ಬೆಂಗಳೂರು: ಆಗಸ್ಟ್ 3 ರಕ್ಷಾ ಬಂಧನ. ಅಲ್ಲೆಲ್ಲೋ ದೂರದಲ್ಲಿರುವ ಸಹೋದರರಿಗೆ ಹೇಗಪ್ಪಾ ರಕ್ಷೆಗಳನ್ನು ಕಳುಹಿಸಿಕೊಡುವುದು ಎಂಬ ಚಿಂತೆಯಲ್ಲಿದ್ದೀರಾ. ಹಾಗಿದ್ದರೆ ಇನ್ನು ಅಂತಹ ಚಿಂತೆಯನ್ನು ಬಿಟ್ಟು ಬಿಡಿ. ಬದಲಾಗಿ, ನೀವು ಕಳುಹಿಸಬೇಕೆಂದಿರುವ ರಕ್ಷೆ ಮತ್ತು ನಿಮ್ಮ ಸಹೋದರನಿಗೆ ತಿಳಿಸಬೇಕಾಗಿರುವ ಸಂದೇಶವನ್ನು ಆನ್ಲೈನ್ ಮೂಲಕ ಆರ್ಡರ್ ನೀಡಿ ಸ್ಪೀಡ್ ಪೋಸ್ಟ್ ಮೂಲಕ ಭಾರತದ ಯಾವುದೇ ಭಾಗಕ್ಕಾದರೂ ತಲುಪಿಸುವ ನಿಟ್ಟಿನಲ್ಲಿ ಇಂಡಿಯಾ ಪೋಸ್ಟ್ ಅನುಕೂಲವನ್ನು ಮಾಡಿಕೊಟ್ಟಿದೆ.
ಆನ್ಲೈನ್ ಮೂಲಕ ಯಾವುದೇ ರಕ್ಷೆಯನ್ನು ಆಯ್ಕೆ ಮಾಡುವ, ಸಂದೇಶಗಳನ್ನು ಆಯ್ಕೆ ಮಾಡುವ ಅಥವಾ ನಿಮ್ಮದೇ ಸಂದೇಶಗಳನ್ನು ರಚಿಸುವ, ನಿಮ್ಮ ಭಾವಚಿತ್ರಗಳನ್ನು ಅಪ್ಲೋಡ್ ಮಾಡುವ ಸೌಲಭ್ಯವನ್ನೂ ಇದರಲ್ಲಿ ನೀಡಲಾಗಿದ್ದು, ಉದ್ದೇಶಿತ ವ್ಯಕ್ತಿಗೆ ಈ ಸಂದೇಶ ಮತ್ತು ರಕ್ಷೆಯನ್ನು ತಲುಪಿಸುವ ಕೆಲಸವನ್ನು ಮಾಡಲಾಗುತ್ತದೆ ಎಂದು ಇಂಡಿಯಾ ಪೋಸ್ಟ್ ಮಾಹಿತಿ ನೀಡಿದೆ.
ಜೊತೆಗೆ ಗಡಿಯಲ್ಲಿ ದೇಶವನ್ನು ಕಾಪಾಡುವ ಕರ್ತವ್ಯದಲ್ಲಿ ನಿರತರಾಗಿರುವ ಯೋಧರಿಗೂ ಈ ಆನ್ಲೈನ್ ಸೇವೆಯ ಮೂಲಕ ರಕ್ಷಾ ಬಂಧನದ ಶುಭಾಶಯ ಮತ್ತು ರಕ್ಷೆಗಳನ್ನು ಕಳುಹಿಸುವ ಕೆಲಸವನ್ನು ಮಾಡಬಹುದಾಗಿದೆ ಎಂದೂ ಇದು ಮಾಹಿತಿ ನೀಡಿದೆ.
ಆನ್ಲೈನ್ ಮೂಲಕ 100 ರೂ. ಗಳನ್ನು ಪಾವತಿ ಮಾಡುವ ಮೂಲಕ ಈ ಸೇವೆಯ ಉಪಯೋಗವನ್ನು ಪಡೆಯಬಹುದಾಗಿದೆ. ಜೊತೆಗೆ ನಮ್ಮ ಪಾರ್ಸೆಲ್ ಎಲ್ಲಿಗೆ, ಹೇಗೆ ತಲುಪಿದೆ ಎಂಬುದರ ಕುರಿತಾಗಿ ತಿಳಿದುಕೊಳ್ಳುವುದಕ್ಕೂ ಇದರಲ್ಲಿ ಪೂರಕ ವ್ಯವಸ್ಥೆ ಮಾಡಲಾಗಿದ್ದು, ಸ್ಪೀಡ್ ಪೋಸ್ಟ್ ಟ್ರ್ಯಾಕಿಂಗ್ ಸಂಖ್ಯೆಯ ಮೂಲಕ ಕ್ಷಣ ಕ್ಷಣದ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದೂ ಸಂಸ್ಥೆ ತಿಳಿಸಿದೆ. ಉದ್ದೇಶಿತ ವ್ಯಕ್ತಿಗೆ ಅದನ್ನು ತಲುಪಿಸಿದ ಬಳಿಕ ಕಳುಹಿಸಿದವರಿಗೆ ಮಾಹಿತಿಯನ್ನು ನೀಡಲಾಗುತ್ತದೆ ಎಂದೂ ಸಂಸ್ಥೆ ಮಾಹಿತಿ ನೀಡಿದೆ.
https://karnatakapost.gov.in/Rakhi_Post/ ಇದಕ್ಕೆ ಕ್ಲಿಕ್ ಮಾಡಿ ರಕ್ಷೆಯನ್ನು ಆರ್ಡರ್ ಮಾಡಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.