ನವದೆಹಲಿ: ಕೋವಿಡ್-19 ಭಾರತದಲ್ಲಿ ಅವಾಂತರಗಳನ್ನು ಸೃಷ್ಟಿಸತೊಡಗಿದಾಗಿನಿಂದ ದೇಶದ ವಿವಿಧ ನಗರಗಳಲ್ಲಿರುವ ಐಐಟಿ ಸಂಸ್ಥೆಯ ಸಂಶೋಧಕರು ಕೊರೋನಾ ನಿಯಂತ್ರಣ, ಚಿಕಿತ್ಸೆಗೆ ಸಂಬಂಧಿಸಿದಂತೆ ಅನೇಕ ವಿಚಾರಗಳನ್ನು ಅಭಿವೃದ್ಧಿ ಮಾಡುತ್ತಲೇ ಬಂದಿದ್ದಾರೆ. ಪ್ರಸ್ತುತ ಕೊರೋನಾ ಲಕ್ಷಣಗಳನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚುವ ರಿಸ್ಟ್ ವಾಚ್ ನಂತಹ ಕೈಗೆ ಕಟ್ಟಿಕೊಳ್ಳಬಹುದಾದ ಉಪಕರಣವೊಂದನ್ನು ಐಐಟಿ ಮದ್ರಾಸಿನ ಹಳೆ ವಿದ್ಯಾರ್ಥಿಗಳು ಅಭಿವೃದ್ಧಿ ಮಾಡಿದ್ದಾರೆ.
ಆಗಸ್ಟ್ ವೇಳೆಗೆ ಈ ಉಪಕರಣ ಮಾರುಕಟ್ಟೆಯಲ್ಲಿ ಲಭ್ಯವಾಗಲಿರುವ ಸಾಧ್ಯತೆಗಳನ್ನು ವ್ಯಕ್ತಪಡಿಸಿರುವ ಈ ವಿದ್ಯಾರ್ಥಿಗಳ ತಂಡ, 22 ಕೋಟಿ ರೂ. ಸಾಲ ಪಡೆದು ವಾರಂಗಲ್ ನ ಎನ್ಐಟಿ ಸಂಸ್ಥೆಯ ಹಳೆ ವಿದ್ಯಾರ್ಥಿಗಳನ್ನು ಕೂಡಿಕೊಂಡು ಹೊಸ ಉದ್ಯಮವೊಂದನ್ನು ಆರಂಭಿಸಿ ಈ ಹೊಸ ಉಪಕರಣವನ್ನು ಕಂಡುಹಿಡಿದಿದ್ದಾರೆ. ಸುಮಾರು 70 ದೇಶಗಳಲ್ಲಿ ಈ ಹೊಸ ರಿಸ್ಟ್ ಬ್ಯಾಂಡ್ ಅನ್ನು ಮಾರಾಟ ಮಾಡುವುದಾಗಿಯೂ ಸಂಶೋಧಕರ ತಂಡ ಮಾಹಿತಿ ನೀಡಿದೆ.
ಈ ವರ್ಷಕ್ಕೆ ಸಂಬಂಧಿಸಿದಂತೆ ಸುಮಾರು 2 ಲಕ್ಷ ರಿಸ್ಟ್ ಬ್ಯಾಂಡ್ ಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದೆ. 2022 ರ ವೇಳೆಗೆ 10 ಲಕ್ಷ ಗಳಷ್ಟು ಉಪಕರಣಗಳನ್ನು ಜನರಿಗೆ ತಲುಪಿಸುವ ಗುರಿಯನ್ನು ಹೊಂದಿರುವುದಾಗಿಯೂ ಈ ಯುವ ಸಂಶೋಧಕರ ತಂಡ ಮಾಹಿತಿ ನೀಡಿದೆ. ಈ ಉಪಕರಣಕ್ಕೆ 3,500 ರೂ. ಬೆಲೆಯನ್ನು ನಿಗದಿ ಮಾಡಲಾಗಿರುವುದಾಗಿಯೂ ಸಂಶೋಧಕರ ತಂಡ ಮಾಹಿತಿ ನೀಡಿದೆ.
ಸೆನ್ಸಾರ್ ಚಾಲಿತ ಈ ಸಾಧನ ಬಳಕೆದಾರನ ಎದೆ ಬಡಿತ, ದೇಹದ ಉಷ್ಣಾಂಶ ಮತ್ತು ರಕ್ತದಲ್ಲಿನ ಆಮ್ಲಜನಕದ ಶುದ್ಧತೆಯನ್ನು ಪರೀಕ್ಷಿಸುತ್ತಲೇ ಇರುತ್ತದೆ. ಇದನ್ನು ಮ್ಯೂಸ್ ಹೆಲ್ತ್ ಆ್ಯಪ್ ಮೂಲಕ ಮೊಬೈಲ್ ಗೂ ಕನೆಕ್ಟ್ ಮಾಡಬಹುದಾಗಿದ್ದು, ಆ ಮೂಲಕವೂ ಆರೋಗ್ಯ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಈ ರಿಸ್ಟ್ ಬ್ಯಾಂಡ್ ನ ಬಳಕೆದಾರರು ಕಂಟೈನ್ಮೆಂಟ್ ವಲಯಕ್ಕೆ ಪ್ರವೇಶಿಸಿದರೆ, ಇದು ಆರೋಗ್ಯ ಸೇತು ಆ್ಯಪ್ ಮೂಲಕ ನೋಟಿಫಿಕೇಶನ್ ಕಳುಹಿಸುತ್ತದೆ. ಆ ಮೂಲಕವೂ ಬಳಕೆ ಮಾಡುವಾತನಿಗೆ ಅಲರ್ಟ್ ಆಗಿರುವಂತೆ ಸೂಚಿಸುವ ಕೆಲಸವನ್ನು ಇದು ಮಾಡಲಿದ್ದು, ಕೊರೋನಾ ನಿಯಂತ್ರಣಕ್ಕೆ ಇದು ಪೂರಕವಾಗಿ ಕೆಲಸ ಮಾಡಲಿದೆ ಎಂಬುದು ಸಂಶೋಧನಾ ತಂಡದ ಅಭಿಪ್ರಾಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.