ನವದೆಹಲಿ: 2022ರ ವೇಳೆಗೆ ಭಾರತದಲ್ಲಿ 44 ವಂದೇ ಭಾರತ್ ರೈಲುಗಳು ಸಿದ್ಧವಾಗಲಿದೆ, ಈ ಕಾರ್ಯದಲ್ಲಿ ಯಾವುದೇ ವಿಳಂಬ ಆಗುವುದಿಲ್ಲ ಎಂದು ರೈಲ್ವೆ ಖಚಿತಪಡಿಸಿದೆ ಎಂದು ವರದಿಗಳು ತಿಳಿಸಿವೆ.
2022ರಲ್ಲಿ ಕಾರ್ಯಾರಂಭ ಮಾಡಬೇಕಾಗಿರುವ ವಂದೇ ಭಾರತ್ ರೈಲುಗಳ ಕಾರ್ಯಾಚರಣೆ ವಿಳಂಬವಾಗಲಿದೆ ಎಂದು ಸುದ್ದಿಗಳು ಹರಿದಾಡಿದ್ದವು. ಆದರೆ ಈ ಸುದ್ದಿಗಳನ್ನು ರೈಲ್ವೆ ತಳ್ಳಿಹಾಕಿದ್ದು, ಮೂರು ವರ್ಷಗಳಲ್ಲಿ 44 ವಂದೇ ಭಾರತ ರೈಲುಗಳು ಕಾರ್ಯಾರಂಭ ಮಾಡಲಿದೆ ಎಂಬುದನ್ನು ಖಚಿತಪಡಿಸಿದೆ.
ರೈಲುಗಳನ್ನು ಒಂದೇ ರೈಲು ಘಟಕಗಳಲ್ಲಿ ಅಲ್ಲ, ಬದಲಾಗಿ ಮೂರು ರೈಲು ಘಟಕಗಳಲ್ಲಿ ಉತ್ಪಾದನೆ ಮಾಡಲಾಗುತ್ತಿದೆ. ಮುಂದಿನ ಮೂರು ವರ್ಷಗಳೊಳಗೆ ಅದು ರೈಲ್ವೇ ನೆಟ್ವರ್ಕ್ ಅನ್ನು ಸೇರಲಿದೆ ಎಂದು ರೈಲ್ವೆ ಮಂಡಳಿಯ ಮುಖ್ಯಸ್ಥ ವಿ.ಕೆ ಯಾದವ್ ಅವರು ತಿಳಿಸಿದ್ದಾರೆ.
ರೈಲ್ವೆ ಕೋಚ್ ಫ್ಯಾಕ್ಟರಿ ಕಪೂರ್ಥಾಲ, ಮಾರ್ಡನ್ ಕೋಚ್ ಫ್ಯಾಕ್ಟರಿ ರಾಯ್ಬರೇಲಿ, ಇಂಟೀಗ್ರಲ್ ಕೋಚ್ ಫ್ಯಾಕ್ಟರಿ ಚೆನ್ನೈ ಈ ಮೂರು ರೈಲ್ವೆ ಘಟಕಗಳಲ್ಲಿ ಏಕಕಾಲದಲ್ಲಿ ವಂದೇ ಭಾರತ್ ರೈಲುಗಳು ಉತ್ಪಾದನೆಯಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
“ರೈಲ್ವೆಯ ಮೂರು ಉತ್ಪಾದನಾ ಘಟಕಗಳು ಈ ರೈಲುಗಳನ್ನು ತಯಾರಿಸುತ್ತವೆ ಮತ್ತು ಇದರಿಂದ ಅವುಗಳ ಉತ್ಪಾದನೆಗೆ ತಗಲುವ ಸಾಕಷ್ಟು ಸಮಯ ಉಳಿತಾಯವಾಗುತ್ತದೆ. ಈ ಬಗೆಗಿನ ನಿರ್ಧಾರವನ್ನು ಕೆಲವು ತಿಂಗಳ ಹಿಂದೆ ತೆಗೆದುಕೊಳ್ಳಲಾಯಿತು. ಮುಂದಿನ ಎರಡು ಮೂರು ವರ್ಷಗಳಲ್ಲಿ 44 ರೈಲುಗಳು ಓಡಲಾರಂಭಿಸುತ್ತವೆ. ಟೆಂಡರ್ ಅಂತಿಮಗೊಂಡ ನಂತರ ನಿರ್ದಿಷ್ಟ ಟೈಮ್ಲೈನ್ ಲಭ್ಯವಾಗಲಿದೆ” ಎಂದು ಯಾದವ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.