ನವದೆಹಲಿ: ಸಿಂಗಾಪುರದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜುಲೈ 28 ರಂದು ಭಾರತ ಮೂಲದ ರಾಜಕಾರಣಿ ಪ್ರೀತಮ್ ಸಿಂಗ್ ಅವರನ್ನು ಪ್ರತಿಪಕ್ಷದ ನಾಯಕರಾಗಿ ನೇಮಿಸಲಾಯಿತು. ಅಂತರರಾಷ್ಟ್ರೀಯ ಮಾಧ್ಯಮವೊಂದರ ಪ್ರಕಾರ, ಜುಲೈನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿದ 93 ಸ್ಥಾನಗಳ ಪೈಕಿ ಸಿಂಗ್ ಅವರ ವರ್ಕರ್ಸ್ ಪಾರ್ಟಿ 10 ಸಂಸದೀಯ ಸ್ಥಾನಗಳನ್ನು ಗೆದ್ದುಕೊಂಡಿತು. ಹೀಗಾಗಿ ಅವರ ಪಕ್ಷವು ಸಿಂಗಾಪುರದ ಸಂಸತ್ತಿನಲ್ಲಿ ಅತಿದೊಡ್ಡ ವಿರೋಧ ಪಕ್ಷವಾಗಿ ಹೊರಹೊಮ್ಮಿತು.
43 ವರ್ಷದ ಪ್ರೀತಮ್ ಸಿಂಗ್ ಅವರು, ವರ್ಕರ್ಸ್ ಪಾರ್ಟಿಯ ಪ್ರಧಾನ ಕಾರ್ಯದರ್ಶಿ. ಪ್ರಧಾನ ಮಂತ್ರಿ ಲೀ ಹ್ಸೀನ್ ಲೂಂಗ್ ಅವರ ಆಡಳಿರೂಢ ಪೀಪಲ್ಸ್ ಆಕ್ಷನ್ ಪಾರ್ಟಿ ಸಾರ್ವತ್ರಿಕ ಚುನಾವಣೆಯಲ್ಲಿ 83 ಸ್ಥಾನಗಳನ್ನು ಗೆದ್ದಿದೆ ಮತ್ತು ಈ ವಾರದಲ್ಲಿ ಅವರ ಸರ್ಕಾರ ಪ್ರಮಾಣವಚನ ಸ್ವೀಕರಿಸಿದೆ.
ಹೊಸದಾಗಿ ನೇಮಕಗೊಂಡ ಪ್ರತಿಪಕ್ಷದ ನಾಯಕ ಸಿಂಗ್ ಅವರು ಹೆಚ್ಚಿನ ಕರ್ತವ್ಯಗಳನ್ನು ಹೊಂದಿದ್ದಾರೆ ಮತ್ತು ಹೆಚ್ಚುವರಿ ಸವಲತ್ತುಗಳನ್ನು ಪಡೆಯುತ್ತಾರೆ ಎಂದು ಮೂಲಗಳು ವರದಿ ಮಾಡಿವೆ.
ಸಂಸತ್ತಿನಲ್ಲಿ ಸರ್ಕಾರದ ನಿಲುವು ಮತ್ತು ಕ್ರಮಗಳ ಪರಿಶೀಲನೆಯನ್ನು ಸಿಂಗ್ ಮುನ್ನಡೆಸುತ್ತಾರೆ ಮತ್ತು ಆಯೋಜಿಸುತ್ತಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಇದಲ್ಲದೆ, ಸಾರ್ವಜನಿಕ ಖಾತೆಗಳ ಸಮಿತಿಯಂತಹ ಆಯ್ದ ಸಮಿತಿಗಳಿಗೆ ವಿರೋಧ ಪಕ್ಷದ ಸದಸ್ಯರನ್ನು ನೇಮಕ ಮಾಡುವ ಕುರಿತ ವಿಷಯಕ್ಕೆ ಅವರನ್ನು ಸಂಪರ್ಕಿಸಲಾಗುತ್ತದೆ. ಅಧಿಕಾರಿಗಳ ಹೇಳಿಕೆಯ ಪ್ರಕಾರ, ಭಾರತೀಯ ಮೂಲದ ರಾಜಕಾರಣಿ ತನ್ನ ಹೊಸ ಪಾತ್ರಕ್ಕಾಗಿ ಭತ್ಯೆಯಾಗಿ ವಾರ್ಷಿಕ 2,79,025 ಡಾಲರ್ ಪ್ಯಾಕೇಜ್ ಸ್ವೀಕರಿಸುತ್ತಾರೆ.
When Parliament reopens, it will have 12 Opposition MPs. WP Secretary-General Pritam Singh has been designated as the Leader of the Opposition. I look fwd to working with our colleagues across the aisle to build a better & stronger Singapore. – LHL https://t.co/4ws0Xcb89M pic.twitter.com/3qiAkWjR0b
— leehsienloong (@leehsienloong) July 28, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.