ನವದೆಹಲಿ: ದೇಶದ ಭದ್ರತಾ ದೃಷ್ಟಿಯಿಂದ ಈ ಹಿಂದೆ 59 ಚೀನಾ ನಿರ್ಮಿತ ಆ್ಯಪ್ಗಳನ್ನು ನಿಷೇಧಿಸಿ ಕೆಲವು ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರ ಆದೇಶವನ್ನು ಹೊರಡಿಸಿತ್ತು. ಇದೀಗ ಈ ಪಟ್ಟಿಗೆ ಮತ್ತೆ 47 ಆ್ಯಪ್ಗಳನ್ನು ಸೇರಿಸಿದೆ. ಇದರಲ್ಲಿ ಹೆಚ್ಚಿನವು ಹಿಂದಿನ ನಿಷೇಧಿತ ಆ್ಯಪ್ಗಳ ಕ್ಲೋನ್ಗಳು ಎಂದು ಸರ್ಕಾರ ತಿಳಿಸಿದೆ.
ವರದಿಗಳ ಪ್ರಕಾರ, ಮತ್ತಷ್ಟು ಆ್ಯಪ್ಗಳನ್ನು ನಿಷೇಧದ ಸೇರಿಸುವ ಕುರಿತಂತೆ ಕೇಂದ್ರ ಸರ್ಕಾರ ಮಾಹಿತಿ ನೀಡಿತ್ತು. ಸುಮಾರು 57 ಅಪ್ಲಿಕೇಶನ್ಗಳಿಗೆ ಸಂಬಂಧಿಸಿದಂತೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಪಟ್ಟಿಯೊಂದನ್ನು ಸಿದ್ಧಪಡಿಸಿರುವುದಾಗಿಯೂ ತಿಳಿಸಿತ್ತು.
ಈ ಪಟ್ಟಿಯಲ್ಲಿ ಗುರುತಿಸಲಾದ ಅಪ್ಲಿಕೇಶನ್ಗಳು ಈ ಮೊದಲು ದೇಶದಲ್ಲಿ ನಿಷೇಧಿಸಲಾದ ಚೀನಾ ಮೂಲದ ಅಪ್ಲಿಕೇಶನ್ಗಳ ಕ್ಲೋನ್ಗಳಾಗಿ, ಅವುಗಳ ಲಕ್ಷಣಗಳನ್ನೇ ಹೊಂದಿರುವಂತಹವುಗಳಾಗಿದೆ ಎಂದೂ ಇಲಾಖೆ ಮಾಹಿತಿ ನೀಡಿದೆ. ಟಿಕ್ಟಾಕ್ ಲೈಟ್, ಹಲೋ ಲೈಟ್, ಶೇರ್ ಇಟ್ ಲೈಟ್, ಬಿಗೋ ಲೈಟ್ ನಂತಹ ಸುಮಾರು 47 ಆ್ಯಪ್ಗಳಿಗೆ ದೇಶದಲ್ಲಿ ನಿಷೇಧ ಹೇರಲಾಗುವುದಾಗಿಯೂ ಇಲಾಖೆ ತಿಳಿಸಿದೆ. ಈ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಇಲಾಖೆ ತಿಳಿಸಿದ್ದು, ಈ ಎಲ್ಲಾ ಆ್ಯಪ್ಗಳೂ ಹಿಂದೆ ಬ್ಯಾನ್ ಆಗಿರುವ ಆ್ಯಪ್ಗಳನ್ನೇ ಹೋಲುತ್ತವೆ ಎಂದೂ ತಿಳಿಸಿದೆ.
ಇನ್ನು ಈಗಾಗಲೇ ಭಾರತದಲ್ಲಿ ನಿಷೇಧಕ್ಕೊಳಪಟ್ಟಿರುವ ಆ್ಯಪ್ಗಳ ಪೈಕಿ ಕೆಲವು ಆ್ಯಪ್ಗಳ ಇಂದಿಗೂ ಕಾರ್ಯ ನಿರ್ವಹಿಸುತ್ತಿರುವ ಮಾಹಿತಿಗಳು ಸಿಕ್ಕಿವೆ. ಅವುಗಳನ್ನು ಆ್ಯಪ್ ಸ್ಟೋರ್ ನಿಂದ ಹೊರಗಿಡಲಾಗಿದೆ ಎಂದೂ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಈ 47 ಅಪ್ಲಿಕೇಶನ್ಗಳ ಜೊತೆಗೆ ಇನ್ನೂ 250 ರಷ್ಟು ಅಪ್ಲಿಕೇಶನ್ಗಳು ರಾಷ್ಟ್ರೀಯ ಭದ್ರತೆಗೆ ಹಾನಿಯುಂಟು ಮಾಡುವ ಬಗ್ಗೆ ತಿಳಿದು ಬಂದಿದ್ದು ಅವುಗಳ ಪಟ್ಟಿಯನ್ನೂ ಸಿದ್ಧಪಡಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.