ಕಾಸರಗೋಡು: ಕೊರೋನಾ ಸೋಂಕಿಗೆ ಚಿಕಿತ್ಸೆ ನೀಡಲು ಕೇರಳ ಸರ್ಕಾರಕ್ಕೆ ನೆರವು ನೀಡಿರುವ ಭಾರತದ ಪ್ರತಿಷ್ಠಿತ ಸಂಸ್ಥೆ ಟಾಟಾ ಗ್ರೂಪ್ಸ್, ಕಾಸರಗೋಡಿನ ತೆಕ್ಕಿಲ್ ಗ್ರಾಮದಲ್ಲಿ 540 ಹಾಸಿಗೆಗಳನ್ನೊಳಗೊಂಡ, ಎಲ್ಲಾ ಸೌಲಭ್ಯಗಳನ್ನು ಒಳಗೊಂಡಿರುವ ಸುಸಜ್ಜಿತ ಆಸ್ಪತ್ರೆಯೊಂದನ್ನು ನಿರ್ಮಿಸುತ್ತಿದೆ.
ಈ ಆಸ್ಪತ್ರೆಯ ಕಾಮಗಾರಿ ಕೊನೆಯ ಹಂತದಲ್ಲಿದ್ದು, ಜುಲೈ 30 ರಂದು ಈ ಆಸ್ಪತ್ರೆಯನ್ನು ರೋಗಿಗಳಿಗೆ ಚಿಕಿತ್ಸೆ ನೀಡಲು ಸರ್ಕಾರದ ಸುಪರ್ದಿಗೆ ಹಸ್ತಾಂತರಿಸುವುದಾಗಿಯೂ ಸಂಬಂಧಪಟ್ಟ ಮೂಲಗಳು ಮಾಹಿತಿ ನೀಡಿದೆ. ಈ ಆಸ್ಪತ್ರೆಯಲ್ಲಿ 128 ಕೊಠಡಿಗಳಿದ್ದು, 15 ಕೋಟಿ ರೂ. ವೆಚ್ಚದಲ್ಲಿ ಕೇವಲ 3 ತಿಂಗಳಿನಲ್ಲಿಯೇ ನಿರ್ಮಾಣ ಮಾಡಲಾಗಿದೆ ಎಂದೂ ಮೂಲಗಳು ತಿಳಿಸಿವೆ.
ಐದು ಎಕರೆ ಪ್ರದೇಶದಲ್ಲಿ ಈ ಆಸ್ಪತ್ರೆಯನ್ನು ನಿರ್ಮಿಸಲಾಗಿದ್ದು, ಜಾಗ, ನೀರು, ಎಲೆಕ್ಟ್ರಿಸಿಟಿ ಮೊದಲಾದ ಎಲ್ಲಾ ಸೌಲಭ್ಯಗಳನ್ನು ಸರ್ಕಾರ ಒದಗಿಸಿ ಕೊಟ್ಟಿದೆ. ಆಸ್ಪತ್ರೆಯ ಎಲ್ಲಾ ಯುನಿಟ್ಗಳನ್ನು ಟಾಟಾ ಸಂಸ್ಥೆ ನಿರ್ಮಿಸಿ ಕೊಡುವ ಜವಾಬ್ದಾರಿ ವಹಿಸಿದೆ. ಈ ಆಸ್ಪತ್ರೆಯಲ್ಲಿ 3 ವಲಯಗಳಿದ್ದು, 1 ಮತ್ತು 3 ನೇ ಝೋನ್ ಗಳಲ್ಲಿ ಕ್ವಾರಂಟೈನ್ ಮತ್ತು 2 ನೇ ವಲಯದಲ್ಲಿ ಐಸೋಲೇಷನ್ ಪ್ರಕ್ರಿಯೆಗೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಪ್ರತಿ ಯುನಿಟ್ ಗಳು 40 ಅಡಿ ಉದ್ದ ಹಾಗೂ 10 ಅಡಿ ಅಗಲವಾಗಿವೆ. ವೈದ್ಯಕೀಯ ಸಿಬ್ಬಂದಿಗಳಿಗೆ ಪ್ರತ್ಯೇಕ ಕೊಠಡಿಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.