ನವದೆಹಲಿ: ಉತ್ತಮ ಗುಣಮಟ್ಟದ ಮತ್ತು ಕೈಗೆಟುಕುವ ಬೆಲೆಯಿಂದಾಗಿ ಖಾದಿ ಫೇಸ್ ಮಾಸ್ಕ್ಗಳ ಜನಪ್ರಿಯತೆ ದೇಶಾದ್ಯಂತ ಹೆಚ್ಚುತ್ತಿದೆ. ಇದೀಗ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗವು (ಕೆವಿಐಸಿ) 1.80 ಲಕ್ಷ ಫೇಸ್ ಮಾಸ್ಕ್ಗಳನ್ನು ಪೂರೈಸಲು ಭಾರತೀಯ ರೆಡ್ಕ್ರಾಸ್ ಸೊಸೈಟಿಯಿಂದ (ಐಆರ್ಸಿಎಸ್) ಆರ್ಡರ್ ಅನ್ನು ಸ್ವೀಕರಿಸಿದೆ. ಈ ಬಗ್ಗೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ ಗುರುವಾರ ಪ್ರಕಟಣೆಯಲ್ಲಿ ತಿಳಿಸಿದೆ.
ವರದಿಗಳ ಪ್ರಕಾರ ಮುಂದಿನ ತಿಂಗಳಿನಿಂದ ರೆಡ್ ಕ್ರಾಸ್ ಇಂಡಿಯಾಗೆ ಸರಬರಾಜು ಮಾಡಲಿರುವ ಫೇಸ್ ಮಾಸ್ಕ್ಗಳನ್ನು ಕೆಂಪು ಪೈಪಿಂಗ್ನೊಂದಿಗೆ ಕಂದು ಬಣ್ಣದಲ್ಲಿ ಶೇ 100 ರಷ್ಟು ಡಬಲ್-ಟ್ವಿಸ್ಟೆಡ್ ಹತ್ತಿ ಬಟ್ಟೆಯಿಂದ ತಯಾರಿಸಲಾಗುವುದು ಎಂದು ಕೆವಿಐಸಿ ತಿಳಿಸಿದೆ.
ಕೆವಿಐಸಿ ವಿಶೇಷವಾಗಿ ಎರಡು-ಲೇಯರ್ಡ್ ಹತ್ತಿ ಮುಖಗವಸುಗಳನ್ನು ಭಾರತೀಯ ರೆಡ್ಕ್ರಾಸ್ ಸೊಸೈಟಿ ಒದಗಿಸಿದ ಮಾದರಿಗಳ ಪ್ರಕಾರವೇ ವಿನ್ಯಾಸಗೊಳಿಸಿದೆ. ಮುಖಗವಸು ಎಡಭಾಗದಲ್ಲಿ ಸೂಕ್ತವಾಗಿ ಮುದ್ರಿತ IRCS ಲೋಗೊ ಮತ್ತು ಬಲಭಾಗದಲ್ಲಿ ಖಾದಿ ಇಂಡಿಯಾ ಟ್ಯಾಗ್ ಅನ್ನು ಹೊಂದಿರುತ್ತದೆ.
ಆರ್ಡರ್ ಅನ್ನು ಕಾರ್ಯಗತಗೊಳಿಸಲು 20,000 ಮೀ ಗಿಂತಲೂ ಹೆಚ್ಚಿನ ಬಟ್ಟೆಯ ಅಗತ್ಯವಿರುತ್ತದೆ, ಇದು ಖಾದಿ ಕುಶಲಕರ್ಮಿಗಳಿಗೆ 9000 ಹೆಚ್ಚುವರಿ ಮಾನವ ದಿನಗಳ ಉದ್ಯೋಗವನ್ನು ಉತ್ಪಾದಿಸುತ್ತದೆ ಎಂದು ಸಚಿವಾಲಯ ತಿಳಿಸಿದೆ.
ರೆಡ್ ಕ್ರಾಸ್ ಆರ್ಡರ್ ಅನ್ನು ಸ್ವಾಗತಿಸಿದ ಕೆವಿಐಸಿ ಅಧ್ಯಕ್ಷ ವಿನಯ್ ಸಕ್ಸೇನಾ, ಖಾದಿ ಫೇಸ್ ಮಾಸ್ಕ್ಗಳ ಭಾರಿ ಬೇಡಿಕೆಯು “ಆತ್ಮನಿರ್ಭರ ಭಾರತ” ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ ಎಂದು ಹೇಳಿದರು.
“ಈ ಆರ್ಡರ್ ನಮ್ಮ ಖಾದಿ ಕುಶಲಕರ್ಮಿಗಳಿಗೆ ಹೆಚ್ಚಿನ ನೂಲು ಮತ್ತು ಬಟ್ಟೆಯನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ ಮತ್ತು ಈ ಕಷ್ಟದ ಸಮಯದಲ್ಲಿ ಅವರ ಆದಾಯವನ್ನು ಮತ್ತಷ್ಟು ಹೆಚ್ಚಿಸುತ್ತದೆ” ಎಂದು ಸಕ್ಸೇನಾ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.