ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಉಪಕ್ರಮವಾದ ಮೈಗೌ ಆರಂಭಗೊಂಡು ಇಂದಿಗೆ ಆರು ವರ್ಷಗಳು ಪೂರೈಸಿವೆ.
ಮೈಗೌ ಭಾರತೀಯ ನಾಗರಿಕರು ತಮ್ಮ ದೇಶದ ಆಡಳಿತ ಮತ್ತು ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಭಾಗವಹಿಸುವುದನ್ನು ಉತ್ತೇಜಿಸಲು ಮೋದಿ ಸರ್ಕಾರವು ಸ್ಥಾಪಿಸಿದ ನಾಗರಿಕ ತೊಡಗಿಸಿಕೊಳ್ಳುವಿಕೆ ವೇದಿಕೆಯಾಗಿದೆ.ನಾಗರಿಕರಿಂದ ಆಡಳಿತ ವಿಚಾರಗಳನ್ನು ಕ್ರೌಡ್ಸೋರ್ಸ್ ಮಾಡಲು ಒಂದು ಸಾಮಾನ್ಯ ವೇದಿಕೆಯನ್ನು ಭಾರತೀಯ ನಾಗರಿಕರಿಗೆ ಒದಗಿಸುವ ಗುರಿಯನ್ನು ಇದು ಹೊಂದಿದೆ.
ಈ ಉಪಕ್ರಮ ಆರು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಪ್ರತಿಯೊಬ್ಬರ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ. ಗರಿಷ್ಠ ಮತ್ತು ಸಕ್ರಿಯ ಭಾಗವಹಿಸುವಿಕೆಯಿಂದ ಸರ್ಕಾರದ ಮೈಗೌ ಪ್ರಯತ್ನವನ್ನು ಶ್ರೀಮಂತಗೊಳಿಸಿದ ಪ್ರತಿಯೊಬ್ಬರ ಪ್ರಯತ್ನವನ್ನು ಶ್ಲಾಘಿಸುತ್ತೇನೆ ಎಂದು ಮೋದಿ ಹೇಳಿದ್ದಾರೆ.
“ಮೈಗೌವ್ ಉಪಕ್ರಮವು ಇಂದು 6 ವರ್ಷಗಳನ್ನು ಪೂರೈಸಿದೆ. ನಾಗರಿಕ ಕೇಂದ್ರಿತ ವೇದಿಕೆಯನ್ನು ಸರ್ಕಾರದೊಂದಿಗೆ ಸಂಪರ್ಕ ಸಾಧಿಸಲು ಜನರನ್ನು ಸಶಕ್ತಗೊಳಿಸುವ ಉದ್ದೇಶದಿಂದ ಮತ್ತು ದೇಶದಲ್ಲಿ ಉತ್ತಮ ಆಡಳಿತಕ್ಕೆ ಸಹಕಾರಿಯಾಗುವ ಉದ್ದೇಶದಿಂದ ಇದನ್ನು ಪ್ರಾರಂಭಿಸಲಾಯಿತು. ಭಾಗವಹಿಸುವ ಮೂಲಕ ಆಡಳಿತವನ್ನು ಆಚರಿಸುವ ಗಮನಾರ್ಹ ವೇದಿಕೆಯಾಗಿ ಮೈಗೌವ್ ಹೊರಹೊಮ್ಮಿದೆ” ಎಂದು ಮೋದಿಯವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
Today, as we mark #6YearsofMyGov, I appreciate all those across India who have enriched @mygovindia by their active participation.
MyGov has emerged as a noteworthy forum that celebrates participative governance.
Do keep contributing! https://t.co/Ef3Ai8LLra
— Narendra Modi (@narendramodi) July 26, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.