ಲಂಡನ್: ಕೊರೋನಾವೈರಸ್ ಲಾಕ್ಡೌನ್ ಸಮಯದಲ್ಲಿ ಜನರು ಸದೃಢವಾಗಿರುವಂತೆ ಸಹಾಯ ಮಾಡಲು ಆನ್ಲೈನ್ನಲ್ಲಿ ತಮ್ಮ ನೃತ್ಯ ತರಗತಿಗಳನ್ನು ಉಚಿತ ಭಾಂಗ್ರಾ ಸೆಷನ್ ಆಗಿ ಪರಿವರ್ತಿಸಿದ ಭಾರತೀಯ ಮೂಲದ ನೃತ್ಯಗಾರರೊಬ್ಬರು ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ರಿಂದ ಪಾಯಿಂಟ್ ಆಫ್ ಲೈಟ್ ಗೌರವವನ್ನು ಪಡೆದಿದ್ದಾರೆ.
ಭಾಂಗ್ರಾ ನೃತ್ಯವು ಲವಲವಿಕೆ, ಶಕ್ತಿಯನ್ನು ತರುವ ವ್ಯಾಯಾಮದ ವಿಧಾನವಾಗಿದೆ, ಸಾಂಕ್ರಾಮಿಕ ಸಂದರ್ಭದಲ್ಲಿ ಜನರು ಸದೃಢವಾಗಿರಲು ಸಹಾಯಕಾರಿಯಾಗಿದೆ ಎಂದು ನಂಬಿರುವ ರಾಜೀವ್ ಗುಪ್ತ ಅವರು ಆನ್ ಲೈನ್ ಮೂಲಕ ಉಚಿತವಾಗಿ ಭಾಂಗ್ರಾ ನೃತ್ಯ ಸೆಷನ್ ಅನ್ನು ನಡೆಸುತ್ತಿದ್ದಾರೆ.
ಸಾಂಪ್ರದಾಯಿಕ ಭಾರತೀಯ ನೃತ್ಯ ಪ್ರಕಾರವಾದ ಭಾಂಗ್ರಾ, ಕ್ರಿಯಾಶೀಲವಾಗಿ ಮತ್ತು ಸಕಾರಾತ್ಮಕವಾಗಿ ಜೀವಿಸಲು ಸಹಾಯ ಮಾಡುತ್ತದೆ. ಈ ಉದ್ದೇಶದಿಂದ ಲಾಕ್ಡೌನ್ ಸಂದರ್ಭದಲ್ಲಿ ಭಾಂಗ್ರಾ ಆನ್ಲೈ ಸೆಷನ್ ಪ್ರಾರಂಭಿಸಿದರು ಮತ್ತು ಸಾಮಾಜಿಕ ಮಾಧ್ಯಮ ಲೈವ್ ಸ್ಟ್ರೀಮ್ಗಳ ಮೂಲಕ ಇದನ್ನು ಪ್ರಸಾರಗೊಳಿಸಿದರು. ಇದು ಹೆಚ್ಚೆಚ್ಚು ಜನರನ್ನು ತಲುಪಿದೆ.
ಕಳೆದ ತಿಂಗಳು, ಇದು ಅವರಿಗೆ ಪಾಯಿಂಟ್ ಆಫ್ ಲೈಟ್ ಎಂಬ ಗೌರವವನ್ನು ತಂದುಕೊಟ್ಟಿದೆ. ಪ್ರತಿ ವಾರವೂ ಯುಕೆ ಪ್ರಧಾನ ಮಂತ್ರಿ ಅತ್ಯುತ್ತಮ ಸ್ವಯಂಸೇವಕರು ಮತ್ತು ಸಮುದಾಯದಲ್ಲಿ ಬದಲಾವಣೆ ತರುವ ಜನರಿಗೆ ಈ ಗೌರವವನ್ನು ಪ್ರದಾನಿಸುತ್ತಾರೆ.
ಕಳೆದ ಕೆಲವು ತಿಂಗಳುಗಳಲ್ಲಿ, ನಿಮ್ಮ ಆನ್ಲೈನ್ ಭಂಗ್ರಾ ತರಗತಿಗಳು ದೇಶಾದ್ಯಂತ ಮತ್ತು ಅದರಾಚೆ ಭಾಗವಹಿಸಿದವರಲ್ಲಿ ಶಕ್ತಿಯ ವೃದ್ಧಿಯನ್ನು ತಂದುಕೊಟ್ಟಿವೆ, ಕೊರೋನಾವೈರಸ್ ವಿರುದ್ಧದ ನಮ್ಮ ಯುದ್ಧದ ಸಮಯದಲ್ಲಿ ಮನೆಯಲ್ಲಿಯೇ ಉಳಿದುಕೊಂಡಿರುವ ಸಾವಿರಾರು ಜನರ ದೇಹ ಮತ್ತು ಮನಸ್ಸನ್ನು ಇದು ಕ್ರಿಯಾಶೀಲಗೊಳಿಸಿದೆ “ಎಂದು ಜಾನ್ಸನ್ ವೈಯಕ್ತಿಕವಾಗಿ ಗುಪ್ತ ಅವರಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.