ನವದೆಹಲಿ: ಕೇಂದ್ರ ಮೀಸಲು ಪೊಲೀಸ್ ಪಡೆ (CRPF))ಯ 82ನೇ ಸಂಸ್ಥಾಪನಾ ದಿನದಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅದರ ಸಿಬ್ಬಂದಿಗೆ ಶುಭಾಶಯ ಕೋರಿದ್ದಾರೆ.
ನಮ್ಮ ರಾಷ್ಟ್ರವನ್ನು ಸುರಕ್ಷಿತವಾಗಿಡುವಲ್ಲಿ ಸಿಆರ್ಪಿಎಫ್ ಮುಂಚೂಣಿಯಲ್ಲಿದೆ ಎಂದು ಟ್ವಿಟರ್ನಲ್ಲಿ ಪ್ರಧಾನಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
“ಅಮೋಘ ಪಡೆಯ 82ನೇ ಸಂಸ್ಥಾಪನಾ ದಿನದಂದು ಎಲ್ಲಾ ಸಿಆರ್ಪಿಎಫ್ ಸಿಬ್ಬಂದಿಗೆ ಶುಭಾಶಯಗಳು. ನಮ್ಮ ರಾಷ್ಟ್ರವನ್ನು ಸುರಕ್ಷಿತವಾಗಿರಿಸುವುದರಲ್ಲಿ ಸಿಆರ್ಪಿಎಫ್ ಮುಂಚೂಣಿಯಲ್ಲಿದೆ. ಈ ಪಡೆಯ ಧೈರ್ಯ ಮತ್ತು ವೃತ್ತಿಪರತೆಯನ್ನು ವ್ಯಾಪಕವಾಗಿ ಪ್ರಶಂಸಿಸಲಾಗಿದೆ. ಮುಂಬರುವ ವರ್ಷಗಳಲ್ಲಿ ಸಿಆರ್ಪಿಎಫ್ ಇನ್ನೂ ಹೆಚ್ಚಿನ ಎತ್ತರವನ್ನು ಸಾಧಿಸಲಿ” ಎಂದು ಅವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಕೂಡ ಸಿಆರ್ಪಿಎಫ್ಗೆ ಶುಭಾಶಯಗಳನ್ನು ತಿಳಿಸಿದ್ದು, ಸಿಆರ್ಪಿಎಫ್ ಕರ್ತವ್ಯ ಮತ್ತು ರಾಷ್ಟ್ರೀಯ ಭದ್ರತೆಯ ಬಗೆಗಿನ ಸಮರ್ಪಣೆ ಮತ್ತು ಬದ್ಧತೆಗೆ ಸಮಾನಾರ್ಥಕವಾಗಿದೆ ಎಂದು ಹೇಳಿದರು.
“ರಾಷ್ಟ್ರಕ್ಕೆ ಶಾಂತಿಪಾಲಕರಾದ ಸಿಆರ್ಪಿಎಫ್ ತನ್ನ 82 ಸ್ಥಾಪನಾ ದಿನವನ್ನು ಆಚರಿಸುತ್ತಿದೆ. ಸಿಆಆರ್ಪಿಎಫ್ ಕರ್ತವ್ಯ ಮತ್ತು ರಾಷ್ಟ್ರೀಯ ಭದ್ರತೆಯ ಬಗೆಗಿನ ಸಮರ್ಪಣೆ ಮತ್ತು ಬದ್ಧತೆಗೆ ಸಮಾನಾರ್ಥಕವಾಗಿದೆ. ಈ ಸಂದರ್ಭದಲ್ಲಿ ಸಿಬ್ಬಂದಿ ಮತ್ತು ಅವರ ಕುಟುಂಬಗಳನ್ನು ನಾನು ಅಭಿನಂದಿಸುತ್ತೇನೆ” ಎಂದು ನಾಯ್ಡು ಟ್ವೀಟ್ ಮಾಡಿದ್ದಾರೆ.
“ಸಿಆರ್ಪಿಎಫ್ ಜುಲೈ 27, 1939 ರಂದು ಕ್ರೌನ್ ರೆಪ್ರೆಸೆಂಟೇಟಿವ್ ಪೋಲಿಸ್ ಆಗಿ ಅಸ್ತಿತ್ವಕ್ಕೆ ಬಂದಿತು. ಇದು ಡಿಸೆಂಬರ್ 28, 1949 ರಂದು ಸಿಆರ್ಪಿಎಫ್ ಕಾಯ್ದೆ ಜಾರಿಗೆ ಬಂದ ಮೇಲೆ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್ ) ಆಯಿತು. ಇದು 80 ವರ್ಷಗಳ ಅದ್ಭುತ ಇತಿಹಾಸವನ್ನು ಪೂರ್ಣಗೊಳಿಸಿದೆ. ಸಿಆರ್ಪಿಎಫ್ ದೇಶದ ಆಂತರಿಕ ಭದ್ರತಾ ಸನ್ನಿವೇಶವನ್ನು ಭದ್ರಪಡಿಸುವ ಆದೇಶವನ್ನು ಹೊಂದಿದೆ.
Greetings to all @crpfindia personnel on the 82nd Raising Day of this outstanding Force. CRPF is at the forefront of keeping our nation safe. The courage and professionalism of this force are widely admired.
May the CRPF achieve even greater heights in the coming years.
— Narendra Modi (@narendramodi) July 27, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.