ನವದೆಹಲಿ: ಕೊನೆಗೂ ಭಾರತದ ಮಹತ್ವದ ನಿರೀಕ್ಷೆ ಪೂರ್ಣಗೊಳ್ಳುವ ಸಮಯ ಆಗಮಿಸಿದೆ. ಭಾರತದ ರಕ್ಷಣಾ ಸಾಮರ್ಥ್ಯವನ್ನು ಇಮ್ಮಡಿಗೊಳಿಸುವ ಸಾಮರ್ಥ್ಯವನ್ನು ಹೊಂದಿರುವ ರಫೇಲ್ ಯುದ್ಧ ವಿಮಾನ ಫ್ರಾನ್ಸಿನಿಂದ ಭಾರತಕ್ಕೆ ಹೊರಟಿದ್ದು, ಬುಧವಾರ ಭಾರತದ ಭೂಮಿಗೆ ಬಂದಿಳಿಯಲಿದೆ.
ಮೊದಲ ಬ್ಯಾಚ್ನ ರಫೇಲ್ ಯುದ್ಧ ವಿಮಾನ ಇಂದು ಫ್ರಾನ್ಸಿನಿಂದ ಹೊರಟಿದೆ, ಜುಲೈ 29ಕ್ಕೆ ಭಾರತವನ್ನು ತಲುಪಲಿದೆ. ಅಂದೇ ಯುದ್ಧ ವಿಮಾನವನ್ನು ಅಧಿಕೃತವಾಗಿ ಸೇನೆಗೆ ಸೇರ್ಪಡೆಗೊಳಿಸಲಾಗುತ್ತದೆ. ಭಾರತೀಯ ವಾಯುಸೇನೆಯಲ್ಲಿ ಅದು ಕಾರ್ಯಾಚರಣೆಯನ್ನು ಆರಂಭಿಸಲಿದೆ.
ಫ್ರಾನ್ಸ್ನಿಂದ 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿ ಮಾಡಲು 2016 ರಲ್ಲಿ ಅಂತರ್ ಸರ್ಕಾರಿ ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು. ಅದರ ಮೊದಲ ಬ್ಯಾಚ್ನ ಐದು ವಿಮಾನಗಳು ಈಗ ಭಾರತಕ್ಕೆ ಹೊರಟಿವೆ.
ಈ ವಿಮಾನವು ಭಾರತಕ್ಕೆ ಆಗಮಿಸುವಾಗ ಯುನೈಟೆಡ್ ಅರಬ್ ಎಮಿರೇಟ್ಸ್ನ ಫ್ರೆಂಚ್ ಏರ್ಬೇಸ್ನಲ್ಲಿ ಮಿಡ್ ಏರ್ ಭೂಮಿಯಲ್ಲಿ ಇಂಧನ ತುಂಬಿಸಲಿದೆ.
ಈ ಬಗ್ಗೆ ಟ್ವಿಟ್ ಮಾಡಿರುವ ಫ್ರಾನ್ಸಿನಲ್ಲಿನ ಭಾರತೀಯ ರಾಯಭಾರ ಕಛೇರಿ, “ಫ್ರಾನ್ಸ್ನ ಭಾರತೀಯ ರಾಯಭಾರಿ ರಫೇಲ್ನ ಭಾರತೀಯ ಪೈಲೆಟ್ಗಳೊಂದಿಗೆ ಸಂವಾದ ನಡೆಸಿದ್ದಾರೆ ಮತ್ತು ಭಾರತಕ್ಕೆ ಸುರಕ್ಷಿತ ಹಾರಾಟಕ್ಕೆ ಶುಭ ಕೋರಿದ್ದಾರೆ” ಎಂದಿದೆ.
Bon Voyage: Indian Ambassador to #France interacts with the Indian pilots of the Rafale. Congratulates and wishes them a safe flight to India with a single hop. #ResurgentIndia #NewIndia #Rafale@IAF_MCC @MeaIndia @rajnathsingh @Dassault_OnAir @DefenceMinIndia @PMOIndia pic.twitter.com/jk3IWD9tYU
— India in France (@Indian_Embassy) July 27, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.