನೆಂದರೆ ಅಲ್ಲಿನ ಪ್ರಮುಖ ಸುದ್ದಿವಾಹಿನಿ ಡಾನ್ ಹ್ಯಾಕ್ಗೆ ಒಳಗಾಗಿದೆ. ಅದರಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಾಡಿದ್ದು, ಭಾರತದ ಸ್ವಾತಂತ್ರ್ಯೋತ್ಸವಕ್ಕೆ ಶುಭಾಶಯಗಳು ಮೂಡಿ ಬಂದಿವೆ.
ಸುದ್ದಿ ವಾಹಿನಿ ಜಾಹಿರಾತು ಪ್ರಸಾರ ಮಾಡುತ್ತಿದ್ದ ನಡುವೆಯೇ ಪರದೆಯ ಮೇಲೆ ಭಾರತದ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಮತ್ತು ತ್ರಿವರ್ಣ ಧ್ವಜದ ಚಿತ್ರ ಪ್ರಸಾರವಾಗಿದೆ. ಇದರಿಂದ ಇಡೀ ಪಾಕಿಸ್ಥಾನ ಅರೆಕ್ಷಣ ಬೆಚ್ಚಿ ಬೀಳುವಂತೆ ಆಗಿದೆ.
ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲರೂ ಪಾಕಿಸ್ಥಾನದ ಕಾಲೆಳೆಯತೊಡಗಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ ಮಧ್ಯಾಹ್ನ 3:30ಕ್ಕೆ ಈ ದೃಶ್ಯ ಪ್ರಸಾರವಾಗಿತ್ತು.
ಡಾನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ” ಜಾಹಿರಾತು ಪ್ರಕಟಿಸುತ್ತಿದ್ದಾಗ ಏಕಾ ಏಕಿ ಭಾರತದ ತ್ರಿವರ್ಣ ಧ್ವಜ ಮೂಡಿ ಬಂದಿದೆ. ಕೆಲವು ಸಮಯದ ನಂತರ ಇದು ಮಾಯವಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ” ಎಂದು ತಿಳಿಸಿದೆ.
ಇದಕ್ಕೂ ಮುನ್ನ ಕಳೆದ ತಿಂಗಳಲ್ಲಿ ಪಿಒಕೆ ಸರ್ಕಾರದ ವೆಬ್ ಸೈಟ್ ಕೂಡ ಹ್ಯಾಕ್ ಆಗಿತ್ತು. ಹಲವು ಇತರ ಘಟನೆಗಳೂ ಅಲ್ಲಿ ನಡೆದಿದೆ. ಪಾಕಿಸ್ಥಾನದಲ್ಲಿ ಸೈಬರ್ ವಲಯ ಸೇಫ್ ಆಗಿಲ್ಲ ಎಂಬುದಕ್ಕೆ ಇದು ಉದಾಹರಣೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.