Monday, July 27th, 2015
News13
ಕಾಸರಗೋಡು: ಗಲ್ಫ್ ಪ್ರವಾಸಿಗಳನ್ನು ಲೂಟಿ ಮಾಡುತ್ತಿರುವ ಏರ್ ಇಂಡಿಯಾವನ್ನು ರದ್ದು ಗೊಳಿಸಿ ಇಲ್ಲವಾದರೆ ಅದನ್ನು ಖಾಸಗೀಕರಣ ಗೊಳಿಸಿ ಎಂಬುದಾಗಿ ಕೆ ಪಿ ಸಿ ಸಿ ಪ್ರತಿನಿಧಿ ಹಾಗೂ ಮಾಜಿ ಸಚಿವ ಎಂ ಎಂ ಹಸನ್ ಆಗ್ರಹಿಸಿದ್ದಾರೆ. ಅವರು ಕಾಸರಗೊಡಿನಲ್ಲಿ ಸುದ್ದಿಗಾರರಲ್ಲಿ ಮಾತನಾಡುತಿದ್ದರು.
ಪ್ರವಾಸಿಗಳು ಬೇಡಿಕೆಯಿಡುವುದು ಎರಡೇ ವಿಷಯ ಒಂದು ಏರ್ ಇಂಡಿಯಾ ಸರ್ವೀಸ್ ಗಳನ್ನು ಸರಿಪಡಿಸಿರಿ.ಇನ್ನೊಂದು ಹಬ್ಬದ ಸಂದರ್ಭಗಳಲ್ಲಿ ಅಥವಾ ಶಾಲಾ ಕಾಲೇಜು ರಜೆಗಳಲ್ಲಿ ವರ್ಧನೆ ಮಾಡುತ್ತಿರುವ ವಿಮಾನ ಪ್ರಯಾಣ ದರವನ್ನು ನಿಲ್ಲಿಸಿ ಎಂಬಂದು ಪ್ರವಾಸಿಗಳ ಪ್ರಮುಖ ಬೇಡಿಕೆ. ಇದು ಏರ್ ಇಂಡಿಯಾ ಅಧಿಕೃತರಿಗೆ ಸಾಧ್ಯವಾಗುದಿಲ್ಲವಾದರೆ ಏರ್ ಇಂಡಿಯಾ ಸರ್ವೀಸನ್ನು ರದ್ದು ಗೊಳಿಸಿ ಅಥವಾ ಅದನ್ನು ಖಾಸಗೀಕರಣ ಗೊಳಿಸಿ ಎಂದು ಆಗ್ರಹಿಸಲಾಗಿದೆ.
ಇದು ಕಾಂಗ್ರೆಸ್ ನ ಆಗ್ರಹ ಕೂಡಾ ಆಗಿದೆ. ಯುಪಿಎ ಸರಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಕೂಡಾ ಇದೇ ಹೇಳಿಕೆಯನ್ನು ಹೇಳಿರುವುದಾಗಿ ಅವರು ಪುನರುಚ್ಚರಿಸಿದರು. ಏರ್ ಇಂಡಿಯಾ ಪ್ರವಾಸಿಗಳನ್ನು ಲೂಟಿ ಮಾಡುವ ಹಿನ್ನೆಲೆಯಲ್ಲಿ ಕೇರಳ ಸರಕಾರ ಏರ್ ಕೇರಳ ಎಂಬ ವಿಮಾನವನ್ನು ಆರಂಭಿಸಲು ತೀರ್ಮಾನಕ್ಕೆ ಬರಲು ಕಾರಣವೆಂಬುದಾಗಿ ಎಂ ಎಂ ಹಸನ್ ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.