ಹ್ಯೂಸ್ಟನ್: ನಾಲ್ಕು ದಶಕಗಳ ಬಳಿಕ ಇದೀಗ ಅಮೆರಿಕದ ಹ್ಯೂಸ್ಟನ್ ಪ್ರದೇಶದಲ್ಲಿದ್ದ ಚೀನಾದ ಕನ್ಸುಲೆಟ್ ಕಛೇರಿಯನ್ನು ಅಧಿಕೃತವಾಗಿ ಮುಚ್ಚಲಾಗಿದೆ.
ಕೊರೋನಾ ಸೋಂಕು ಚೀನಾದಿಂದಲೇ ಜಗತ್ತಿಗೆ ವ್ಯಾಪಿಸಿದ್ದು, ಅದನ್ನು ಚೀನಾ ನಿರ್ವಹಣೆ ಮಾಡಿರುವ ರೀತಿ ಮತ್ತು ಹಾಂಕಾಂಗ್ ಅನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಚೀನಾ ಅನುಷ್ಠಾನಕ್ಕೆ ತಂದ ಹೊಸ ಕಾಯ್ದೆಯ ಬಳಿಕ ಉಭಯ ದೇಶಗಳ ನಡುವಿನ ಮನಸ್ಥಾಪ ಹೆಚ್ಚಾಗಿದೆ. ಈ ಎಲ್ಲಾ ಕಾರಣಗಳಿಂದಲೇ ಈ ಕಛೇರಿ ಮುಚ್ಚಲ್ಪಟ್ಟಿದೆ ಎಂಬುದಾಗಿಯೂ ಮೂಲಗಳು ಮಾಹಿತಿ ನೀಡಿವೆ.
72 ಗಂಟೆಗಳಲ್ಲಿಯೇ ಈ ಕಛೇರಿಯನ್ನು ಮುಚ್ಚಬೇಕು ಎಂದು ಚೀನಾ ದೇಶಕ್ಕೆ ಅಮೆರಿಕಾ ಆದೇಶಿಸಿತ್ತು. ಗೂಡಾಚಾರಿಕೆಗೂ ಈ ಕಛೇರಿ ಹೆಸರುವಾಸಿಯಾಗಿತ್ತು. ಬೌದ್ಧಿಕ ಆಸ್ತಿ ಹಕ್ಕು ಕಳ್ಳತನಕ್ಕೆ ಸಂಬಂಧಿಸಿದಂತೆಯೂ ಈ ಕಛೇರಿ ಕೇಂದ್ರ ಸ್ಥಾನವಾಗಿ ಗುರುತಿಸಿಕೊಂಡಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಅಮೆರಿಕಾ ಮತ್ತು ಚೀನಾದ ಸಂಬಂಧ ತೀವ್ರ ಸ್ವರೂಪದಲ್ಲಿ ಹದಗೆಟ್ಟಿದೆ. ಅಮೆರಿಕಾ ಮಾತ್ರವಲ್ಲದೇ ಭಾರತದ ಜೊತೆಗಿನ ಸಂಬಂಧವನ್ನೂ ಚೀನಾ ಹಾಳು ಮಾಡಿಕೊಂಡಿದೆ. ಜಗತ್ತಿನ ನಾನಾ ದೇಶಗಳು ಕೊರೋನಾವೈರಸ್ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದಂತೆ ಚೀನಾದ ವಿರುದ್ಧ ಬಹಿರಂಗ ಆಕ್ರೋಶವನ್ನು ಹೊರ ಹಾಕುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.